ಸದಾ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಸುದ್ಧಿಯಲ್ಲಿರುವ ರಾಮ್ ಗೋಪಾಲ್ ವರ್ಮಾ, ಸದ್ಯ ಚೀನಾದೊಂದಿಗೆ ಸೇರಿಕೊಂಡು ಸಿನಿಮಾವವನ್ನು ಮಾಡಿದ್ದಾರೆ. ಭಾರತದ ಮೊಟ್ಟ ಮೊದಲ ಮಾರ್ಷಲ್ ಆರ್ಟ್ಸ್ ಸಿನಿಮಾವನ್ನು ಮಾಡಿರುವ ವರ್ಮಾ ಆ ಸಿನಿಮಾಗೆ ‘ಲಡ್ಕಿ’ ಅಂತ ನಾಮಕರಣ ಮಾಡಿದ್ದಾರೆ.
ಈ ಸಿನಿಮಾವನ್ನು ವರ್ಮಾ ನಟ ‘ಬ್ರೂಸ್ ಲೀ’ ಗೆ ಸಮರ್ಪಣೆ ಮಾಡಿದ್ದಾರೆ. ಅಂದ ಹಾಗೆ ಮೊಟ್ಟ ಮೊದಲ ಬಾರಿಗೆ ವರ್ಮಾ ಚೀನಾ ಸಿನಿ ಇಂಡಸ್ಟ್ರಿಯೊಂದಿಗೆ ಲಡ್ಕಿ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಚೀನಾದಲ್ಲಿ ಮೊದಲು ಈ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧಾರ ಮಾಡಿದ್ದು, ‘ಡ್ರ್ಯಾಗನ್ ಗರ್ಲ್’ ಅಂತ ಟೈಟಲ್ ಫಿಕ್ಸ್ ಮಾಡಲಾಗಿದೆ.
ಇತ್ತೀಚೆಗೆ ಟ್ರೈಲರ್ ಬಿಟ್ಟು ಸಖತ್ ಸದ್ದು ಮಾಡಿರುವ ಲಡ್ಕಿ ಯೂಟ್ಯೂಬ್ನಲ್ಲಿ ಸಖತ್ ಟ್ರೆಂಡ್ನಲ್ಲಿದೆ. ಈ ಸಿನಿಮಾದಲ್ಲಿ ಪೂಜಾ ಭಾಲೆಕಾರ್ ಡ್ರ್ಯಾಗನ್ ಗರ್ಲ್ ಆಗಿ ಕಾಣಿಸಿಕೊಂಡಿದ್ದು, ಪೂಜಾ ಸ್ಟಂಟ್ಗೆ ಮತ್ತು ಮೈ ಮಾಟಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ . ಅಂದ ಹಾಗೆ ಚಿತ್ರದ ರಿಲೀಸ್ ಡೇಟ್ ಇನ್ನು ಫಿಕ್ಸ್ ಆಗಿಲ್ಲ, ಆದಷ್ಟು ಬೇಗ ಬಿಡುಗಡೆ ದಿನಾಂಕವನ್ನು ತಿಳಿಸುತ್ತೇವೆ ಎಂದು ರಾಮ್ ಗೋಪಾಲ್ ವರ್ಮ ತಿಳಿಸಿದ್ದಾರೆ.