ಚಿಕ್ಕಮಗಳೂರಲ್ಲಿ ರೊಚ್ಚಿಗೆದ್ದ ನಾರಿಯರು; ಬಾರ್​ಗೆ ನುಗ್ಗಿ ಖುರ್ಚಿಗಳನ್ನ ಪುಡಿಪುಡಿ ಮಾಡಿದ ಮಹಿಳೆಯರು..!


ಚಿಕ್ಕಮಗಳೂರು: ಸ್ಥಳೀಯರ ವಿರೋಧದ ಮಧ್ಯೆಯೂ ಬಾರ್ ಓಪನ್ ಮಾಡಿದ್ದಕ್ಕೆ ಸ್ಥಳೀಯ ಮಹಿಳೆಯರು ರೊಚ್ಚಿಗೆದ್ದು ಮದ್ಯದಂಗಡಿ ಮೇಲೆ ಅಟ್ಯಾಕ್ ಮಾಡಿದ್ದಾರೆ.

ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಸ್ಥಳೀಯರ ವಿರೋಧಗಳ ಮಧ್ಯೆಯೂ ಬಾರ್​ ಓಪನ್ ಮಾಡಲಾಗಿತ್ತು. ಇದರಿಂದ ಅಸಮಾಧಾನಗೊಂಡ ಗ್ರಾಮದ ಮಹಿಳೆಯರು.. ಬಾರ್​​ಗೆ ನುಗ್ಗಿ ಅಲ್ಲಿದ್ದ ಖುರ್ಚಿ, ಟೇಬಲ್​​ಗಳನ್ನ ಪುಡಿ ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 50ಕ್ಕೂ ಹೆಚ್ಚು ಮಹಿಳೆಯರು ಬಾರ್​ಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಸದ್ಯ ಬಾರ್​ಗೆ ನುಗ್ಗಿ ಅಲ್ಲಿದ್ದ ಖುರ್ಚಿಗಳನ್ನ ಪುಡಿ ಪುಡಿ ಮಾಡಿರುವ ವಿಡಿಯೋ ಸೋಶಿಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

News First Live Kannada


Leave a Reply

Your email address will not be published.