ಚೀನಾದ ಅಧ್ಯಕ್ಷ ಶಿ ಜಿನ್​ಪಿಂಗ್ ತನ್ನನ್ನು ತಾನು ಡ್ರಾಗನ್ ದೇಶದ ಅನಭಿಷಕ್ತ ದೊರೆಯಾಗಿ ಪ್ರತಿಷ್ಠಾಪಿಸಿಕೊಂಡಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಾರ್ಟಿ ಸಂಸ್ಥಾಪಕರಿಗೆ ಯಾವ ಆತಂಕ ಕಾಡಿತ್ತು.. ಆ ಆತಂಕವನ್ ಸತ್ಯವನ್ನಾಗಿ ಪರಿವರ್ತಿಸುವಲ್ಲಿ ಶಿ ನಿರತರಾಗಿದ್ದಾರೆ. ದಿ ಗ್ರೇಟ್ ಡಿಕ್ಟೇಟರ್​​ ಅವತಾರ ಎತ್ತಲು ಸಿದ್ಧವಾಗಿರೋ ಶಿ.. ಜಗತ್ತಿಗೂ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ಚೀನಾದಲ್ಲಿ ನಡೆದ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಗಮನಿಸಿದ್ರೆ.. ಖಂಡಿತ ನೀವೂ ಇದೇ ಉದ್ಘಾರ ತೆಗಿತೀರಿ.. ಇನ್​ಫ್ಯಾಕ್ಟ್ ನೀವು ಅಷ್ಟೇ ಅಲ್ಲ.. ವಿಶ್ವದ ಯಾವ ವ್ಯಕ್ತಿ ನೋಡಿದ್ರೂ.. ಇದೇ ಉದ್ಘಾರ ಬರೋದು ಸಹಜ.. ಹೀಗೆ ನೀವು ಉದ್ಘಾರ ತೆಗೆಯಲೇ ಬೇಕು.. ಅಂತಾ ತಾನೆ ಇಷ್ಟೆಲ್ಲ ಅರೆಂಜ್​​ಮೆಂಟ್ಸ್​ ಮಾಡಿರೋದು.. ಹೀಗೆ ಜನ ಉದ್ಘಾರ ತೆಗೆದಾಗ ತಾನೆ ಶಿ ಜಿನ್​ಪಿಂಗ್​ ಹೀರೋ ಆಗೋದು.. ಚೀನಾದ ಸಂಪೂರ್ಣ ಪವರ್​​ ಇನ್ನಷ್ಟು ಅವರ ಮುಷ್ಠಿಯಲ್ಲೇ ಬಂದ್​ ಆಗೋದು.. ಕಲರ್ ಕಲರ್ ಕನ್ನಡಕ ತೊಟ್ಟ ಕಣ್ಣಿಗೆ ಕಾಣೋದೆಲ್ಲ ಕಾಮನ ಬಿಲ್ಲೇ.. ಆದ್ರೆ ಆ ಕನ್ನಡಕದಾಚೆಗಿನ ವಾಸ್ತವ ಬೇರೇನೆ ಅನ್ನೋದು ಅರಿವಾಗೋಕು ಹೆಚ್ಚು ಸಮಯ ಬೇಡ..

Bridge P2C: ಚೀನಾ ಅಂದ್ರೆ ಕಮ್ಯುನಿಸ್ಟ್​ ಪಾರ್ಟಿ.. ಕಮ್ಯುನಿಸ್ಟ್ ಪಾರ್ಟಿ ಅಂದ್ರೆ ಶಿ ಜಿನ್​ಪಿಂಗ್.. ಚೀನಾ ಕಂಡ ಸರ್ವೋಚ್ಚ ನಾಯಕರಲ್ಲಿ ಒಬ್ಬರಾದ ಮಾವೋ ಶೂಗೆ ತಮ್ಮ ಕಾಲೇ ಫಿಟ್​ ಆಗೋದು.. ಮಾವೋ ಬಿಟ್ರೆ ಚೀನಾದ ಅತ್ಯಂತ ದೊಡ್ಡ ಲೀಡರ್​ ತಾನು ಅಂತ ತೋರಿಸಿಕೊಳ್ಳಬೇಕು ಅನ್ನೋ ಮಹತ್ವಾಕಾಂಕ್ಷೆ ಹೊಂದಿರೋ ಶಿ.. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಯಾವ ಅಧ್ಯಕ್ಷನೂ ಎರಡು ಅವಧಿಗಿಂತ ಹೆಚ್ಚು ಸಮಯ ದೇಶದ ಚುಕ್ಕಾಣಿ ಹಿಡಿಯುವಂತಿಲ್ಲ ಅನ್ನೋ ಕಮ್ಯುನಿಸ್ಟ್ ಸರ್ಕಾರದ ಕಾನೂನನ್ನೇ ಬುಡಮೇಲು ಮಾಡಲು ಹೊರಟಿರೋ ಶಿ ಜಿನ್​ಪಿಂಗ್, ಇದಕ್ಕಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ನೂರನೇ ವರ್ಷದ ದಿನವನ್ನೇ ಬಳಸಿಕೊಳ್ತಿರೋದು ಮಾತ್ರ ವಿಪರ್ಯಾಸ..

