ಬೀಜಿಂಗ್: ಮೂರು ವರ್ಷದಷ್ಟು ಚಿಕ್ಕ ಮಕ್ಕಗಳಿಗೂ ಕೋವಿಡ್ 19 ಲಸಿಕೆ ನೀಡಲು ಚೀನಾ ಸರ್ಕಾರ ಮುಂದಾಗಿದೆ. ಚೀನಾ, ಚಿಕ್ಕ ಮಕ್ಕಳಿಗೆ ಲಸಿಕೆ ನೀಡಲು ತುರ್ತು ಬಳಕೆಯ ಅನುಮತಿ ಪಡೆದ ಮೊದಲ ದೇಶ ಎಂದೆನಿಸಿಕೊಂಡಿದೆ.

ಸಿನೋವ್ಯಾಕ್ ಕಂಪನಿಯ CoronaVac ಲಸಿಕೆಯನ್ನು 3-17 ವರ್ಷದ ವಯಸ್ಸಿನವರಿಗೆ ನೀಡಲು ತುರ್ತು ಬಳಕೆಗೆ ಅನುಮೋದನೆ ದೊರಕಿದೆ ಅಂತ ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ, ಯಾವಾಗಿನಿಂದ ಲಸಿಕೆ ನೀಡಲಾಗುವುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಲಸಿಕೆಯ ಲಭ್ಯತೆಯ ಬಗ್ಗೆ ರಾಷ್ಟ್ರೀಯ ಆರೋಗ್ಯ ಆಯೋಗ ನಿರ್ಧರ ಮಾಡುತ್ತೆ ಅಂತ ಹೇಳಿದ್ದಾರೆ.

The post ಚೀನಾದಲ್ಲಿ 3 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲು ಅನುಮೋದನೆ appeared first on News First Kannada.

Source: newsfirstlive.com

Source link