ಯುವ ಸಾಮ್ರಾಟ್​​ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ ಒಂದು ವರ್ಷ. ಚಿರು ಮೊದಲ ವರ್ಷದ ಪುಣ್ಯಸ್ಮರಣೆಗೆ ಕುಟುಂಬಸ್ಥರು ಚಿರು ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಚಿರು ಸಹೋದರ ಧ್ರುವ ಸರ್ಜಾ ಸದ್ಯ ಅಣ್ಣನ ಸಮಾಧಿ ಬಳಿ ಆಗಮಿಸಿದ್ದಾರೆ.

ಕನಕಪುರ ರಸ್ತೆಯ ಕಗ್ಗಲಿಪುರದ ನೆಲಗುಳಿಯ ಬೃಂದಾವನ ಫಾರ್ಮ್​ಹೌಸ್​ನಲ್ಲಿ ಚಿರು ಸಮಾಧಿ ಇದ್ದು, ಈಗಾಗಲೇ ಚಿರು ಅಜ್ಜಿ ಲಕ್ಷ್ಮೀದೇವಮ್ಮ ಆಗಮಿಸಿದ್ದಾರೆ. ಸದ್ಯ ಧ್ರುವ ಸರ್ಜಾ ಆಗಮಿಸಿದ್ದು, ಉಳಿದ ಕುಟುಂಬ ಸದಸ್ಯರು ಇನ್ನೇನು ಫಾರ್ಮ್​ಹೌಸ್​ ಸೇರಲಿದ್ದಾರೆ.

The post ಚಿರು ಮೊದಲ ವರ್ಷದ ಪುಣ್ಯಸ್ಮರಣೆ; ಅಣ್ಣನ ಸಮಾಧಿ ಬಳಿ ಆಗಮಿಸಿದ ಧ್ರುವ ಸರ್ಜಾ appeared first on News First Kannada.

Source: newsfirstlive.com

Source link