ಹೌದು.. 1921ರ ಜುಲೈ 1 ರಂದು ಚೀನಾದ ಕಮ್ಯುನಿಸ್ಟ್​ ಪಾರ್ಟಿ ಸ್ಥಾಪನೆಯಾಗಿತ್ತು.. ಇದೇ ಕಾರಣದಿಂದಾಗಿ ಕಳೆದ ವಾರದಿಂದ ಚೀನಾದಲ್ಲಿ ಸೆಲೆಬ್ರೇಷನ್​ಗಳನ್ನ ಮಾಡಲಾಗ್ತಿದೆ.. ಸಾವಿರಾರು ಸಂಖ್ಯೆಯ ಕಲಾವಿದರು ರೂಪ ನಾಟಕದ ಮೂಲಕ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಸ್ಥಾಪನೆಗೆ ಕಾರಣ.. ಸ್ಥಾಪನೆಯಾದ ಬಳಿಕ ಅದು ಪಟ್ಟ ಕಷ್ಟ ಮತ್ತು ಅದು ತಂದಂಥ ಕ್ರಾಂತಿ ಬಗ್ಗೆ ಯುವ ಜನತೆಗೆ ತಿಳಿಸಿಕೊಡುವ ಯತ್ನ ನಡೆಸಿದ್ದಾರೆ. ಎಷ್ಟೋ ಕಾರ್ಯಕ್ರಮಗಳಲ್ಲಿ ಪಾಲಿಟ್ ಬ್ಯೂರೋ ಸದಸ್ಯರು, ಉನ್ನತ ನಾಯಕರು..ಅಷ್ಟೇ ಏಕೆ.. ಸ್ವತಃ ಶಿ ಜಿನ್​ಪಿಂಗ್ ಕೂಡ ಭಾಗವಹಿಸಿದ್ದಾರೆ.. ಅದ್ರಲ್ಲೂ ನಿನ್ನೆಯಂತೂ ದೊಡ್ಡ ಪ್ರಮಾಣದಲ್ಲಿ ಸಂಸ್ಥಾಪನಾ ದಿನಾಚರಣೆ ಆಚರಿಸಲಾಗಿದ್ದು.. ಚೀನಾದ ಅಧ್ಯಕ್ಷ ಬರೋಬ್ಬರಿ 1 ಗಂಟೆಗೂ ಅಧಿಕ ಕಾಲ ಭಾಷಣ ಮಾಡಿ.. ಇಡೀ ವಿಶ್ವಕ್ಕೇ ಎಚ್ಚರಿಕೆ ನೀಡಿದ್ದಾರೆ..

ಶತಮಾನೋತ್ಸವ ಆಚರಿಸಿಕೊಳ್ತಿರೋ CPC ಇತಿಹಾಸವೇನು?

ಎಲ್ಲರಿಗೂ ಗೊತ್ತಿರುವ ಹಾಗೆ ಚೀನಾದಲ್ಲಿ ಏಕ ಪಕ್ಷ ಆಡಳಿತವಿದೆ. ಅಲ್ಲಿ ವಿರೋಧ ಪಕ್ಷ ಅನ್ನೋದೇ ಇಲ್ಲ.. ಅಲ್ಲಿ ಬೇರೆ ಪಾರ್ಟಿಗಳಿಗೆ ಅವಕಾಶವೂ ಇಲ್ಲ.. ಚೈನೀಸ್ ಕಮ್ಯುನಿಸ್ಟ್ ಪಾರ್ಟಿ ಏನು ನಿರ್ಧಾರ ಮಾಡುತ್ತೋ ಅದೇ ಫೈನಲ್.. ಅಲ್ಲಿನ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡ್ರೂ ಅದು ಹಸಿಗೋಡೆ ಮೇಲೆ ಹಳ್ಳು ಹೊಡೆದಂತೆ.. ಅಲ್ಲಿನ ಅಧ್ಯಕ್ಷ ಒಂದು ಕಾನೂನು ತಂದ್ರೆ ಅದು ಬ್ರಹ್ಮ ಬರಹವಿದ್ದಂತೆ.. ಅದನ್ನು ಬದಲಾಯಿಸಿ ಅಂತಾ ಯಾರೂ ಹೇಳಂಗಿಲ್ಲ.. ಅಷ್ಟೇ ಅಲ್ಲ ಅಲ್ಲಿನ ಸೇನೆ ಕೂಡ ಚೀನಾದ ಸೇನೆ ಅಲ್ಲ.. ಬದಲಿಗೆ ಅದು ಕಮ್ಯುನಿಸ್ಟ್ ಪಾರ್ಟಿಯ ಮತ್ತೊಂದು ವಿಂಗ್ ಅಷ್ಟೆ.. ಹೀಗಾಗಿಯೇ ಅದನ್ನ ಪೀಪಲ್ ಲಿಪರೇಶನ್ ಆರ್ಮಿ ಅಂತಾನೇ ಕರೆಯಲಾಗುತ್ತೆ.. ಅಲ್ಲಿನ ಸೈನಿಕರೂ ಸಹ ದೇಶದ ಹೆಸರಲ್ಲಿ ಪ್ರಮಾಣ ಮಾಡಲ್ಲ.. ಬದಲಿಗೆ ನಾವು ಕಮ್ಯುನಿಸ್ಟ್ ಪಕ್ಷಕ್ಕೆ ಬದ್ಧರಾಗಿರ್ತೀವಿ ಅಂತ ಪ್ರಮಾಣ ವಚನ ಸ್ವೀಕರಿಸಬೇಕು.. ಇದು ಇಂದಿನ ನಿಯಮವಲ್ಲ.. ಇದು ಕಳೆದ 72 ವರ್ಷಗಳಿಂದ ನಡೆದುಕೊಂಡು ಬಂದ ಪರಿಪಾಠ.

