ಚಿನ್ನದ ಸರ, ಬೈಕ್ ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರ ಬಂಧನ: 14.45 ಲಕ್ಷ ಮೌಲ್ಯದ ಚಿನ್ನಾಭರಣ ವಶ | Three notorious thieves arrested: 14.45 lakh worth of jewelery Detained


ಚಿನ್ನದ ಸರ, ಬೈಕ್ ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರ ಬಂಧನ: 14.45 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮೂವರು ಬಂಧಿತ ಆರೋಪಿಗಳು

ತಮ್ಮ ತೋಟದ ಮರವೊಂದಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಜೊನಿಗರಹಳ್ಳಿ ಗ್ರಾಮದಲ್ಲಿ ನಡೆದಿದೆ.

ತುಮಕೂರು: ಚಿನ್ನದ ಸರ, ಬೈಕ್ ಕಳವು ಮತ್ತು ಕೊಲೆ ಸುಲಿಗೆಯಲ್ಲಿ ತೊಡಗಿದ್ದ ಮೂವರ ಕಳ್ಳರ (Thieves) ಬಂಧಿಸಿದ್ದು, 14.45 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ. ಕ್ಯಾತ್ಸಂದ್ರ ಹಾಗೂ ಹೆಬ್ಬೂರು ಪೊಲೀಸರ ಕಾರ್ಯಾಚರಣೆ ಮಾಡಿ, ಯತೀಶ್ (26) ಜಯಂತ್ (23) ಚಂದ್ರಶೇಖರ್ (26) ಮೂವರು ಆರೋಪಿಗಳು. ಬಂಧಿತರು ಚಿಕ್ಕಮಗಳೂರು ಹಾಗೂ ರಾಮನಗರ ಜಿಲ್ಲೆಯವರು ಎನ್ನಲಾಗಿದೆ. ಕ್ಯಾತ್ಸಂದ್ರ ಹಾಗೂ ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಬೈಕ್ ಅಡ್ಡಗಟ್ಟಿ ಚಿನ್ನಾಭರಣ ದೋಚಿದ್ದರು ಎನ್ನಲಾಗಿದೆ. ಚಾಕು ತೋರಿಸಿ ಮಾಂಗಲ್ಯ ಸರ, ಚೈನ್ ಸೇರಿದಂತೆ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು. ಕ್ಯಾತ್ಸಂದ್ರ ಹಾಗೂ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಅಪಾರ್ಟ್​​ಮೆಂಟ್​ನಲ್ಲಿ ಕಳವು: ಇಬ್ಬರ ಬಂಧನ

ಬೆಂಗಳೂರು: ಅಪಾರ್ಟ್​​ಮೆಂಟ್​ನಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇಸೈರಾಜ್, ಆನಂದ್​ನನ್ನ ಬಂಧಿಸಿ 19 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

TV9 Kannada


Leave a Reply

Your email address will not be published.