ಚೀನಾದಲ್ಲಿ ಭಾರೀ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯುತ್ತಿವೆ.. ತುಂಬಿ ಹರಿದ ನದಿಗಳಿಂದಾಗಿ ಡ್ಯಾಂಗಳಲ್ಲಿ ನೀರು ಅಳತೆ ಮೀರಿ ತುಂಬಿದ ಪರಿಣಾಮ ಎರಡು ಡ್ಯಾಂಗಳು ಕುಸಿದು ಬಿದ್ದಿವೆ.

ಉತ್ತರ ಚೀನಾದ ಮೊಂಗೋಲಿಯಾ ಬಳಿ ಎರಡು ಡ್ಯಾಂಗಳು ಕುಸಿದಿರುವ ವಿಡಿಯೋ ಮೊಬೈಲ್​ಗಳಲ್ಲಿ ಸೆರೆಯಾಗಿದೆ. ಡ್ಯಾಂ ಕುಸಿತದಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎನ್ನಲಾಗಿದೆ. ಘಟನೆಯಿಂದಾಗಿ 16,660 ಮಂದಿ ನಿರಾಶ್ರಿತರಾಗಿದ್ದು 21,708 ಹೆಕ್ಟೇರ್ ಕೃಷಿ ಜಮೀನು ಕೊಚ್ಚಿಹೋಗಿದೆ. ಅಲ್ಲದೇ 22 ಸೇತುವೆಗಳು ಸಹ ಡ್ಯಾಂ ಕುಸಿತದಿಂದಾಗಿ ಮುರಿದುಬಿದ್ದಿವೆ ಎನ್ನಲಾಗಿದೆ. ನದಿ ಪಾತ್ರದ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.

The post ಚೀನಾದಲ್ಲಿ ಮಹಾಮಳೆ; 2 ಡ್ಯಾಂಗಳು ಕುಸಿತ..ಮುರಿದು ಬಿದ್ದ 22 ಸೇತುವೆಗಳು appeared first on News First Kannada.

Source: newsfirstlive.com

Source link