ಚಿಕ್ಕಮಗಳೂರು: ಇಲ್ಲಿನ ಇಂದಿರಾನಗರ ಗ್ರಾಮದಲ್ಲಿ ಬರೋಬ್ಬರಿ 128 ಮಂದಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಚಿಕ್ಕಮಗಳೂರಿನಿಂದ 12 ಕಿಮೀ ದೂರದಲ್ಲಿರೋ ಇಂದಿರಾನಗರ ಗ್ರಾಮದಲ್ಲಿ 150 ಕುಟುಂಬಗಳಿವೆ. ಸುಮಾರು 600ಕ್ಕಿಂತಲೂ ಹೆಚ್ಚು ಜನರು ಇರುವ ಈ ಗ್ರಾಮದಲ್ಲಿ ಬಹುತೇಕರು ಕೂಲಿ ಕೆಲ್ಸ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೇ 14 ರಂದು ಈ ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ರು. ವಿವಿಧ ಕಾಯಿಲೆಯಿಂದ ಅಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವನ್ನಪ್ಪಿದಾಗ್ಲೂ ಅಸ್ಪತ್ರೆಯವ್ರು ಬೇರೆ ಕಾಯಿಲೆಯಿಂದಲೇ ಮೃತಪಟ್ಟಿದ್ದಾರೆ ಅಂತಾ ಹೇಳಿದ್ದರು ಎನ್ನಲಾಗಿದೆ.

ಗ್ರಾಮಕ್ಕೆ ಮೃತದೇಹ ತಂದೋರು ಇಡೀ ಗ್ರಾಮದ ಜನರೆಲ್ಲಾ ಸೇರಿ ಶವ ಸಂಸ್ಕಾರದಲ್ಲಿ ಭಾಗಿಯಾದ್ರು. ಇನ್ನೇನು ಅಂತ್ಯಕ್ರಿಯೆ ಮುಗಿಸಿ ಮನೆಗೆ ಬರುವಷ್ಟರಲ್ಲಿ ಆ ವ್ಯಕ್ತಿಯ ಕೊರೊನಾ ವರದಿಯೂ ಲಭ್ಯವಾಗಿದೆ. ಆತನಿಗೂ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಇದ್ರಿಂದ ಇಡೀ ಗ್ರಾಮದವರೆಲ್ಲರೂ ಕೊರೊನಾ ತಪಾಸಣೆಗೆ ಮುಂದಾದ್ರು.

ಮೇ 14 ರಂದು ಈ ಗ್ರಾಮದ ಹಲವರ ಸ್ವ್ಯಾಬ್ ಪಡೆಯಲಾಯ್ತು. ಈಗ ವರದಿ ಲಭ್ಯವಾಗಿದ್ದು ಬರೋಬ್ಬರಿ 128 ಮಂದಿಯಲ್ಲಿ ಸೋಂಕಿರುವುದು ಖಚಿತವಾಗಿದೆ. ಮೃತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಂದ ಇದೀಗ ಇಡೀ ಗ್ರಾಮಕ್ಕೆ ಸೋಂಕು ಹರಡಿದೆ ಅನ್ನೋ ಮಾತುಗಳು ಕೇಳಿಬಂದಿವೆ. ಸೋಂಕು ಖಚಿತವಾಗುತ್ತಿದ್ದಂತೆ ಇಡೀ ಗ್ರಾಮಕ್ಕೆ ಶಾಕ್ ಎದುರಾಗಿದೆ.

ಇನ್ನೂ ಹೆಚ್ಚು ಸೋಂಕು ದೃಢವಾಗುತ್ತಲೇ ಇದ್ದು, ತಾಲೂಕು ಆಡಳಿತ ಗ್ರಾಮಕ್ಕೆ ಬೇಟಿ ನೀಡಿ ಜನರು ಹೊರಬರದಂತೆ ಸೂಚನೆಯನ್ನು ನೀಡ್ತಿದೆ. ಅಲ್ಲದೇ ಪಡಿತರವನ್ನ ಮನೆ ಮನೆಗೆ ತಲುಪಿಸುವ ಕೆಲಸವನ್ನೂ ಮಾಡ್ತಿದೆ. ಇನ್ನೂ ಹಲವರ ವರದಿ ಬಾಕಿಯಿದ್ದು, ಇನ್ನಷ್ಟು ಜನ್ರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಾ ಎಂಬ ಆತಂಕ ಆವರಿಸಿದೆ. ಇದಲ್ಲದೇ ಅಕ್ಕಪಕ್ಕದಲ್ಲಿ ರೆಸಾರ್ಟ್ ಹೋಂ ಸ್ಟೇ ಗಳಿರೋದ್ರಿಂದ ಅಲ್ಲಿಗೆ ಬಂದವರಿಂದಲೇ ಈ ಗ್ರಾಮಕ್ಕೆ ಸೋಂಕು ತಗುಲಿತ್ತಾ ಅನ್ನೋ ಅನುಮಾನಗಳು ಶುರುವಾಗಿದೆ ಅಂತಿದ್ದಾರೆ ತಶೀಲ್ದಾರ್ ಡಾ.ಕಾಂತರಾಜ್.

The post ಚಿಕ್ಕಮಗಳೂರಿನ ಈ ಗ್ರಾಮದಲ್ಲಿ 128 ಮಂದಿಗೆ ಸೋಂಕು; ಅಂತ್ಯಕ್ರಿಯೆಗೆ ಹೋಗಿದ್ದೇ ತಪ್ಪಾಯ್ತಾ? appeared first on News First Kannada.

Source: newsfirstlive.com

Source link