ಚಿಕ್ಕಬಳ್ಳಾಪುರ: ಮಳೆಗೆ ಬೆಳೆ ನಾಶ; ದುಬಾರಿಯಾಗಲಿದೆ ತರಕಾರಿ, ಹೂವು, ಹಣ್ಣಿನ ಬೆಲೆ | Crop loss due to heavy rain Vegetable flower fruit will be expensive in chikkaballapur

ಚಿಕ್ಕಬಳ್ಳಾಪುರ:  ಜಿಲ್ಲೆಯಲ್ಲಿ ಮಹಾ ಮಳೆ ನಿಂತರೂ ಮಳೆಯ ಅವಾಂತರಗಳು ಈಗ ಎದ್ದು ಕಾಣುತ್ತಿದೆ. ನಿರಂತರವಾಗಿ ಸುರಿದ ಮಳೆಗೆ ಜಿಲ್ಲೆಯ ಬಹುತೇಕ ತೋಟಗಾರಿಕೆ ಬೆಳೆಗಳು ಹಾಳಾಗಿದ್ದು, 50 ಕೋಟಿ ರೂಪಾಯಿ ಮೌಲ್ಯದ ತರಕಾರಿ, ಹಣ್ಣು, ಹೂ ಬೆಳೆಗಳು ಹಾನಿಯಾಗಿದೆ. ಹಾನಿಯಾದ ತೋಟ, ಜಮೀನುಗಳಿಗೆ ತೋಟಗಾರಿಕೆ ಇಲಾಖೆ ಸಿಬ್ಬಂದಿ ಅಧಿಕಾರಿಗಳು ಭೇಟಿ ನೀಡಿ ಸರ್ವೆ ನಡೆಸುತ್ತಿದ್ದಾರೆ. ಬಹುತೇಕ ಬೆಳೆಗಳು ಮಣ್ಣು ಪಾಲಾಗಿದ್ದು, ಬಿಸಿಲು ಬರುತ್ತಿದ್ದಂತೆ ಬೆಳೆಗಳ ಹಾನಿ ಕಣ್ಣಿಗೆ ಕಟ್ಟುವಂತಿದೆ. ತೋಟಗಾರಿಕೆ ಇಲಾಖೆಯಲ್ಲಿ ಆದ ನಷ್ಟದ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೆಶಕರಾದ ರಮೇಶ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿಗೆ ಅತಿ ಹೆಚ್ಚು ತರಕಾರಿ ಸರಬರಾಜು ಮಾಡುವ ಚಿಕ್ಕಬಳ್ಳಾಫುರ ಜಿಲ್ಲೆಯ ಬಹುತೇಕ ತರಕಾರಿ ಬೆಳೆಗಳು ಹಾಳಾಗಿದೆ. ಮತ್ತೆ ತರಕಾರಿ ಬೆಳೆಯಲು ಒಂದೂವರೆ ತಿಂಗಳ ಸಮಯ ಬೇಕು. ಪೆಟ್ರೋಲ್ ಬೆಲೆಗಿಂತ ತರಕಾರಿಗಳು ದುಬಾರಿಯಾಗಲಿದೆ. ಚಿಕ್ಕಬಳ್ಳಾಫುರ ಜಿಲ್ಲೆಯೊಂದರಲ್ಲಿ ಸುಮಾರು 3 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ತರಕಾರಿ ಬೆಳೆಗಳು ಮಣ್ಣು ಪಾಲಾಗಿದೆ. ಚಿಕ್ಕಬಳ್ಳಾಫುರದ ಎಪಿಎಂಸಿ ಮಾರುಕಟ್ಟೆಗೆ ಈಗಾಗಲೇ ತರಕಾರಿಗಳ ಸರಬರಾಜು ಕಡಿಮೆಯಾಗಿದೆ ಎನ್ನುವುದು ವಿಪರ್ಯಾಸ.

ಇದನ್ನೂ ಓದಿ:
ಚಿಕ್ಕಬಳ್ಳಾಪುರ: 360 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ, ಬೆಳೆ ಹಾನಿ; 48 ಮನೆ ಸಂಪೂರ್ಣ ಕುಸಿತ

ಪ್ರವಾಹಕ್ಕೆ ನಲುಗಿದ ರೈತರ ಬದುಕು; ಬೆಳಗಾವಿಯಲ್ಲಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ

TV9 Kannada

Leave a comment

Your email address will not be published. Required fields are marked *