ಕೋಲಾರ: ಒಂದೆಡೆ ಜನರಿಗೆ ಕೊರೊನಾ ಸೋಂಕು ತಗುಲುತ್ತಿದ್ದರೆ ಮತ್ತೊಂದೆಡೆ ಮಾನವೀಯತೆಗೂ ಸೋಂಕು ಬಡಿದಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕೋಲಾರದಲ್ಲೊಂದು ಅಮಾನವೀಯ ಘಟನೆ ನಡೆದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಂಗೊಂಡಹಳ್ಳಿ ಗ್ರಾಮದ ನೀಲಾವತಿ(48) ಇದ್ದಕ್ಕಿದ್ದಂತೆ ರಸ್ತೆ ಮಧ್ಯೆ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ. ಮಹಿಳೆ ಮೃತಪಟ್ಟು ಮೂರು-ನಾಲ್ಕು ಗಂಟೆಗಳಾದ್ರೂ ಯಾವೊಬ್ಬ ವ್ಯಕ್ತಿಯೂ ಸಹ ಮಹಿಳೆಯ ಮೃತದೇಹವನ್ನ ಮುಟ್ಟಿಲ್ಲ.

ಮಹಿಳೆಗೆ ಕೊರೊನಾ ಸೋಂಕಿದ್ದಿರಬಹುದು.. ಸೋಂಕಿನಿಂದಲೇ ಮೃತಪಟ್ಟಿರಬಹುದೆಂದು ಆತಂಕಗೊಂಡ ಜನರು ಮಹಿಳೆಯ ಮೃತದೇಹವನ್ನು ಮುಟ್ಟಲು ಹೋಗಿಲ್ಲ ಎನ್ನಲಾಗಿದೆ. ನಂತರ ತಾಯಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಕೊರೊನಾ ಪರೀಕ್ಷೆ ನಡೆಸಿದಾಗ ಮಹಿಳೆಗೆ ಕೊರೊನಾ ಇಲ್ಲದಿರೋದು ಗೊತ್ತಾಗಿದೆ. ತಹಶೀಲ್ದಾರ್ ರಾಜಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.

The post ಚಿನ್ನದ ನಾಡಿನಲ್ಲಿ ಮಾನವೀಯತೆಗೆ ಬಡಿದ ಸೋಂಕು.. ರಸ್ತೆ ಮಧ್ಯೆ ಪ್ರಾಣಬಿಟ್ಟ ಮಹಿಳೆ ಮುಟ್ಟದ ಜನರು appeared first on News First Kannada.

Source: newsfirstlive.com

Source link