ಚಿರಂಜೀವಿ ಚಿತ್ರದಲ್ಲಿ ಸಲ್ಮಾನ್​ ಖಾನ್​ ಡ್ಯಾನ್ಸ್​ ನಂಬರ್​​.. ಹಾಲಿವುಡ್ ಸಿಂಗರ್​​ ಗಾಯನ


ಮಲಯಾಳಂನಲ್ಲಿ ನಟ ಮೋಹನ್​ ಲಾಲ್​​ ನಟಿಸಿದ್ದ ಲೂಸಿಫರ್​ ಸಿನಿಮಾವನ್ನು ತೆಲುಗಿನಲ್ಲಿ ಗಾಡ್​​ ಫಾದರ್​ ಹೆಸರಿನಲ್ಲಿ ರಿಮೇಕ್​​ ಮಾಡಲಾಗುತ್ತಿದೆ. ಇತ್ತೀಚೆಗೆ ಸಿನಿಮಾ ತಂಡ ಹೈದರಾಬಾದ್​​ನಲ್ಲಿ ಶೂಟಿಂಗ್​ ಕೂಡ ಆರಂಭ ಮಾಡಿತ್ತು. ಈ ಸಿನಿಮಾದಲ್ಲಿ ಬಾಲಿವುಡ್​​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರೋದು ಖಚಿತವಾಗಿದೆ.

ಟಾಲಿವುಡ್​ ಮೆಗಸ್ಟಾರ್ ಚಿರಂಜೀವಿ ಸದ್ಯ ಕೋರಟಾಲ ಶಿವ ನಿರ್ದೇಶನದ ಆಚಾರ್ಯ ಸಿನಿಮಾವನ್ನು ಪೂರ್ಣಗೊಳಿಸಿದ್ದು, ಮುಂದಿನ ವರ್ಷ ಫೆ.4ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಚಿರಂಜೀವಿ ಗಾಡ್​ ಫಾದರ್​ ಚಿತ್ರದಲ್ಲಿ ಬಾಲಿವುಡ್​ ನಟ ಸಲ್ಮಾನ್ ಖಾನ್​ ನಟಿಸುತ್ತಿವುದು ಖಚಿತವಾಗಿದೆ ಎಂದು ಚಿತ್ರದ ಸಂಗೀತ ನಿರ್ದೇಶಕ ಎಸ್​​.ತಮನ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲದೇ ಹಾಲಿವುಡ್​ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಒಂದು ಹಾಡುತ್ತದ್ದಾರೆ ಎಂದು ರಿವೀಲ್​ ಮಾಡಿದ್ದಾರೆ.

ಲೂಸಿಫರ್​ ಚಿತ್ರವನ್ನ ನಿರ್ದೇಶನ ಮಾಡಿದ್ದ ಪೃಥ್ವಿರಾಜ್​​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಈ ಪಾತ್ರವನ್ನು ತೆಲುಗಿನಲ್ಲಿ ಮಾಡೋದು ಖಚಿತವಾಗಿದೆ. ಮೊದಲು ಇದನ್ನು ಚಿರಂಜೀವಿ ಪುತ್ರ ರಾಮ್ ಚರಣ್​ ಅಥವಾ ಅಲ್ಲು ಅರ್ಜುನ್​ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಸದ್ಯ ಗಾಡ್​ ಫಾದರ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ಸಲ್ಮಾನ್​ ಖಾನ್​ ನಟಿಸೋದು ಖಚಿತವಾಗಿದ್ದು, ಒಂದು ಹಾಡಿನಲ್ಲೂ ಡ್ಯಾನ್ಸ್​ ಮಾಡಲಿದ್ದಾರಂತೆ. ಚಿತ್ರತಂಡ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಗೊಳಿಸಲು ತಯಾರಿ ನಡೆಸಿದೆಯಂತೆ.. ಅಲ್ಲದೇ ಚಿರಂಜೀವಿ ಅವರಿಗಾಗಿ ಚಿತ್ರದ ಕಥೆಯಲ್ಲಿ ಬದಲಾವಣೆಗಳನ್ನು ಕೂಡ ಮಾಡಲು ಚಿತ್ರತಂಡ ಮುಂದಾಗಿದೆ ಎನ್ನಲಾಗಿದೆ.

The post ಚಿರಂಜೀವಿ ಚಿತ್ರದಲ್ಲಿ ಸಲ್ಮಾನ್​ ಖಾನ್​ ಡ್ಯಾನ್ಸ್​ ನಂಬರ್​​.. ಹಾಲಿವುಡ್ ಸಿಂಗರ್​​ ಗಾಯನ appeared first on News First Kannada.

News First Live Kannada


Leave a Reply

Your email address will not be published. Required fields are marked *