‘ಚಾ. ಪೇಟೆ ಅಳಿಯ.. ಮೈಸೂರು ಮಗ ಅಂತಾರೆ.. ಎಲ್ಲಿ ನಿಲ್ತಾರಂತ ಕೊನೆವರೆಗೂ ಗೊತ್ತಾಗಲ್ಲ

‘ಚಾ. ಪೇಟೆ ಅಳಿಯ.. ಮೈಸೂರು ಮಗ ಅಂತಾರೆ.. ಎಲ್ಲಿ ನಿಲ್ತಾರಂತ ಕೊನೆವರೆಗೂ ಗೊತ್ತಾಗಲ್ಲ

ಬೆಂಗಳೂರು: ನಾನು ಚಾಮರಾಜಪೇಟೆ ಪೇಟೆ ಅಳಿಯ ಎಂಬ ಸಿದ್ದರಾಮಯ್ಯನವರ ದಿಢೀರ್ ಹೇಳಿಕೆಗೆ ಸಂಬಂಧ ಪಟ್ಟಂತೆ ಮಾಜಿ ಸಚಿವ ಜಿ.ಟಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದರಾಮಯ್ಯ ಚಾಮರಾಜಪೇಟೆಗೆ ಬಂದಾಗ ಚಾಮರಾಜಪೇಟೆ ಅಳಿಯ ಅಂತಾರೆ. ಮೈಸೂರಿಗೆ ಬಂದಾಗ ಮೈಸೂರು ಮಗ ಅಂತಾರೆ
ಜಮೀರ್ ಅಹಮ್ಮದ್ ಅಭಿಮಾನದಿಂದ ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ. ಸ್ವತಃ ಅವರೇ ಇನ್ನೂ ನಿರ್ಧಾರ ಮಾಡಿಲ್ಲ. ಹಾಗಾಗಿ ಯಾರು ಯಾವ ಕ್ಷೇತ್ರದಲ್ಲಿ ನಿಲ್ತಾರೆ ಅಂತಾ ಹೇಳೋಕೆ ಆಗೋದಿಲ್ಲ. ಚುನಾವಣೆಯ ಕೊನೆಯ ಕ್ಷಣದವರೆಗೂ ಗೊತ್ತಾಗೋದಿಲ್ಲ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಬದಾಮಿಯಿಂದ ಸ್ಪರ್ಧಿಸ್ತಾರೆ ಅಂತಾ ಯಾರಿಗೆ ಗೊತ್ತಿತ್ತು..? ಕೊನೆಯ ಕ್ಷಣದಲ್ಲಿ ಅಲ್ಲಿಗೆ ಹೋಗಿ ಸ್ಪರ್ಧೆ ಮಾಡಲಿಲ್ಲವೇ ? ಅದೇ ಕಾರಣಕ್ಕೆ ಈಗಲೇ ಯಾವ ಕ್ಷೇತ್ರ ಅಂತಾ ಹೇಳೋಕೆ ಆಗೋದಿಲ್ಲ.. ಮುಖ್ಯಮಂತ್ರಿಗಳನ್ನೂ ಅಷ್ಟೇ ಕೊನೆಯ ಕ್ಷಣದವರೆಗೆ ಹೇಳಲು ಆಗೋದಿಲ್ಲ ಅಂತ ಹೇಳಿದ್ರು.

ಇನ್ನು, ಚಾಮರಾಜಪೇಟೆಗೆ ಸಿದ್ದರಾಮಯ್ಯ ಜೊತೆ ಜಿಟಿಡಿ ಭೇಟಿ ನೀಡುತ್ತಿದ್ದ ವಿಚಾರದ ಬಗ್ಗೆಯೂ ಮತಾಡಿದ ಅವ್ರು, ಹೌದು.. ನಾನು ಕೂಡ ಚಾಮರಾಜಪೇಟೆಗೆ ಹೋಗುತ್ತಿದ್ದೆ. ಸಿದ್ದರಾಮಯ್ಯ ಮಾವ ಎಂಜಿನಿಯರ್ ಆಗಿದ್ದರು. ನಾವೆಲ್ಲಾ ಅವರ ಮನೆಗೆ ಆಗಾಗ್ಗೆ ಹೋಗುತ್ತಿದ್ದೆವು. ಸಿದ್ದರಾಮಯ್ಯ ಶಾಸಕರಾಗಿದ್ದ ಆರಂಭದ ದಿನಗಳಲ್ಲಿ ಅವರ ಮಾವನ ಮನೆಗೆ ಹೋಗುತ್ತಿದ್ದೆವು, ಯಾವಾಗಲೂ ಅವರ ಮನೆಯಲ್ಲಿ ಪ್ರತಿನಿತ್ಯ ನಾನ್ ವೆಜ್ ಮಾಡುತ್ತಿದ್ದರು. ಬೆಳಗ್ಗೆ ಇಡ್ಲಿ, ರುಚಿಯಾದ ಬೋಟಿ ಮಾಡುತ್ತಿದ್ದರು ಅಂತ ಸಿದ್ದು ಮಾವನ ಮನೆಯ ಭೇಟಿ ಬಗ್ಗೆ ಮೆಲುಕು ಹಾಕಿದ್ರು.

The post ‘ಚಾ. ಪೇಟೆ ಅಳಿಯ.. ಮೈಸೂರು ಮಗ ಅಂತಾರೆ.. ಎಲ್ಲಿ ನಿಲ್ತಾರಂತ ಕೊನೆವರೆಗೂ ಗೊತ್ತಾಗಲ್ಲ appeared first on News First Kannada.

Source: newsfirstlive.com

Source link