ಚಿತ್ರದುರ್ಗದ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಪೊಲೀಸರನ್ನೇ ದಬಾಯಿಸುವ ಪ್ರಯತ್ನ ಮಾಡುತ್ತಾರೆ! | Hijab clad students at a college in Chitradurga indulge in shoving with women constables ARB


ಮುಸ್ಲಿಂ ಸಮುದಾಯ ವಿದ್ಯಾರ್ಥಿನಿಯರು ಮಹಿಳಾ ಪೊಲೀಸರಿಗೆ (lady constables) ಬಿಸಿತುಪ್ಪ ಆಗಿಬಿಟ್ಟಿದ್ದಾರೆ. ಚಿತ್ರದುರ್ಗದ (Chitradurga) ಕಾಲೇಜೊಂದರ ಬಳಿ ಶುಕ್ರವಾರ ವಿದ್ಯಾರ್ಥಿನಿಯರು ಮಹಿಳಾ ಪೊಲೀಸರೊಂದಿಗೆ ನೂಕಾಟ-ತಳ್ಳಾಟ ಮಾಡಿದರು. ಕರ್ತವ್ಯದ ಮೇಲಿರುವ ಪೊಲೀಸರಿಗೆ ತಮಗೆ ಮೇಲಿಂದ ದೊರೆತ ಆದೇಶವನ್ನು ಜಾರಿಗೆ ತರುವುದು ಮುಖ್ಯವಾಗಿರುತ್ತದೆ. ನಿಮಗೆ ಇಲ್ಲಿ ಕಾಣುತ್ತಿರುವ ಮಹಿಳಾ ಪೊಲೀಸರಲ್ಲಿ ಮುಸ್ಲಿ ಸಮುದಾಯಕ್ಕೆ (Muslim community) ಸೇರಿದವರು ಇರಬಹುದು. ಅವರಿಗೆ ಕರ್ತವ್ಯ ಉಳಿದೆಲ್ಲ ಅಂಶಗಳಿಗಿಂತ ಮಿಗಿಲಾದದ್ದು. ವಿದ್ಯಾರ್ಥಿನಿಯರೊಂದಿಗೆ ಅವರಿಗೆ ವೈಯಕ್ತಿಕ ದ್ವೇಷವೇನೂ ಇಲ್ಲ. ಹಾಗಾಗಿ ಕಾಲೇಜಿಗೆ ಬರುವ ಮಕ್ಕಳು ಪೊಲೀಸರೊಂದಿಗೆ ಕಾದಾಟಕ್ಕೆ ನಿಲ್ಲುವುದರಲ್ಲಿ ಅರ್ಥವೇ ಇಲ್ಲ. ಹಿಜಾಬ್ ತೆಗೆದು ಕಾಲೇಜು ಒಳಗೆ ಹೋಗಿ ಇಲ್ಲವೇ ವಾದ ಮಾಡದೆ ಮನೆಗೆ ಹೋಗಿ ಪೊಲೀಸರು ನಯವಾಗಿ ಹೇಳಿದರೂ ವಿದ್ಯಾರ್ಥಿನಿಯರು ಅವರಿಗೆ ತಿರುಗಿ ಬೀಳುತ್ತಾರೆ.

ಪೊಲೀಸರನ್ನು ನೂಕಿ ವಿದ್ಯಾರ್ಥಿನಿಯರು ಕಾಲೇಜು ಆವರಣದೊಳಗೆ ಹೋಗಲು ಪ್ರಯತ್ನಿಸಿದಾಗಲೂ ಅವರು ಬಲಪ್ರದರ್ಶನಕ್ಕೆ ಮುಂದಾಗುವುದಿಲ್ಲ. ಬಾರಿಕೇಡ್ ಗಳನ್ನು ಸರಿಸಲು ಪ್ರಯತ್ನಿಸಿದಾಗ ಪೊಲೀಸರು ವಿದ್ಯಾರ್ಥಿನಿಯರೊಂದಿಗೆ ಗದರುವ ಧ್ವನಿಯಲ್ಲಿ ಮಾತಾಡುತ್ತಾರೆ. ಅಷ್ಟಾದರೂ ಅವರು ತಮ್ಮ ಹಟವನ್ನೇ ಸಾಧಿಸುತ್ತಾರೆ.

ಅಂತಿಮವಾಗಿ ತಾಳ್ಮೆ ಕಳೆದುಕೊಳ್ಳುವ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಒಯ್ಯುವುದಾಗಿ ಹೇಳಿದಾಗ ಮಾತ್ರ ವಿದ್ಯಾರ್ಥಿನಿಯರ ಹಟ ಕಡಿಮೆಯಾಗುತ್ತದೆ. ಅದೇ ಸಮಯಕ್ಕೆ ಅಲ್ಲಿಯ ಆಗಮಿಸುವ ಪುರುಷ ಪೊಲೀಸರು ವಿದ್ಯಾರ್ಥಿನಿಯರೊಂದಿಗೆ ಮಾತಾಡಿ ಅವರನ್ನು ಕನ್ವಿನ್ಸ್ ಮಾಡುತ್ತಾರೆ ಮತ್ತು ಮನೆಗೆ ಕಳಿಸುವಲ್ಲಿ ಸಫಲರಾಗುತ್ತಾರೆ.

ಅಲ್ಲಿಗೆ ಈ ಪ್ರಹಸನ ಮುಕ್ತಾಯಗೊಳ್ಳುತ್ತದೆ.

TV9 Kannada


Leave a Reply

Your email address will not be published. Required fields are marked *