ಚೀನಾದಲ್ಲಿ ಸರಿ ಸುಮಾರು 2000 ವರ್ಷಗಳ ಹಲವು ರಾಜ ಮನೆತನಗಳು ಅಧಿಕಾರ ನಡೆಸಿದ್ವು.. ಅದ್ರಲ್ಲೂ ಕೊನೆಯದಾಗಿ ಕ್ವಿಂಗ್ ರಾಜ ಮನೆತನ 1644 ರಿಂದ 1912ರ ತನಕ ಚೀನಾದ ಮೇಲೆ ಆಳ್ವಿಕೆ ನಡೆಸಿತು. ತದನಂತರದಲ್ಲಿ ಅಲ್ಪ ಕಾಲ ಬೇರೆ ಆಡಳಿತ ಕೂಡ ಅಲ್ಲಿ ಆರಂಭವಾಗಿತ್ತು.. ಆದ್ರೆ 1919ರಲ್ಲಿ ನಡೆದ ಒಂದು ಘಟನೆ ಚೀನಾದ ಭವಿಷ್ಯವನ್ನೇ ಬದಲಾಯಿತು. ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಹುಟ್ಟಿಕೊಳ್ಳಲು ಕಾರಣವಾಯ್ತು..!

Bridge P2C: ಅದು 1919ನೇ ಇಸ್ವಿ.. ಆಗಸ್ಟೇ ಒಂದನೇ ವಿಶ್ವ ಯುದ್ಧ ಮುಕ್ತಾಯ ಹಂತಕ್ಕೆ ಬಂದಿತ್ತು. ಈ ವೇಳೆ ಒಂದನೇ ವಿಶ್ವ ಯುದ್ಧ ಮುಕ್ತಾಯಗೊಳಿಸಲು ವರ್ಸೈಲ್ಲೆಸ್ ಅನ್ನೋ ಒಪ್ಪಂದ ಪತ್ರಕ್ಕೆ ಸಹಿ ಹಾಕಬೇಕಿತ್ತು. ಈ ವೇಳೆ ಅಂದಿನ ಚೀನಾ ಕೂಡ ಈ ಒಪ್ಪಂದಕ್ಕೆ ಸಹಿ ಹಾಕುತ್ತೆ.. ಆದ್ರೆ ಇದಕ್ಕೆ ಚೀನಿಯರು ತೀವ್ರ ವಿರೋಧ ವ್ಯಕ್ತಪಡಿಸ್ತಾರೆ.. ಯಾಕಂದ್ರೆ ಈ ಒಪ್ಪಂದದ ಅನ್ವಯ ಚೀನಾ 1914ರಲ್ಲಿಯೇ ಜರ್ಮನಿಯಿಂದ ಗೆದ್ದುಕೊಂಡ ಪ್ರದೇಶಗಳನ್ನು ಜಪಾನ್​ಗೆ ಬಿಟ್ಟುಕೊಡಬೇಕಾಯ್ತು.. ಈ ಕಾರಣದಿಂದಾಗಿ ಅಲ್ಲಿನ ಪ್ರತಿಷ್ಠಿತ ಪೆಕಿಂಗ್​​ ಯೂನಿವರ್ಸಿಟಿ ವಿದ್ಯಾರ್ಥಿಗಳನ್ನೂ ಸೇರಿ ಇಡೀ ದೇಶದ ವಿದ್ಯಾರ್ಥಿಗಳನ್ನ ಕೆರಳಿಸಿತ್ತು.. ತಮ್ಮ ಸರ್ಕಾರ ಕೂಡ ಅಶಕ್ತವಾಗಿದೆ ಅನ್ನೋ ಭಾವನೆ ವಿದ್ಯಾರ್ಥಿಗಳಲ್ಲಿ ಬಂದು ಬಿಟ್ಟಿತ್ತು. ಇದೇ ಕಾರಣದಿಂದಾಗಿ ಮೇ 4, 1919ರಂದು ಬೀಜಿಂಗ್​​ನ ಬೀದಿ ಬೀದಿಯಲ್ಲಿ ಪ್ರತಿಭಟನೆಗಳು ನಡೆಯುತ್ತವೆ ಜಪಾನೀಯರ ಪುಸ್ತಕಗಳನ್ನು ಸುಡಲಾಗುತ್ತೆ,, ಈ ಪ್ರತಿಭಟನೆಯೇ ಚೀನಾದಲ್ಲಿ ಕಮ್ಯುನಿಸ್ಟ್ ಪಾರ್ಟಿ ಹುಟ್ಟಲು ಪ್ರಮುಖ ಕಾರಣವಾಗುತ್ತೆ..!

