ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಕೆಲ ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ ಅನುಭವ ಆಗಿದೆ.
ಕಳೆದ ರಾತ್ರಿ ಜೋರಾಗಿ ಶಬ್ದದೊಂದಿಗೆ ಭೂಮಿ ಕಂಪನ ಅನುಭವ ಆಗಿತ್ತು. ಜೋರಾದ ಶಬ್ದಕ್ಕೆ ಜನರು ಬೆಚ್ಚಿಬಿದ್ದು ಮನೆಗಳಿಂದ ಆಚೆ ಓಡಿ ಬಂದಿದ್ದರು. ಮನೆಯಲ್ಲಿದ್ದ ಪಾತ್ರೆ ಮತ್ತು ಪೀಠೋಪಕರಣಗಳು ನೆಲಕ್ಕೆ ಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಚಿಂತಾಮಣಿ ತಹಶೀಲ್ದಾರ್ ಹನುಮಂತರಾಯಪ್ಪ, ಕೆಂಚಾರ್ಲಹಳ್ಳಿ ಪಿಎಸ್ಐ ನಾರಾಯಣಪ್ಪ ಭೇಟಿ ನೀಡಿ ಧೈರ್ಯ ತುಂಬಿದ್ದರು.
ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಿಟ್ಟಹಳ್ಳಿ, ರಾಸಪಲ್ಲಿ, ವೆಂಕಟರೆಡ್ಡಿಪಾಳ್ಯ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಜೋರು ಶಬ್ದದ ಅನುಭವ ಆಗಿದೆ. ಇಂದು ಬೆಳಗಿನ ಜಾವ ಸಣ್ಣದಾಗಿ ಭೂಮಿ ನಡುಗಿದ ಅನುಭವ ಆಗಿದೆ. ಎರಡು ಭಾರಿ ಭೂಮಿ ಕಂಪನದಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.