ಫ್ರೆಂಚ್ ಫ್ರೈಸ್​ ಅಂದ್ರೆ ಬಹುತೇಕರಿಗೆ ಪಂಚಪ್ರಾಣ.. ಆನ್​ಲೈನ್ ಆರ್ಡರ್​ ಮಾಡಿದಾಗ.. ಪೀಜ್ಜಾ ಬರ್ಗರ್ ತಿನ್ನಬೇಕು ಅನ್ನಿಸಿದಾಗ ಜೊತೆಯಲ್ಲಿ ಫ್ರೆಂಚ್ ಫ್ರೈಸ್ ಇಲ್ಲ ಅಂದ್ರೆ ಊಟ ಮಾಡಿದ ಮಜವೇ ಹತ್ತೋದಿಲ್ಲ.. ಸದ್ಯ ಅಮೆರಿಕಾದ ನ್ಯೂಯಾರ್ಕ್​ನಲ್ಲಿ ಇಬ್ಬರು ಹೆಸರಾಂತ ಶೆಫ್​ಗಳು(ಬಾಣಸಿಗರು) ಹೊಸರೀತಿಯ ಫ್ರೆಂಚ್ ಫ್ರೈಸ್ ತಯಾರಿಸಿದ್ದಾರೆ. ಆದ್ರೆ ಈ ಫ್ರೆಂಚ್ ಫ್ರೈಸ್​ನ ಬೆಲೆ ಕೇಳಿದ್ರೆ ಶಾಕ್ ಆಗುವಂತಿದೆ. ಯಾಕಂದ್ರೆ ಈ ಫ್ರೆಂಚ್​ ಫ್ರೈಸ್​​ನಲ್ಲಿ ಚಿನ್ನವೂ ಇರುತ್ತೆ.

ಶೆಫ್ ಜೋ ಹಾಗೂ ಶೆಫ್ ಫ್ರೆಡ್ಡಿ ಈ ಹೊಸ ರೀತಿಯ ಫ್ರೆಂಚ್ ಫ್ರೈಸ್ ತಯಾರಿಸಿದ್ದು ಇದಕ್ಕೆ ಕ್ರೀಮ್ ಡೆ ಲಾ ಕ್ರೀಮ್ ಪೊಮ್ಮೆ ಫ್ರೈಟ್ಸ್ ಎಂದು ಹೆಸರಿಡಲಾಗಿದೆ. ಇದರ ವಿಶೇಷತೆ ಏನಂದ್ರೆ ಈ ಫ್ರೆಂಚ್ ಫ್ರೈಸ್​​ನ ಮೇಲೆ ಚಿನ್ನದ ಪುಡಿಯನ್ನ ಉದುರಿಸಲಾಗಿರುತ್ತೆ. ಹೀಗಾಗಿ ಈ ವಿನೂತನ ಫ್ರೆಂಚ್ ಫ್ರೈಸ್​ಗೆ 15,000 ರೂ ಫಿಕ್ಸ್ ಮಾಡಲಾಗಿದೆ. ಅಲ್ಲದೇ ಈ ಮೂಲಕ ಶೆಫ್ ಜೋ ಮತ್ತು ಶೆಫ್ ಫ್ರೆಡ್ಡಿ ಹೊಸ ಗಿನ್ನಿಸ್ ದಾಖಲೆ ಮುರಿದಿದ್ದಾರೆ.

 

 

View this post on Instagram

 

A post shared by Serendipity 3 (@serendipity3nyc)

ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸೆರೆಂಡಿಪ್ಟಿ3.. ನಾವು ಹೊಸ ಡಿಶ್ ಒಂದನ್ನ ತಯಾರಿಸುವ ಮೂಲಕ ಹೊಸ ಗಿನ್ನಿಸ್ ದಾಖಲೆ ಮುರಿದಿದ್ದೇವೆ. ಶೆಫ್ ಜೋ ಮತ್ತು ಶೆಫ್ ಫ್ರೆಡ್ಡಿ ಈ ಮೂಲಕ ರಾಷ್ಟ್ರೀಯ ಫ್ರೆಂಚ್ ಫ್ರೈಡೇ ಆಚರಿಸಿದ್ದಾರೆ ಎಂದು ಬರೆದುಕೊಂಡಿದೆ. ಇನ್ನು ಈ ಫ್ರೆಂಚ್ ಫ್ರೈಸ್ ನಲ್ಲಿ ತಿನ್ನಬಹುದಾದ 23k ಗೋಲ್ಡ್ ಬಳಸಲಾಗಿದೆ ಎಂದು ಹೇಳಿದೆ.

The post ಚಿನ್ನದ ಧೂಳಿನ ಫ್ರೆಂಚ್ ಫ್ರೈಸ್ ತಯಾರಿಸಿದ ನ್ಯೂಯಾರ್ಕ್ ಬಾಣಸಿಗರು.. ಬೆಲೆ ಎಷ್ಟು ಗೊತ್ತಾ? appeared first on News First Kannada.

Source: newsfirstlive.com

Source link