ಹೌದು.. ದೊಡ್ಡ ದೊಡ್ಡ ಬೆಂಕಿಯ ಕೆನ್ನಾಲಿಗೆ ಚಾಚಲೂ ಒಂದು ಕಿಡಿ ಸಾಕು.. ಅಂಥದ್ದೊಂದು ಕಿಡಿ 1919ರಲ್ಲಿ ಚೀನಾದ ಜನ ಮಾನಸದಲ್ಲಿ ಹೊತ್ತಿಕೊಂಡಿತ್ತು.. ಈ ಕಿಡಿಯನ್ನ ಜ್ವಾಲೆಯನ್ನಾಗಿ ಪರಿವರ್ತಿಸುವ ಮತ್ತು ಅದು ಹುಚ್ಚು ಹುಚ್ಚಾಗಿ ಸುಡುವ ಕಾಡ್ಗಿಚ್ಚಾಗುವ ಬದಲು ಸರಿಯಾದ ರೀತಿಯ್ಲಲಿ ಬಳಕೆಯಾಗುವಂತೆ ಮಾಡುವ ಶಕ್ತಿಯೊಂದು ಬೇಕಿತ್ತು. ಆ ಶಕ್ತಿಯಾಗಿ ಹುಟ್ಟಿಕೊಂಡಿದ್ದೇ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ.. ಮಾವೋ ಝೆಡಾಂಗ್ ನೇತೃತ್ವದಲ್ಲಿ ಶುರುವಾದ ಈ ಪಕ್ಷ ದಿನಗಳೆದಂತೆ ಗಟ್ಟಿಯಾಗುತ್ತಾ ಬಂದಿತು.. ಇಂದು ಸುಮಾರು 9 ಕೋಟಿ ಕಾರ್ಯಕರ್ತರನ್ನು ಹೊಂದಿರುವ ಮತ್ತು ಬೃಹತ್ ದೇಶವನ್ನ ಆಳುತ್ತಿರೋ ಶಕ್ತಿಯಾಗಿರೋ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಹಾದಿ ಮಾತ್ರ ಸುಗಮವಾಗಿರಲಿಲ್ಲ..!

ಹೌದು.. ಚೀನಾದ ಕಮ್ಯುನಿಸ್ಟ್ ಪಾರ್ಟಿ ಶಾಂಘೈನಲ್ಲಿ ಜುಲೈ 1, 1921ರಲ್ಲಿ ಹುಟ್ಟಿಕೊಂಡಿತು. ಆದ್ರೆ ಈ ಪಕ್ಷಕ್ಕೆ ವಿರುದ್ಧವಾಗಿ ಚೀನಾದ್ದೇ ಆದ ನ್ಯಾಷನಲಿಸ್ಟ್ ಪಾರ್ಟಿ ಕೂಡ ಸಕ್ರಿಯವಾಗಿತ್ತು.. ಇನ್ನೊಂದೆಡೆ ಶಾಂಘೈನ ಬೀದಿ ಬೀದಿಯನ್ನ ಬ್ರಿಟಿಷರು ತಮ್ಮ ಹಿಡಿತದಲ್ಲಿ ಇರಿಸಿಕೊಂಡಿದ್ರು.. ಇದೇ ಶಾಂಘೈನಲ್ಲಿ 1927ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಮತ್ತು ನ್ಯಾಷನಲಿಸ್ಟ್ ಪಾರ್ಟಿ ಮಧ್ಯೆ ಜಟಾಪಟಿ ನಡೆಯಲು ಶುರುವಾಗುತ್ತೆ.. ಬಳಿಕ ಇದು ಸಿವಿಲ್ ವಾರ್ ಅಥವಾ ಆಂತರಿಕ ಸಂಘರ್ಷವಾಗಿ ಬದಲಾಗುತ್ತೆ.. ಇದೇ ಸ್ಥಿತಿ ಮುಂದಿನ 20 ವರ್ಷ ಚೀನಾದಲ್ಲಿ ಮುಂದುವರೆಯುತ್ತೆ..

