ಚಿಕ್ಕಮಗಳೂರಿನಲ್ಲಿ ಯೋಧನ ನೋಡಲು ಹರಿದುಬಂದ ಜನಸಾಗರ, ‘ವೀರ್ ಜವಾನ್ ಅಮರ್ ರಹೇ’ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳು | Students and public crowd to see soldier ganesha body at Chikmagalur


ಚಿಕ್ಕಮಗಳೂರಿನಲ್ಲಿ ಯೋಧನ ನೋಡಲು ಹರಿದುಬಂದ ಜನಸಾಗರ, ‘ವೀರ್ ಜವಾನ್ ಅಮರ್ ರಹೇ’ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗಳು

ಚಿಕ್ಕಮಗಳೂರಿನಲ್ಲಿ ಯೋಧನ ನೋಡಲು ಹರಿದುಬಂದ ಜನಸಾಗರ

ಇಂದು ಬೆಳಗ್ಗೆ ಜಿಲ್ಲಾಸ್ಪತ್ರೆಯಿಂದ ಹೊರಟ ಮೃತದೇಹಕ್ಕೆ ಮಲೆನಾಡಿಗರು ಮೆರವಣಿಗೆ ಮೂಲಕ ಖಾಂಡ್ಯ ಸಮೀಪದ ಸಂಗಮೇಶ್ವರಪೇಟೆಗೆ ಆಗಮಿಸಿದ್ದಾರೆ. ಸಂಗಮೇಶ್ವರಪೇಟೆಯ ಸಮುದಾಯ ಭವನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿದ್ದು, ಸಾವಿರಾರು ಜನ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

ಚಿಕ್ಕಮಗಳೂರು: ರಜೆ ಮುಗಿಸಿ ಸೇನೆಗೆ ಹಿಂದಿರುಗುವಾಗ ಬಿಹಾರದ ಕಿಶನ್ ಗಂಜ್ ಎಂಬ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದ್ದ ಚಿಕ್ಕಮಗಳೂರು ತಾಲೂಕಿನ ಮಸಿಗದ್ದೆ ಗ್ರಾಮದ ಯೋಧ ಗಣೇಶ್(Soldier Ganesh) ಪಾರ್ಥೀವ ಶರೀರಕ್ಕೆ ಸಾವಿರಾರು ಜನ ಅಂತಿಮ ದರ್ಶನ ಸಲ್ಲಿಸಿದ್ದಾರೆ. ನಿನ್ನೆ ರಾತ್ರಿ ಜಿಲ್ಲೆಗೆ ಬಂದ ಮೃತದೇಹವನ್ನ ಸಾರ್ವಜನಿಕರು ಬೈಕ್ ರ್ಯಾಲಿ ಮೂಲಕ ಬರಮಾಡಿಕೊಂಡಿದ್ದರು.

ಇಂದು ಬೆಳಗ್ಗೆ ಜಿಲ್ಲಾಸ್ಪತ್ರೆಯಿಂದ ಹೊರಟ ಮೃತದೇಹಕ್ಕೆ ಮಲೆನಾಡಿಗರು ಮೆರವಣಿಗೆ ಮೂಲಕ ಖಾಂಡ್ಯ ಸಮೀಪದ ಸಂಗಮೇಶ್ವರಪೇಟೆಗೆ ಆಗಮಿಸಿದ್ದಾರೆ. ಸಂಗಮೇಶ್ವರಪೇಟೆಯ ಸಮುದಾಯ ಭವನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿದ್ದು, ಸಾವಿರಾರು ಜನ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ನಿವೃತ್ತ ಸೈನಿಕರು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಮೃತ ಯೋಧನ ಅಂತಿಮ ದರ್ಶನ ಮಾಡಿದರು‌. ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಸಾರ್ವಜನಿಕ ಅಂತಿಮ ದರ್ಶನದ ಬಳಿಕ ಯೋಧನ ಸ್ವಗ್ರಾಮಕ್ಕೆ ಮಸಿಗದ್ದೆಗೆ ತೆರಳಲಿರುವ ಪಾರ್ಥೀವ ಶರೀರಕ್ಕೆ ಮನೆ ಬಳಿ ಕುಟುಂಬಸ್ಥರಿಂದ ಪೂಜೆ ಸಲ್ಲಿಸಿದ ಬಳಿಕ ಮನೆ ಹಿಂಭಾಗದ ಜಮೀನಿನಲ್ಲಿ ಅಂತ್ಯ ಸಂಸ್ಕಾರದ ಅಂತಿಮ ಕ್ರಿಯೆ ನಡೆಯಲಿದೆ. ಜಿಲ್ಲಾಡಳಿತದ ಅಧಿಕಾರಿಗಳು, ಸಿ.ಎಂ.ರಾಜಕೀಯ ಕಾರ್ಯದರ್ಶಿ ಡಿ‌.ಎನ್.ಜೀವರಾಜ್, ಶಾಸಕ ರಾಜೇಗೌಡ ಸ್ಥಳದಲ್ಲಿದ್ದು ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಸೇನೆ ಅಧಿಕಾರಿಗಳ ಮುಂದಾಳತ್ವದಲ್ಲಿ ಯೋಧನ ಅಂತ್ಯಸಂಸ್ಕಾರ ನಡೆಯಲಿದೆ.

TV9 Kannada


Leave a Reply

Your email address will not be published.