ಹೆಮ್ಮಾರಿ ಕೊರೊನಾ ನಡುವೆ ಇದೀಗ ಚೀನಾದ ಸಂಶೋಧಕರು ಮತ್ತೊಂದು ಶಾಕಿಂಗ್ ಮಾಹಿತಿಯನ್ನು ಹೊರಹಾಕಿದ್ದಾರೆ. ಚೀನಾದಲ್ಲಿರೋ ಬಾವಲಿಗಳಲ್ಲಿ 24 ಬಗೆಯ ಕೊರೊನಾ ವೈರಸ್ ಪತ್ತೆಯಾಗಿದೆ ಅಂತ ಹೇಳಿದ್ದಾರೆ.

ಸೆಲ್ ಜರ್ನ್ ಹೆಸರಿನಲ್ಲಿ ಈ ವರದಿಯನ್ನು ಪ್ರಕಟ ಮಾಡಿರೋ ಸಂಶೋಧಕರು, SARS-CoV-2 ಮಾದರಿಯ ಕೊರೊನಾ ವೈರಸ್ ಬ್ಯಾಟ್ಸ್​ನಲ್ಲಿ ಪತ್ತೆಯಾಗಿವೆ ಅಂತ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ನಾವು ವಿವಿಧ ಬಾವಲಿ ಪ್ರಭೇದಗಳಿಂದ 24 ಹೊಸ ಕೊರೊನಾವೈರಸ್​​ ಜೀನೋಮ್‌ಗಳನ್ನು ಒಟ್ಟುಗೂಡಿಸಿದ್ದೇವೆ. ಇದರಲ್ಲಿ ನಾಲ್ಕು SARS-CoV-2 ವೈರಸ್​ ಕೂಡ ಸೇರಿದೆ ಎಂದು ಶಾನ್​ಡಾಂಗ್ ವಿಶ್ವವಿದ್ಯಾಲಯದ ಸಂಶೋಧಕರು ಜರ್ನಲ್ ಸೆಲ್​ನಲ್ಲಿ ಪ್ರಕಟವಾಗಿರೋ ವರದಿಯಲ್ಲಿ ತಿಳಿಸಿದ್ದಾರೆ.

ಕಳೆದ ನವೆಂಬರ್​​ನಲ್ಲಿ ಬಾವಲಿಗಳ ಬಾಯಿಯ ಎಂಜಲು ಮತ್ತು ಮೂತ್ರವನ್ನ ಸಂಗ್ರಹಿಸಿ ಸಂಶೋಧನೆ ಮಾಡಿದಾಗ ಈ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ ಎಂದು ವರದಿಯಾಗಿದೆ.

The post ಚೀನಾದ ಬಾವಲಿಗಳಲ್ಲಿ 24 ಬಗೆಯ ಹೊಸ ಕೊರೊನಾ ವೈರಸ್ ಪತ್ತೆ  appeared first on News First Kannada.

Source: newsfirstlive.com

Source link