 

ರಕ್ತ ಸಿಕ್ತ ಅಧ್ಯಾಯದ ಸಿವಿಲ್ ವಾರ್
ಕಾಮಾನ್ ಎನಿಮಿ ವಿರುದ್ಧ ಒಂದಾಗಿದ್ದ ಪಕ್ಷಗಳು
ನದಿ ನೀರು ಕೆಂಪಾಗಿಸಿದ್ದೇ ಈ ಸಂಘರ್ಷ

ಒಂದೆಡೆ ಚೀನಾದ ಎರಡೂ ಮುಖ್ಯ ಪಕ್ಷಗಳ ನಡುವಿನ ಸಂಘರ್ಷ ಸಾಕಷ್ಟು ರಕ್ತಪಾತಕ್ಕೂ ಕಾರಣವಾಗಿತ್ತು.. ಇಂಥ ಸಂಘರ್ಷ ಆಗಸ ಮುಟ್ಟಿದ್ದಾಗಲೇ.. ಎರಡನೇ ವಿಶ್ವಯುದ್ಧ ಆರಂಭವಾಗಿಬಿಡುತ್ತೆ.. ಈ ಹಿನ್ನೆಲೆಯಲ್ಲಿ 1937ರಲ್ಲಿ ಈ ಎರಡೂ ಪಕ್ಷಗಳು ಜಪಾನ್​ ವಿರುದ್ಧ ಒಂದಾಗುತ್ತವೆ. ಇದಕ್ಕೆ ಮುಖ್ಯ ಕಾರಣ ಎಂದ್ರೆ ಜಪಾನ್​​ನ ಸೇನೆ ಚೀನಿ ನಾಗರಿಕರ ಮೇಲೆ ಅನಿಯಮಿತ ದೌರ್ಜನ್ಯ ಎಸಗುತ್ತವೆ.. ಜೊತೆಗೆ ಕಿಲ್ಲ ಆಲ್, ಬರ್ನ್ ಆಲ್ ಮತ್ತು ಲೂಟ್ ಆಲ್ ಅಂತ ದೊಡ್ಡ ಮಟ್ಟದ ದಾಳಿ ನಡೆಸುತ್ತವೆ. ಈ ವೇಳೆ ಕಮ್ಯುನಿಸ್ಟ್ ಮತ್ತು ನ್ಯಾಷನಲಿಸ್ಟ್ ಪಕ್ಷಗಳು ಒಂದಾಗಿ ಜಪಾನ್​ ವಿರುದ್ಧ ಗಟ್ಟಿಯಾಗಿ ನಿಲ್ಲುತ್ತೆ.. ಇನ್ನು 1945ರಲ್ಲಿ ಜಪಾನ್​ ಸೋಲನ್ನು ಒಪ್ಪಿಕೊಳ್ಳುವುದರ ಮೂಲಕ ವಿಶ್ವ ಯುದ್ಧ ಮುಕ್ತಾಯವಾಗುತ್ತೆ.. ಇದರೊಂದಿಗೆ ಮತ್ತೆ ಈ ಎರಡೂ ಪರಸ್ಪರ ವಿರೋಧಿಗಳಾಗಿ ಮಾರ್ಪಡುತ್ತವೆ..

ಒಂದು ಹಂತದಲ್ಲಂತೂ ಕಮ್ಯುನಿಸ್ಟ್​ ಪಾರ್ಟಿ ನ್ಯಾಷನಲಿಸ್ಟ್​ ಪಾರ್ಟಿಯ ವಿರುದ್ಧ ದೊಡ್ಡ ಸಂಘರ್ಷ ನಡೆಸುತ್ತೆ. ಈ ಸಂಘರ್ಷದ ಕಾರಣದಿಂದ ಎಷ್ಟೋ ಜನ ತೈವಾನ್​ಗೆ ಓಡಿ ಹೋಗಿ ಅಲ್ಲಿ ರಿಪಬ್ಲಿಕ್ ಆಫ್ ಚೀನಾ ಸ್ಥಾಪಿಸಿಕೊಳ್ತಾರೆ..

