ಲೋಕ ಅದಾಲತ್ನಲ್ಲಿ ವಿಚ್ಛೇದನಕ್ಕೆಂದು ಬಂದಿದ್ದ 3 ಜೋಡಿಗಳನ್ನು ನ್ಯಾಯಾಧೀಶರು ಒಂದುಗೂಡಿಸಿದ್ದಾರೆ.

ಒಂದಾದ ಜೋಡಿಗಳು
ಚಿಕ್ಕಬಳ್ಳಾಪುರ: ಲೋಕ ಅದಾಲತ್ನಲ್ಲಿ ವಿಚ್ಛೇದನಕ್ಕೆಂದು ಬಂದಿದ್ದ 3 ಜೋಡಿಗಳನ್ನು ನ್ಯಾಯಾಧೀಶರು ಒಂದುಗೂಡಿಸಿದ್ದಾರೆ. ಚಿಕ್ಕಬಳ್ಳಾಫುರದಲ್ಲಿ ನಡೆದ ಲೋಕ ಅದಾಲತ್ನಲ್ಲಿ ವಿಚ್ಛೇದನಕ್ಕೆಂದು ಬಂದ ಉಷಾ ಜಿ-ಮುನಿರಾಜು, ದೀಪಾ-ರಮೇಶ್, ಆಶಾ-ವಿನೋದ್ ಕುಮಾರ್ ಜೋಡಿಗಳನ್ನು ನ್ಯಾ. ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಹಾಗೂ ನ್ಯಾ.ವಿವೇಕಾನಂದ ಪಂಡಿತ್ ಒಂದು ಮಾಡಿದ್ದಾರೆ.