ಚಿಕ್ಕಬಳ್ಳಾಪುರದಲ್ಲಿ ಈ ಬಾರಿ ವಿಪರೀತ ಮಳೆ: ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿಹೋದ ಗ್ರಾಮ ಪಂಚಾಯತ್ ಸದಸ್ಯ | gram panchayat member washed away in water in chikkaballapur taluk


ಚಿಕ್ಕಬಳ್ಳಾಪುರದಲ್ಲಿ ಈ ಬಾರಿ ವಿಪರೀತ ಮಳೆ:  ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿಹೋದ ಗ್ರಾಮ ಪಂಚಾಯತ್ ಸದಸ್ಯ

ಚಿಕ್ಕಬಳ್ಳಾಪುರದಲ್ಲಿ ಈ ಬಾರಿ ವಿಪರೀತ ಮಳೆ: ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿಹೋದ ಗ್ರಾ.ಪಂ. ಸದಸ್ಯ

ಚಿಕ್ಕಬಳ್ಳಾಪುರ: ಬರದ ನಾಡು ಚಿಕ್ಕಬಳ್ಳಾಪುರದಲ್ಲಿ ಈ ಬಾರಿ ವಿಪರೀತ ಎನಿಸುವಷ್ಟು ಮಳೆಯಾಗುತ್ತಿದೆ. ಹಳ್ಳಕೊಳ್ಳಗಳು ಹಾಗಿರಲಿ, ಬೃಹದಾದ ಕೆರೆ ಕುಂಟೆಗಳು ಕಂಠಮಟ್ಟ ತುಂಬಿತುಳುಕುತ್ತಿವೆ. ಈ ಮಧ್ಯೆ ಅಲ್ಲಲ್ಲಿ ಅವಘಡಗಳೂ ಸಂಭವಿಸುತ್ತಿವೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಬೈಕ್ ಸಮೇತ ಕೊಚ್ಚಿಹೋಗಿದ್ದಾರೆ. ನೀರಿನಲ್ಲಿ ಕೊಚ್ಚಿಹೋಗಿರುವ ವ್ಯಕ್ತಿಯನ್ನು 45 ವರ್ಷದ ಗಂಗಾಧರ್ ಎಂದು ಗುರುತಿಸಲಾಗಿದ್ದು, ಈತ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯ.

ಗ್ರಾಮ ಪಂಚಾಯತ್ ಸದಸ್ಯ ಹಳ್ಳದಲ್ಲಿ ಕೊಚ್ಚಿಹೋದ ಘಟನೆ ರಾಮಪಟ್ಟಣ-ನವಿಲುಗುರ್ಕಿ ಗ್ರಾಮದ ಬಳಿ ಇರುವ ಯದಾರ್ಲಹಳ್ಳಿ ಬ್ರಿಡ್ಜ್​ ಬಳಿ ನಡೆದಿದೆ. ಗಂಗಾಧರ್​ಗಾಗಿ ಗುಡಿಬಂಡೆ ಅಗ್ನಿಶಾಮಕ ದಳದಿಂದ ಶೋಧಕಾರ್ಯ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಪೇರೆಸಂದ್ರ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ. ತುಂಬಿ ಹರಿಯುತ್ತಿರುವ ಸೇತುವೆ ಬಳಿ ಗಂಗಾಧರ್ ಬೈಕ್ ಪತ್ತೆಯಾಗಿದೆ.

(gram panchayat member washed away in water in chikkaballapur taluk)

TV9 Kannada


Leave a Reply

Your email address will not be published. Required fields are marked *