ಚಿಕ್ಕಬಳ್ಳಾಪುರ ಎಪಿಎಮ್​ಸಿಯಲ್ಲಿ ಹೂವು ಮಾರಲು ಅವಕಾಶ ಸಿಗದೇ ಹೋಗಿದ್ದಕ್ಕೆ ರೊಚ್ಚಿಗೆದ್ದ ಬೆಳೆಗಾರರು ರಸ್ತೆಗೆ ಹೂ ಬಿಸಾಡಿ ಪ್ರತಿಭಟಿಸಿದರು | Flowers growers in Chikkaballapur stage protest for not allowing them to sell flowers in APMC


ಚಿಕ್ಕಬಳ್ಳಾಪುರದ ಹೂವು ಬೆಳೆಗಾರರು ಶನಿವಾರ ರೊಚ್ಚಿಗೆದ್ದಿದ್ದರು. ಒಕ್ಕಲುತನ ಹುಟ್ಟುವಳಿ ಮಾರುಕಟ್ಟೆಯಲ್ಲಿ (ಎ ಪಿ ಎಮ್ ಸಿ) ಅವರಿಗೆ ಹೂವು ಮಾರಲು ಅವಕಾಶ ನೀಡದಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಅವರು ಹೂವು ಮಾರುತ್ತಿದ್ದ ತಾತ್ಕಾಲಿಕ ಮಾರುಕಟ್ಟೆ ಭಾರೀ ಮಳೆಯಿಂದಾಗಿ ಕೆಸರಿನ ಗದ್ದೆಯಾಗಿ ಮಾರ್ಪಟ್ಟಿದೆ. ಹಾಗಾಗಿ ಎ ಪಿ ಎಮ್ ಸಿಯಲ್ಲಿ ಹೂವು ಮಾರಲು ಅವಕಾಶ ಮಾಡಿಕೊಡಲು ಅವರು ಕೋರಿದಾಗ ಸಂಬಂಧಪಟ್ಟವರು ಅವರ ಮನವಿಯನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ಎ ಪಿ ಎಮ್ ಸಿ ಪ್ರವೇಶಿಸಿದ ಕೆಲ ಹೂವು ಬೆಳೆಗಾರರನ್ನು ಪೊಲೀಸರು ಬಂಧಿಸಿದ್ದು ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿತ್ತು. ಹಾಗಾಗೇ, ಶನಿವಾರ ಅವರು ಪ್ರತಿಭಟನೆ ನಡೆಸಲು ರಸ್ತೆಗಿಳಿದರು. ಅದಕ್ಕಾಗಿ ಅವರು ಆರಿಸಿಕೊಂಡಿದ್ದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 234. ನೀವು ಗಮನಿಸುತ್ತಿರುವ ಹಾಗೆ ಬೆಳೆಗಾರರು ತಮ್ಮ ತೋಟಗಳಲ್ಲಿ ಬೆಳೆದ ಹೂವುಗಳನ್ನು ಹೆದ್ದಾರಿಯಲ್ಲಿ ಬಿಸಾಡಿ ತಮ್ಮ ಅಸಮಾಧಾನ, ಕೋಪ ಪ್ರದರ್ಶಿಸುತ್ತಿದ್ದಾರೆ.

ಹೂ ಬೆಳೆಗಾರರ ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಸುಮಾರು ಎರಡು ಕಿಮೀಗಳಿಗಳಷ್ಟು ದೂರದವರಗೆ ವಾಹನಗಳು ನಿಶ್ಚಲ ಸ್ಥಿತಿಯಲ್ಲಿದ್ದವು.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಚಿಕ್ಕಬಳ್ಳಾಪುರದವರೇ ಅಗಿರುವ ಆರೋಗ್ಯ ಸಚಿವ ಕೆ ಸುಧಾಕರ್ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೂವು ಬೆಳೆಗಾರರೊಂದಿಗೆ ಮಾತುಕತೆ ನಡೆಸಿದರು. ಅದೇ ವೇಳೆ ರೈತರು, ಹೂವಿನ ಮಾರ್ಕೆಟ್ ಅನ್ನು ಕೆ ವಿ ಕ್ಯಾಂಪಸ್ ನಿಂದ ಎಪಿ ಎಮ್ ಸಿ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಸಚಿವರನ್ನು ಆಗ್ರಹಿಸಿದರು.

ಇದನ್ನೂ ಓದಿ:   Shocking Video: 22 ಅಂತಸ್ತಿನ‌‌ ಕಟ್ಟಡದ ಮೇಲೆ ಮಕ್ಕಳ ಹುಡುಗಾಟ; ಪೋಷಕರನ್ನು ಬೆಚ್ಚಿಬೀಳಿಸಿರುವ ವಿಡಿಯೋ ಇಲ್ಲಿದೆ

TV9 Kannada


Leave a Reply

Your email address will not be published. Required fields are marked *