ಚಿತ್ರದುರ್ಗ: ಗೋಡೆ ಕುಸಿತದಿಂದ ಮೃತಪಟ್ಟಿದ್ದ ಮಗುವಿನ ತಾಯಿಯೂ ದುರ್ಮರಣ

ಚಿತ್ರದುರ್ಗ: ಗೋಡೆ ಕುಸಿತದಿಂದ ಮೃತಪಟ್ಟಿದ್ದ ಮಗುವಿನ ತಾಯಿಯೂ ದುರ್ಮರಣ

ಚಿತ್ರದುರ್ಗ: ಜುಲೈ 6 ರಂದು ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮೂರು ವರ್ಷದ ಮಗು ಸಾವನ್ನಪ್ಪಿತ್ತು. ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಗುವಿನ ತಾಯಿ ಕೂಡ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಮಗುವಿನ ತಾಯಿ ಸಾವಿತ್ರಮ್ಮ (33) ಸಾವುನ್ನಪ್ಪಿದ್ದಾರೆ. ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ಶಿಥಿಲಗೊಂಡ ಗೋಡೆ ಕುಸಿದುಬಿದ್ದು ಅನಾಹುತ ಸಂಭವಿಸಿತ್ತು. ಸದ್ಯ ಮಹಿಳೆಯ ಸಾವಿನಿಂದ 8 ತಿಂಗಳ ಮಗು ಸೇರಿದಂತೆ 6 ವರ್ಷದ ಮಗ ಹಾಗು ಪತಿ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಮನೆ ಗೋಡೆ ಕುಸಿದು, 3 ವರ್ಷದ ಬಾಲಕ ದುರ್ಮರಣ

The post ಚಿತ್ರದುರ್ಗ: ಗೋಡೆ ಕುಸಿತದಿಂದ ಮೃತಪಟ್ಟಿದ್ದ ಮಗುವಿನ ತಾಯಿಯೂ ದುರ್ಮರಣ appeared first on News First Kannada.

Source: newsfirstlive.com

Source link