ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು, ಇಬ್ಬರು ಹಿರಿಯ ರೈತ ಹೋರಾಗಾರರು ದುರ್ಮರಣ ಹೊಂದಿದ್ದಾರೆ. ನವಲಗುಂದದಿಂದ ಬೇಲೂರಿಗೆ ಹೋಗುತ್ತಿದ್ದ ವೇಳೆ ಸಂಭವಿಸಿದ ಕಾರು ಅಪಘಾತದಲ್ಲಿ ಹಿರಿಯ ರೈತ ಹೋರಾಟಗಾರ ಜಿಟಿ ರಾಮಸ್ವಾಮಿ (70), ರಾಮ (55) ಎಂಬುವರು ಸಾವನ್ನಪ್ಪಿದ್ದಾರೆ.

ಜಿಲ್ಲೆಯ ರಾಮನಹಳ್ಳಿ ಬಳಿ ಘಟನೆ ಕಾರು ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇನ್ನು ಮೃತ ರೈತ ರಾಮಸ್ವಾಮಿ ರಾಜ್ಯ ರೈತ ಸಂಘದ ಉಪ್ಯಾಧ್ಯಕ್ಷರಾಗಿದ್ದರು. ಹಾಗೆಯೇ ರಾಮ ಎಂಬುವರು ರಾಜ್ಯ ರೈತ ಸಂಘ ಕಾರ್ಯದರ್ಶಿಯಾಗಿದ್ದರು.

ಇದನ್ನೂ ಓದಿ: ಶೃಂಗೇರಿ ಮಹಿಳೆ ಮೇಲೆ ಆಸಿಡ್​ ದಾಳಿ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ರಾಮಸ್ವಾಮಿ ರಾಮನಗರದ ಮೂಲದವರು. ರಾಮ ಹಾಸನದ ಬೇಲೂರಿನವರು. ಕಾರಿನಲ್ಲಿದ ಮತ್ತೊಬ್ಬರು ತೀವ್ರ ಗಾಯಗೊಂಡಿದ್ದು ಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಚಿಕ್ಕಮಗಳೂರಿನಲ್ಲಿ ಕಾರು ಅಪಘಾತ; ಇಬ್ಬರು ಹಿರಿಯ ರೈತ ಹೋರಾಟಗಾರರು ದುರ್ಮರಣ appeared first on News First Kannada.

Source: newsfirstlive.com

Source link