ಚಿತ್ರಮಂದಿರದಲ್ಲಿ ಸಲ್ಲು ಫ್ಯಾನ್ಸ್​ ಹುಚ್ಚು ಕೆಲಸ; ‘ಥಿಯೇಟರ್​ಗೆ ಬೆಂಕಿ ಬೀಳತ್ತೆ ಹುಷಾರ್​’ ಎಂದ ಸ್ಟಾರ್ ನಟ​ | Antim The Final Truth actor Salman Khan requests his fans not to take firecrackers inside theatre


ಚಿತ್ರಮಂದಿರದಲ್ಲಿ ಸಲ್ಲು ಫ್ಯಾನ್ಸ್​ ಹುಚ್ಚು ಕೆಲಸ; ‘ಥಿಯೇಟರ್​ಗೆ ಬೆಂಕಿ ಬೀಳತ್ತೆ ಹುಷಾರ್​’ ಎಂದ ಸ್ಟಾರ್ ನಟ​

ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿದ ಫ್ಯಾನ್ಸ್​

ಬಾಲಿವುಡ್ ನಟ ಸಲ್ಮಾನ್​ ಖಾನ್​ (Salman Khan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರು ನಟಿಸಿರುವ ಯಾವುದೇ ಸಿನಿಮಾ ತೆರೆಕಂಡರೂ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಾರೆ. ಆದರೆ ಇಂತಹ ಅಭಿಮಾನ ಕೆಲವೊಮ್ಮೆ ಅತಿರೇಕದ ಸ್ವರೂಪ ಪಡೆದುಕೊಳ್ಳುವುದುಂಟು. ಸಲ್ಲು ಮತ್ತು ಆಯುಶ್​ ಶರ್ಮಾ (Aayush Sharma) ನಟನೆಯ ‘ಅಂತಿಮ್​: ದಿ ಫೈನಲ್​ ಟ್ರುತ್​’ (Antim: The Final Truth) ಚಿತ್ರ ನ.26ರಂದು ಬಿಡುಗಡೆಯಾಗಿದೆ. ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಅದು ಖುಷಿಯ ವಿಚಾರ. ಆದರೆ ಸಿನಿಮಾ ನೋಡಲು ಬಂದು ಕೆಲವು ಹುಚ್ಚು ಅಭಿಮಾನಿಗಳು ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದ್ದಾರೆ. ಜನರಿಂದ ತುಂಬಿ ತುಳುಕುತ್ತಿದ್ದ ಚಿತ್ರಮಂದಿರದ ಒಳಗೆ ಪಟಾಕಿ (Firecrackers) ಸಿಡಿಸಲಾಗಿದೆ! ಅದನ್ನು ಕಂಡು ಸ್ವತಂ ಸಲ್ಮಾನ್​ ಖಾನ್​ಗೆ ಶಾಕ್​ ಆಗಿದೆ. ಅಭಿಮಾನಿಗಳ ಇಂಥ ವರ್ತನೆಯನ್ನು ಅವರು ಖಂಡಿಸಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಲ್ಲು ಪೋಸ್ಟ್​ ಮಾಡಿದ್ದು, ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

‘ಚಿತ್ರಮಂದಿರದ ಒಳಗೆ ಪಟಾಕಿಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಅಭಿಮಾನಿಗಳಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಅದರಿಂದ ದೊಡ್ಡ ಅವಘಡ ಸಂಭವಿಸಬಹುದು. ಅನೇಕರ ಪ್ರಾಣ ಹಾನಿ ಆಗಬಹುದು. ಥಿಯೇಟರ್​ ಒಳಗೆ ಪಟಾಕಿ ತರುವುದಕ್ಕೆ ಚಿತ್ರಮಂದಿರದ ಮಾಲಿಕರು ಅವಕಾಶ ನೀಡಬಾರದು. ಪಟಾಕಿ ತರುವವರನ್ನು ಬಾಗಿಲಿನಲ್ಲಿಯೇ ತಡೆಯಬೇಕು. ಸಿನಿಮಾವನ್ನು ಎಂಜಾಯ್​ ಮಾಡಿ. ಆದರೆ ಇಂಥ ಕೆಲಸವನ್ನು ಮಾಡಬೇಡಿ. ಇದು ನನ್ನೆಲ್ಲ ಅಭಿಮಾನಿಗಳಲ್ಲಿ ಮನವಿ’ ಎಂದು ಸಲ್ಮಾನ್​ ಖಾನ್​ ಬರೆದುಕೊಂಡಿದ್ದಾರೆ. ಈ ಪೋಸ್ಟ್​ ಜತೆಗೆ ಅಭಿಮಾನಿಗಳು ಪಟಾಕಿ ಸಿಡಿಸುತ್ತಿರುವ ವಿಡಿಯೋವನ್ನು ಕೂಡ ಸಲ್ಲು ಹಂಚಿಕೊಂಡಿದ್ದಾರೆ.