1949ರಲ್ಲಿ ಅಧಿಕಾರಕ್ಕೆ ಬಂದ ಕಮ್ಯುನಿಸ್ಟ್ ಪಾರ್ಟಿ
72 ವರ್ಷಗಳ ಬಳಿಕವೂ ಸುದೀರ್ಘ ಅಧಿಕಾರ

1949ರ ಅಕ್ಟೋಬರ್​ನಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸ್ಥಾಪನೆಯಾಗುತ್ತೆ.. ಜೊತೆಗೆ, ಕಮ್ಯುನಿಸ್ಟ್ ಪಾರ್ಟಿ ಕೂಡ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ.. ಆಗ ಮತ್ತೊಂದು ರಕ್ತ ಸಿಕ್ತ ಅಧ್ಯಾಯ ತೆರೆದುಕೊಳ್ಳುತ್ತೆ..
Bridge P2c: 1949ರಲ್ಲಿ ಚೀನಾದ ಚುಕ್ಕಾಣಿಯನ್ನ ಮಾವೋ ಝೆಡಾಂಗ್ ಹಿಡಿತಾರೆ.. ಬಳಿಕ ಪಂಚವಾರ್ಷಿಕ ಯೋಜನೆ ಹಾಗೂ ಸಾಲು ಸಾಲು ಕ್ಯಾಂಪೇನ್ ಘೋಷಣೆ ಮಡ್ತಾರೆ.. ಅಲ್ಲದೇ ಗ್ರೇಟ್​ ಲೀಪ್ ಫಾರ್​ವರ್ಡ್ ಅನ್ನೋ ಆರ್ಥಿಕ ಮತ್ತು ಸಾಮಾಜಿಕ ಯೋಜನೆಯನ್ನ ಜಾರಿ ತರ್ತಾರೆ. ಈ ಯೋಜನೆ ಕಾರಣದಿಂದಾಗಿ ಸುಮಾರು 4 ಕೋಟಿ 50 ಲಕ್ಷ ಜನರು ಪ್ರಾಣ ಕಳೆದುಕೊಳ್ತಾರೆ.. ಮಾವೋ ಸರ್ಕಾರ ಜಮೀನುದಾರರನ್ನು ಸಾಮೂಹಿಕವಾಗಿ ಮರಣದಂಡನೆ ಶಿಕ್ಷೆಗೆ ಗುರಿ ಪಡಿಸುತ್ತೆ.. ಒತ್ತಾಯದ ಜೀತ ಪದ್ಧತಿ ಹಾಗೂ ದೌರ್ಜನ್ಯದಿಂದಾಗಿ ಲೆಕ್ಕವಿಲ್ಲದಷ್ಟು ಜನ ಸಾವೀಗೀಡಾಗ್ತಾರೆ. ಇಷ್ಟು ಸಾಲದು ಎಂಬಂತೆ 1966ರಲ್ಲಿ ಮಾವೋ ಸಾಂಸ್ಕೃತಿಕ ಕ್ರಾಂತಿ ಆರಂಭಿಸ್ತಾರೆ. ಈ ವೇಳೆ ಕೋಟ್ಯಾಂತರ ಪುಸ್ತಕಗಳನ್ನ ಸುಡಲಾಗುತ್ತೆ.. ನಂತರದ ಒಂದು ದಶಕಗಳ ಕಾಲ ಚೀನಿಯರ ಸಾಂಸ್ಕೃತಿಕ ಮತ್ತು ಐತಿಹಾಸಿಕ ನಂಬಿಕೆಗಳ ಮೇಲೆ ಪ್ರಹಾರ ನಡೆಸಲಾಗುತ್ತೆ..

1976ರಲ್ಲಿ ಮಾವೋರ ನಿಧನದ ಬಳಿಕ ಚೀನಾದಲ್ಲಿ ಆಮೂಲಾಗ್ರ ಬದಲಾವಣೆ ಆರಂಭವಾಗುತ್ತೆ. ಕಲ್ಚರಲ್ ರೆವಲ್ಯೂಷನ್ ದೌರ್ಜನ್ಯ ಆರೋಪದಲ್ಲಿ ಗ್ಯಾಂಗ್ ಫೋರ್ ಅನ್ನು ಅರೆಸ್ಟ್ ಮಾಡಲಾಗುತ್ತೆ.. ಜೊತೆಗೆ ಮಾವೋ ನೇಮಿಸಿದ್ದ ಹುವಾ ಗುಫೆಂಗ್ ಅನ್ನೋರ ದಾರಿ ತಪ್ಪಿಸಿ ಡೆಂಗ್​​ ಶಿಯಾನ್​ಪಿಂಗ್ ಚೀನಾ ಕಮ್ಯುನಿಸ್ಟ್ ಪಾರ್ಟಿಯ ಪ್ರಮುಖವ್ಯಕ್ತಿಯಾಗಿ ಬದಲಾಗ್ತಾರೆ. ಜೊತೆಗೆ ಅವರು ಯಾವುದೇ ಅಧಿಕಾರ ಸ್ಥಾನದಲ್ಲಿ ಕೂರದಿದ್ದರೂ.. ಡೆಂಗ್ ಕಾರಣದಿಂದಾಗಿ ಚೀನಾ ಸಂಪೂರ್ಣ ಬದಲಾಗುತ್ತೆ ಮತ್ತು ಅತ್ಯಂತ ವೇಗವಾಗಿ ಶ್ರೀಮಂತರ ರಾಷ್ಟ್ರವಾಗುವತ್ತ ದಾಪುಗಾಲಿಡಲು ಆರಂಭಿಸುತ್ತೆ..

