ಚೀನಾದಲ್ಲಿ ಮಕ್ಕಳದ್ದೇ ಪ್ರಾಬ್ಲಮ್; ಸತತ 5ನೇ ವರ್ಷವೂ ಕುಸಿದ ಜನನ ಪ್ರಮಾಣ


ಚೀನಾದಲ್ಲಿ ಸತತ ಐದನೇ ವರ್ಷವೂ ಜನನ ಪ್ರಮಾಣದಲ್ಲಿ ಭಾರೀ ಕುಸಿತ ಕಂಡುಬಂದಿದೆ. 2021ರಲ್ಲಿ ಕೇವಲ 4.80 ಲಕ್ಷ ಜನಸಂಖ್ಯೆ ಹೆಚ್ಚಳವಾಗಿದ್ದು, ಒಟ್ಟು 141.26 ಕೋಟಿಗೆ ತಲುಪಿದೆ. ಈ ಮೂಲಕ ಸತತ ಐದನೇ ಬಾರಿಯೂ ಚೀನಾದಲ್ಲಿ ಜನನ ಪ್ರಮಾಣ ಕುಂಠಿತವಾಗಿದ್ದು, ಇದು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ.

ಇನ್ನು ಜನಸಂಖ್ಯೆ ಕುಸಿತ ತಡೆಯಲು ಚೀನಾ ಸರ್ಕಾರ ಮುಂದಾಗಿದ್ದು, ಒಂದು ಕುಟುಂಬ 3 ಮಕ್ಕಳನ್ನು ಹೊಂದುವಂತೆ ಪ್ರೇರೇಪಣೆ ನೀಡಲಾಗ್ತಿದೆ. ಪೋಷಕರ ರಜೆ, ಹೆರಿಗೆ ರಜೆ, ಮದುವೆ ರಜೆ ಸೇರಿದಂತೆ ಇತರೆ ಕ್ರಮಗಳ ಮೂಲಕ ಜನನ ಪ್ರಮಾಣವನ್ನು ಹೆಚ್ಚಿಸಲು ಚೀನಾ ಸರ್ಕಾರ ಚಿಂತನೆ ನಡೆಸುತ್ತಿದೆ.

News First Live Kannada


Leave a Reply

Your email address will not be published. Required fields are marked *