ಜಗತ್ತಿಗೆ ಕೊರೊನಾ ವೈರಸ್ ಹಂಚಿದ್ದ ಚೀನಾದಲ್ಲಿ ಇದೀಗ ಮಂಕಿ ಬಿ(BV) ವೈರಸ್ ಭೀತಿ ಎದುರಾಗಿದೆ. ಇತ್ತೀಚೆಗೆ ಚೀನಾದಲ್ಲಿ ಮೊದಲ ಬಾರಿಗೆ ಪಶುವೈದ್ಯನೋರ್ವನಲ್ಲಿ ಈ ಮಂಕಿ ವೈರಸ್ ಸೋಂಕು ಕಾಣಿಸಿಕೊಂಡಿತ್ತು. ಇದೀಗ 53 ವರ್ಷದ ಸೋಂಕಿತ ಪಶುವೈದ್ಯ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆಂದು ಚೀನಾದ ಮುಖವಾಣ ಗ್ಲೋಬಲ್ ಟೈಮ್ಸ್ ಹೇಳಿದೆ. ಪಶುವೈದ್ಯ ಮೇ 27 ರಂದೇ ಸಾವನ್ನಪ್ಪಿದ್ದು ತಡವಾಗಿ ವಿಷಯ ಬೆಳಕಿಗೆ ಬಂದಿದೆ.

ಕಳೆದ ಎರಡು ತಿಂಗಳಲ್ಲಿ ಈ ಪಶುವೈದ್ಯ ಸೋಂಕು ತಗುಲಿದ್ದ ಎರಡು ಸಾವನ್ನಪ್ಪಿದ ಕೋತಿಗಳನ್ನ ಅಧ್ಯಯನ ನಡೆಸಿದ್ದ ಎನ್ನಲಾಗಿದೆ. ಕೋತಿಗಳಲ್ಲಿ ವಾಂತಿ ಗುಣಲಕ್ಷಣ ಕಾಣಿಸಿಕೊಂಡಿತ್ತಂತೆ. ಇದರಿಂದ ಸೋಂಕಿಗೊಳಗಾಗಿದ್ದ ಎನ್ನಲಾದ ಪಶುವೈದ್ಯ ಚಿಕಿತ್ಸೆಗಾಗಿ ಹಲವು ಆಸ್ಪತ್ರೆಗಳಿಗೆ ಸುತ್ತಾಡಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ ಎನ್ನಲಾಗಿದೆ.

1932 ರಲ್ಲಿ ಈ ವೈರಸ್​​ನ್ನು ಪ್ರಾರಂಭಿಕವಾಗಿ ಐಸೋಲೇಟ್ ಮಾಡಲಾಗಿತ್ತು.. ಈ ವೈರಸ್​ಗೆ ಆಲ್ಫಾಹೆರ್ಪೆಸ್​ವೈರಸ್ ಎನ್​ಜೋಟಿಕ್ ಎಂಬ ಹೆಸರೂ ಇದೆಯಂತೆ. ಇದು ನೇರ ಸಂಪರ್ಕದಿಂದ ಮತ್ತು ದೈಹಿಕ ಸ್ರವಿಸುವಿಕೆಯಿಂದಲೂ ಹರಡಬಹುದು.. 70 ರಿಂದ 80 ಪರ್ಸೆಂಟ್ ಮರಣ ಪ್ರಮಾಣ ಹೊಂದಿದೆ ಎಂದು ಹೇಳಲಾಗಿದೆ.

The post ಚೀನಾದಲ್ಲೀಗ ‘ಮಂಕಿ B(BV)’ ವೈರಸ್ ಭೀತಿ.. ಆತಂಕ ಹುಟ್ಟಿಸಿದ ಮೊದಲ ಸೋಂಕಿತನ ಸಾವು appeared first on News First Kannada.

Source: newsfirstlive.com

Source link