ಹೀಗೆ ಸಾಕಷ್ಟು ರಕ್ತ ಸಿಕ್ತ ಅಧ್ಯಾಯವನ್ನ ಕಂಡು ಇತ್ತೀಚಿನ ದಿನಗಳಲ್ಲಿ ಆಂತರಿಕ ಶಾಂತಿಯತ್ತ ಚೀನಾ ದಾಪುಕಾಲು ಇಡುತ್ತಿತ್ತು. ಇಂಥ ವೇಳೆಯಲ್ಲಿ 2013ರಲ್ಲಿ ಅಧಿಕಾರ ಹಿಡಿದ ಶಿ ಜಿನ್​ಪಿಂಗ್, ಚೀನಾದ ರಾಜಕೀಯ, ಸಾಮಾಜಿಕ, ಮಿಲಿಟರಿ, ಪೊಲೀಸ್, ಶೈಕ್ಷಣಿಕ ಹೀಗೆ ಪ್ರತಿಯೊಂದು ಇನ್​​ಸ್ಟಿಟ್ಯೂಟ್​ ಅನ್ನೂ ತನ್ನ ಹಿಡಿತದಲ್ಲಿ ಇರಿಸಿಕೊಳ್ಳಲು ಆರಂಭಿಸಿದ್ರು.. ಲೋನ್​ ವೂಲ್ಫ್ ಡಿಪ್ಲೋಮಸಿ ಅಂತ ತನ್ನ ರಾಯಭಾರಿಗಳ ಮೂಲಕ ಅತ್ಯಂತ ತೀಕ್ಷಣವಾದ ವಿದೇಶಿ ನೀತಿಯನ್ನ ಜಾರಿಗೆ ತಂದ್ರು. ಅಲ್ಲದೇ 2018ರಲ್ಲಿ ಒಬ್ಬ ವ್ಯಕ್ತಿ ಎರಡು ಬಾರಿ ಚೀನಾದ ಅಧ್ಯಕ್ಷರಾಗುವಂತಿಲ್ಲ ಅನ್ನೋ ಕಾನೂನನ್ನೇ ಶಿ ಜಿನ್​ಪಿಂಗ್ ಬದಲಿಸಿದ್ರು.. ಜೊತೆಗೆ, ತಾನು ಆಜೀವ ಅಧಿಕಾರ ನಡೆಸಲು ಬೇಕಾದಂಥ ಹಲವು ಬದಲಾವಣೆಗಳನ್ನು ತರಲು ಆರಂಭಿಸಿದ್ರು.. ಸುಮಾರು 24 ರಾಷ್ಟ್ರಗಳ ವಿರುದ್ಧ ಗಡಿ ಕಿರಿಕ್ ಕೂಡ ಮುಗಿಲು ಮುಟ್ಟಲು ಕಾರಣವಾದ್ರು.. ಜೊತೆಗೆ, ತನ್ನ ಈ ಅಧಿಕಾರದ ಹಪಾಹಪಿಯಿಂದಾಗಿಯೇ ಕೊರೊನಾ ವೈರಸ್ ವಿಶ್ವಾದ್ಯಂತ ಕೊರೊನಾ ವೈರಸ್ ಹರಡಲು ಶಿ ಬಿಟ್ರು ಅಂತಾ ಹಲವರು ಆರೋಪ ಕೂಡ ಮಾಡ್ತಾರೆ..


ಇದಿಷ್ಟು ಸಾಲದು ಎಂಬಂತೆ.. ಮಿಲಿಟರಿ ಬಲ ಪಡಿಸಲು ಕೂಡ ಸಾಕಷ್ಟು ಹಣ ವ್ಯಯಿಸುತ್ತಿದ್ದಾರೆ ಶಿ ಜಿನ್​ಪಿಂಗ್, ಅಲ್ಲದೇ ಇಂದು ಬಂದಿರೋ ಮಾಹಿತಿ ಪ್ರಕಾರ ಚೀನಾ ಸದ್ಯ ಹೊಸದಾಗಿ 100 ಅಣ್ವಸ್ತ್ರಗಳನ್ನು ತಯಾರಿಸಿದೆ ಅಂತೆ.. ಒಂದೆಡೆ ವೈರಸ್.. ಇನ್ನೊಂದೆಡೆ ವೈರಸ್ ಹೀಗೆ ಸಾಲು ಸಾಲು ಕಂಟಕಗಳನ್ನು ಅವರು ವಿಶ್ವಕ್ಕೆ ತಂದೊಡ್ಡುತ್ತಲೇ ಇದ್ದಾರೆ..

