ಪ್ರಾಣಿಗಳು ಆಗಾಗ ಮಾಡುವ ತುಂಟಾಟ ಎಂಥವ್ರನ್ನೂ ಅಟ್ರ್ಯಾಕ್ಟ್​ ಮಾಡಿಬಿಡುತ್ತದೆ. ಸಾಕು ಪ್ರಾಣಿಗಳು ಮಾಡುವ ಕೀಟಲೆಗಳು ಮನೆಯವ್ರಿಗೆ ಅಚ್ಚುಮೆಚ್ಚು. ಅದರಂತೆ ಥೈಲ್ಯಾಂಡ್​ನ ಎಲಿಫೆಂಟ್​ ನೇಚರ್​ ಪಾರ್ಕ್​​ನಲ್ಲಿ ಮರಿಯಾನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದೆ.

ಚಿಮ್ಮುವ ನೀರಿನಲ್ಲಿ ಸ್ವರ್ಗ ಕಂಡ ಕ್ಯೂಟ್ ಆನೆಮರಿ
ಎಲಿಫೆಂಟ್ ನೆಚರ್ ಪಾರ್ಕ್​​ನಲ್ಲಿ ನೀರಿನ ಪೈಪ್​ ಒಂದು ಒಡೆದು ನೀರು ಒಂದೇ ಸಮನೆ ಚಿಮ್ಮುತ್ತಿತ್ತು. ಅಲ್ಲಿಗೆ ಓಡೋಡಿ ದೌಡಾಯಿಸಿದ ಆನೆ ಮರಿ, ನೀರಿನ ಜೊತೆ ಆಟಕ್ಕೆ ಇಳಿದಿದೆ.  ​​ನೀರು ಉಕ್ಕುವ ಸ್ಥಳಕ್ಕೆ ಹೋಗಿ ಮತ್ತೆ ಮತ್ತೆ ಕುಣಿದು ಕುಪ್ಪಳಿಸಿದೆ. ತನ್ನ ಮರಿಯ ತಂಟಾಟವನ್ನ ನೋಡುತ್ತ ದೊಡ್ಡ ಆನೆ ಅಲ್ಲೇ ನಿಂತಿತ್ತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಾ ಇದೆ.

 

The post ಚಿಮ್ಮುವ ನೀರಿನಲ್ಲಿ ಸ್ವರ್ಗ ಕಂಡ ಆನೆಮರಿ.. ತುಂಟಾಟ ಕಂಡು ನಕ್ಕು ನಕ್ಕು ಸುಸ್ತಾದ ನೆಟ್ಟಿಗರು appeared first on News First Kannada.

Source: newsfirstlive.com

Source link