‘ಅಂತಿಮ್​: ದಿ ಫೈನಲ್​ ಟ್ರುತ್​’ ಮೊದಲ ದಿನದ ಕಲೆಕ್ಷನ್ ಎಷ್ಟು?​

ಸಲ್ಮಾನ್​ ಖಾನ್​ ಸಿನಿಮಾ ಎಂದರೆ ಮೊದಲ ದಿನವೇ ಹತ್ತಾರು ಕೋಟಿ ರೂ. ಬ್ಯುಸಿನೆಸ್​ ಮಾಡುತ್ತವೆ. ಆ ನಿರೀಕ್ಷೆಯ ಮೇಲೆಯೇ ನಿರ್ಮಾಪಕರು ಅವರ ಚಿತ್ರಗಳಿಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡುತ್ತಾರೆ. ಆದರೆ ಸಲ್ಲು ನಟನೆಯ ಕೆಲವು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೊರಗುತ್ತವೆ. ಈಗ ‘ಅಂತಿಮ್​’ ಚಿತ್ರಕ್ಕೂ ಹಾಗೆಯೇ ಆಗಿದೆ. ಈ ಸಿನಿಮಾ ಬಿಡುಗಡೆಯಾದ ಮೊದಲ ದಿನ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಿಲ್ಲ. ಟ್ರೇಲರ್​​ ಮೂಲಕ ಸಖತ್​ ಹೈಪ್​ ಸೃಷ್ಟಿ ಮಾಡಿದ್ದ ಈ ಚಿತ್ರ ಮೊದಲ ದಿನ ಕೇವಲ 4.5 ಕೋಟಿ ರೂ. ಗಳಿಸಿದೆ.

‘ಸತ್ಯಮೇವ ಜಯತೆ 2’ ನ.25ರಂದು ತೆರೆಕಂಡಿತು. ಅದರ ಮರುದಿನ ‘ಅಂತಿಮ್​: ದಿ ಫೈನಲ್​ ಟ್ರುತ್​’ ಬಿಡುಗಡೆ ಆಯಿತು. ಎರಡೂ ಚಿತ್ರಗಳ ನಡುವೆ ಬಾಕ್ಸ್​ ಆಫೀಸ್​ ಕ್ಲ್ಯಾಶ್​ ಏರ್ಪಟ್ಟಿದೆ. ದೇಶಾದ್ಯಂತ 3,500 ಪರದೆಗಳಲ್ಲಿ ‘ಅಂತಿಮ್​’ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಹಿಟ್​ ಎನಿಸಿಕೊಳ್ಳಲು ಕನಿಷ್ಠ 50 ಕೋಟಿ ರೂಪಾಯಿ ಆದ್ರೂ ಗಳಿಸಬೇಕು ಎಂದು ಗಲ್ಲಾಪೆಟ್ಟಿಗೆ ವ್ಯವಹಾರ ಬಲ್ಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಕತ್ರಿನಾ-ವಿಕ್ಕಿ ವಿವಾಹ: ವೈರಲ್​ ಆಗಿದ್ದ ಸಲ್ಮಾನ್​-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು?

ಸಿದ್ದಾರ್ಥ್​ ಶುಕ್ಲಾ ಸಾವಿನ ಬಗ್ಗೆ ನಗುತ್ತಾ ಮಾತನಾಡಿದ್ದ ಸಲ್ಮಾನ್​ ಖಾನ್​: ಶಾಕಿಂಗ್​ ವಿಡಿಯೋ ವೈರಲ್

TV9 Kannada


Leave a Reply

Your email address will not be published. Required fields are marked *