ಇದೇ ಕಾರಣದಿಂದಾಗಿ ತನ್ನನ್ನು ತಾನು ಮಾವೋ ಎಂದೇ ಬಂಬಿಸಿಕೊಳ್ಳಲು ಯತ್ನಿಸುತ್ತಿರೋ ಶಿ ಜಿನ್​ಪಿಂಗ್ ನಿನ್ನೆ ಅವರಂತೆಯೇ ಬಟ್ಟೆ ಕೂಡ ತೊಟ್ಟು ಬಂದಿದ್ದರು. ಜೊತೆಗೆ ಐಡಿಯಾಲಜಿಗೆ ಮತ್ತಷ್ಟು ಬದ್ಧತೆಯನ್ನು ಎಲ್ಲರೂ ತೋರಬೇಕು ಅನ್ನೋ ಆಗ್ರಹ ಕೂಡ ಅವರು ಮಾಡಿದ್ದಾರೆ. ಇವೆಲ್ಲದರ ಜೊತೆಗೆ, ಚೀನಾವನ್ನು ಬೆದರಿಸುವ ಕಾಲ ಮುಗಿದೋಯ್ತು. ನಮ್ಮ ವಿರೋಧಿಗಳು ಯಾವುದೇ ಕಾರಣಕ್ಕೂ ನಮ್ಮನ್ನು ಶೋಷಿಸಲು, ಬೆದರಿಸಲು, ಗುಲಾಮರನ್ನಾಗಿ ಕಾಣಲು ಸಾಧ್ಯವಿಲ್ಲ. ಚೀನಾವನ್ನು ಯಾರಿಂದಲೂ ಬೆದರಿಸಲು ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಬೆದರಿಸಲು ಬಂದಲ್ಲಿ ತಲೆ ತೆಗೆಯುತ್ತೇವೆ. ಬಳಿಕ 140 ಕೋಟಿಗೂ ಹೆಚ್ಚು ಚೀನಿಗರಿಂದ ನಿರ್ಮಾಣವಾದ ಉಕ್ಕಿನ ಮಹಾಗೋಡೆಯ ಮುಂದೆಯೇ ಅವರ ರಕ್ತಪಾತವಾಗಲಿದೆ ಎಂದು ಅಬ್ಬರಿಸಿ ಭವಿಷ್ಯದ ಸೂಚನೆಯನ್ನ ನೀಡಿದ್ರು.. ಅವರ ಹೇಳಿಕೆಗಳನ್ನು ಮತ್ತು ನಡವಳಿಕೆಯನ್ನ ಗಮನಿಸಿ ಇನ್ನೂ ಜಗತ್ತು ಸುಮ್ಮನಿರುತ್ತಾ? ನೋಡಬೇಕು..

ಒಟ್ಟಿನಲ್ಲಿ ಸಾಕಷ್ಟು ಕಷ್ಟ ಪಟ್ಟು.. ಸಾಕಷ್ಟು ರಕ್ತ ಹರಿಸಿ.. ಒಂದು ಹಂತಕ್ಕೆ ಇಂದು ಚೀನಾ ಅನ್ನೋ ದೇಶ ತಲುಪಿದೆ.. ಆದ್ರೆ ಅದರ ಮಹತ್ವವನ್ನ ಒಬ್ಬ ವಕ್ತಿಯ ವೈಯಕ್ತಿಕ ಮಹತ್ವಾಕಾಂಕ್ಷೆ ಕಸಿಯುತ್ತಿದೆ.. ಚೀನಾ ಉಳಿಯಬೇಕು ಅಂದ್ರೆ ಶಿ ಜಿನ್​ಪಿಂಗ್ ಅಧಿಕಾರದಿಂದ ಇಳಿಯಲೇ ಬೇಕು ಅಂತಾ ಚೀನಿಯರೇ ಗುಸು ಗುಸು ಶುರುಮಾಡಿದ್ದಾರೆ.. ಆದ್ರೆ ಅದು ಹಾಗೆ ಆಗುತ್ತಾ?

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಮೀಡಿಯಾ

The post ಚೀನಾ ಕಮ್ಯುನಿಸ್ಟ್ ಪಾರ್ಟಿ ಶತಮಾನೋತ್ಸವ.. ಸುದೀರ್ಘ ಅಧಿಕಾರದ ಹಿಂದಿನ ಗುಟ್ಟು ಏನು? appeared first on News First Kannada.

Source: newsfirstlive.com

Source link