ನಟಿ ರಾಗಿಣಿ ದ್ವಿವೇದಿ ಸದ್ಯ ತಾವು ಮಾಡ್ತಿರುವ ಸಮಾಜ ಸೇವೆಯಿಂದ ಸುದ್ದಿಯಾಗ್ತಿದ್ದಾರೆ. ಮನೆಯಿಲ್ಲದವರಿಗೆ, ಪೊಲೀಸರಿಗೆ, ಇದೀಗ ಚಿತಾಗಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಊಟ ನೀಡುವ ಮೂಲಕ ಈ ಕೊರೊನಾ ಸಂದರ್ಭದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡ್ತಿದ್ದಾರೆ.

ಆರ್​.ಡಿ ವೆಲ್​ಫೇರ್​ ಅಂತ ತಮ್ಮ ಹೆಸರಲ್ಲಿ ಇದ್ದಂತ ಟ್ರಸ್ಟ್​ನ ಹೆಸರು ಬದಲಿಸಿ ಜೆನ್ನೆಕ್ಸ್ಟ್​ ಅಂತ ಹೊಸದಾಗಿ ನಾಮಕರಣ ಮಾಡಿದ್ದಾರೆ. ಇದೇ ಟ್ರಸ್ಟ್​​ ಮೂಲಕ ನಿನ್ನೆಯಷ್ಟೆ ಪೊಲೀಸರಿಗೆ ಊಟ ನೀಡಿದ್ದ ರಾಗಿಣಿ ಹಾಗೂ ಟೀಂ ಇಂದು ಬೆಳಗ್ಗೆ ಮನೆಯಿಲ್ಲದವರಿಗೆ ಊಟದ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ. ತಮ್ಮ ತಂಡದ ಜೊತೆ ತಾವೂ ತೆರಳಿ ಊಟ ಹಂಚುತ್ತಿದ್ದಾರೆ. ಬಳಿಕ ಚಿತಾಗಾರವೊಂದಕ್ಕೆ ಭೇಟಿ ನೀಡಿರುವ ರಾಗಿಣಿ, ಕೆಲ ಕಾಲ ಅಲ್ಲಿ ಕೆಲಸ ಮಾಡುತ್ತಿದ್ದವರ ಜೊತೆ ಮಾತಾಡಿ ಊಟ ವಿತರಿಸಿದ್ದಾರೆ.

‘ನನ್ನ ಪ್ರಕಾರ ಚಿತಾಗಾರದಲ್ಲಿ ಕೆಲಸ ಮಾಡುವವರೇ ಗ್ರೇಟ್​ ಕೊರೊನಾ ವಾರಿಯರ್ಸ್​​. ಇವರ ಕೆಲಸದ ಹಿಂದಿರುವ ನೋವನ್ನ ಯಾರೂ ಪರಿಗಣಿಸುವುದೇ ಇಲ್ಲ. ಹಾಗೇ ಇವರಲ್ಲಿ ಅದೆಷ್ಟೋ ಜನರಿಗೆ ಸಂಬಳ ಹಾಗೂ ಊಟ ಕೂಡ ಸಿಗುತ್ತಿಲ್ಲ. ನಮ್ಮ ಕೈಲಾದಷ್ಟು ಅವರ ಒಂದು ತಿಂಗಳ ರೇಷನ್​ನಲ್ಲಿ ಸಹಾಯ ಮಾಡಿದ್ದೀವಿ. ಕಳೆದ ನಾಲ್ಕು ಪೀಳಿಗೆಯಿಂದಲೂ ಈ ಚಿತಾಗಾರದಲ್ಲಿ ಕೆಲಸ ಮಾಡುತ್ತಾ ಹೊರ ಜಗತ್ತನ್ನ ನೋಡದೇ ಇರುವ ಓರ್ವ ಮಹಿಳೆಯನ್ನ ಭೇಟಿ ಮಾಡಿದೆ, ಖುಷಿ ಆಯ್ತು. ಇವರಿಂದ ನಾವು ದಿನಾ ಕಲಿಯುವುದು ಬಹಳಷ್ಟಿದೆ’ ಅಂತಾರೆ ರಾಗಿಣಿ ದ್ವಿವೇದಿ.

The post ಚಿತಾಗಾರದ ಸಿಬ್ಬಂದಿ ನೆರವಿಗೆ ಬಂದ ನಟಿ ರಾಗಿಣಿ.. ದಿನಸಿ ಕಿಟ್​​ ವಿತರಣೆ appeared first on News First Kannada.

Source: newsfirstlive.com

Source link