
ಉಮೇಶ್ ಶಿವಜೋಗಿಮಠ
ಎಪಿಎಂಸಿ ಬಳಿಯ ವೇ ಬ್ರಿಡ್ಜ್ ಬಳಿ ಸಂಜೆ ಕೆಲವು ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಚಿನ್ನಿದಾಂಡು ಆಟದ ವೇಳೆ ಮೃತ ಉಮೇಶನ ಟಿಪ್ಪರ್ಗೆ ಚಿನ್ನಿ ಬಡಿದಿದ್ದರಿಂದ ಜಗಳ ಶುರುವಾಗಿತ್ತು. ಚಿನ್ನಿದಾಂಡು ಆಡುತ್ತಿದ್ದ ಐದಾರು ಮಂದಿಯಿಂದ ಉಮೇಶ್ ಮೇಲೆ ಹಲ್ಲೆ ನಡೆದಿದೆ.
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ನಿನ್ನೆ(ಜೂನ್ 01) ಸಂಜೆ ಚಿನ್ನಿದಾಂಡು ಆಡುತ್ತಿದ್ದ ಕೆಲವರ ನಡುವೆ ಜಗಳ ಶುರುವಾಗಿ ಅದು ಕೊಲೆಯಲ್ಲಿ ಅಂತ್ಯ ಕಂಡಿದೆ. ಎಪಿಎಂಸಿ ಬಳಿ ಐದಾರು ಮಂದಿಯಿಂದ ಉಮೇಶ್ ಶಿವಜೋಗಿಮಠ (40) ಕೊಲೆಯಾಗಿದೆ.
ಎಪಿಎಂಸಿ ಬಳಿಯ ವೇ ಬ್ರಿಡ್ಜ್ ಬಳಿ ಸಂಜೆ ಕೆಲವು ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಚಿನ್ನಿದಾಂಡು ಆಟದ ವೇಳೆ ಮೃತ ಉಮೇಶನ ಟಿಪ್ಪರ್ಗೆ ಚಿನ್ನಿ ಬಡಿದಿದ್ದರಿಂದ ಜಗಳ ಶುರುವಾಗಿತ್ತು. ಚಿನ್ನಿದಾಂಡು ಆಡುತ್ತಿದ್ದ ಐದಾರು ಮಂದಿಯಿಂದ ಉಮೇಶ್ ಮೇಲೆ ಹಲ್ಲೆ ನಡೆದಿದೆ. ಐದಾರು ಜನರ ಏಟಿನಿಂದ ಹಲ್ಲೆಗೊಳಗಾದ ಉಮೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಉಮೇಶ್ ಮೃತಪಟ್ಟಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ SP ಹನುಮಂತರಾಯ ಹಾಗೂ ಶಿಗ್ಗಾಂವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಕೊಲೆ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.