ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಆಸ್ಪತ್ರೆಗಳು ಭರ್ತಿಯಾಗಿ, ಲಕ್ಷಾಂತರ ಸಾವು ನೋವು ಸಂಭವಿಸಿ ಇದೀಗ ರಾಜ್ಯದಲ್ಲಿ ಲಾಕ್​ಡೌನ್​ ಕೂಡ ಚಾಲ್ತಿಯಲ್ಲಿದೆ. ಈ ನಡುವೆ ವ್ಯಾಕ್ಸಿನೇಷನ್​ ವಿಚಾರವಾಗಿ ಸಾಕಷ್ಟು ಚರ್ಚೆಗಳು ಕೂಡ ನಡೆಸಿವೆ. 18 ವರ್ಷಕ್ಕೂ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್​ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದರೂ ಕೂಡ, ವ್ಯಾಕ್ಸಿನ್​ ಅಭಾವದ ಕಾರಣ ಎರಡನೇ ಡೋಸ್​ ಹೊರತಾಗಿ ರಾಜ್ಯದಲ್ಲಿ ಯಾರಿಗೂ ವ್ಯಾಕ್ಸಿನೇಷನ್​ ಆಗುತ್ತಿಲ್ಲ.

ಈ ಮಧ್ಯೆ ಫಿಲ್ಮ್​ ಚೇಂಬರ್​ ಸದಸ್ಯರು ಚಿತ್ರೋದ್ಯಮದ ಎಲ್ಲಾ ಸದಸ್ಯರಿಗೂ ವ್ಯಾಕ್ಸಿನ್​ ಒದಗಿಸಬೇಕೆಂದು ರಾಜ್ಯ ಸರ್ಕಾರದ ಮೊರೆ ಹೋಗಿದ್ದಾರೆ. ಹೌದು.. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ನಾಗಣ್ಣ, ಸಫೈರ್​ ವೆಂಕಟೇಶ್​, ಸಾ.ರಾ ಗೋವಿಂದು ಹಾಗೂ ಕೆ.ಎಂ ವೀರೇಶ್​, ರಾಜ್ಯ ಆರೋಗ್ಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್​ರನ್ನ ಭೇಟಿಯಾಗಿ ವ್ಯಾಕ್ಸಿನೇಷನ್​ ವಿಚಾರವಾಗಿ ಮನವಿ ಸಲ್ಲಿಸಿದ್ದಾರೆ.

ಕೊರೊನಾ ಎರಡನೇ ಅಲೆಗೆ ಕನ್ನಡ ಚಿತ್ರರಂಗದ ಹಲವು ಹಿರಿಯ ನಟ-ನಿರ್ದೇಶಕರು, ಯುವ ನಟ-ನಿರ್ದೇಶಕರು, ತಂತ್ರಜ್ಞರು ಕೊನೆಯುಸಿರೆಳೆದಿದ್ದಾರೆ.

The post ಚಿತ್ರೋದ್ಯಮದ ಸದಸ್ಯರಿಗೆ ಕೋವಿಡ್​ ವ್ಯಾಕ್ಸಿನೇಷನ್​ ನೀಡುವಂತೆ ಮನವಿ appeared first on News First Kannada.

Source: newsfirstlive.com

Source link