ಚೀನಾ- ತೈವಾನ್ ಉದ್ವಿಗ್ನತೆ ಬೆನ್ನಲ್ಲೇ ತೈವಾನ್‌ನ ರಕ್ಷಣಾ ಅಧಿಕಾರಿ ಹೋಟೆಲ್ ರೂಂನಲ್ಲಿ ಶವವಾಗಿ ಪತ್ತೆ | Amid China Taiwan tensions top Taiwanese defence official found dead in hotel room


ಔ ಯಾಂಗ್ ವಿವಿಧ ಕ್ಷಿಪಣಿ ಉತ್ಪಾದನಾ ಯೋಜನೆಗಳ ಮೇಲ್ವಿಚಾರಣೆಗಾಗಿ ಈ ವರ್ಷದ ಆರಂಭದಲ್ಲಿ ಮಿಲಿಟರಿ ಒಡೆತನದ ನ್ಯಾಷನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಉಪ ಮುಖ್ಯಸ್ಥರಾಗಿ ತಮ್ಮ ಅಧಿಕಾರ ವಹಿಸಿಕೊಂಡಿದ್ದರು.

ಚೀನಾ- ತೈವಾನ್ ಉದ್ವಿಗ್ನತೆ ಬೆನ್ನಲ್ಲೇ ತೈವಾನ್‌ನ ರಕ್ಷಣಾ ಅಧಿಕಾರಿ ಹೋಟೆಲ್ ರೂಂನಲ್ಲಿ ಶವವಾಗಿ ಪತ್ತೆ

ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್. ಪೆಲೋಸಿಯ ತೈವಾನ್ ಭೇಟಿಯ ನಂತರ ತೈವಾನ್ ಮತ್ತು ಚೀನಾ ನಡುವಿನ ಉದ್ವಿಗ್ನತೆ ಭುಗಿಲೆದ್ದಿತು

ತೈವಾನ್: ಚೀನಾ-ತೈವಾನ್ ಉದ್ವಿಗ್ನತೆ ಮಧ್ಯೆ ತೈವಾನ್ (Taiwan) ಉನ್ನತ ರಕ್ಷಣಾಧಿಕಾರಿಯೊಬ್ಬರ ಶವ ಹೋಟೆಲ್​​ನಲ್ಲಿ ಪತ್ತೆಯಾಗಿದೆ. ಕ್ಷಿಪಣಿ ಅಭಿವೃದ್ಧಿ ತಂಡದ ನೇತೃತ್ವ ವಹಿಸಿದ್ದ ಅಧಿಕಾರಿ ನಿಗೂಢವಾಗಿ ಸಾವನ್ನಪ್ಪಿದ್ದು, ಆ ಅಧಿಕಾರಿಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತೈವಾನ್ ರಕ್ಷಣಾ ಸಚಿವಾಲಯದ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಉಪ ಮುಖ್ಯಸ್ಥ ಔ ಯಾಂಗ್ ಲಿ-ಹಸಿಂಗ್ (Yang Li-hsing) ಇಂದು (ಶನಿವಾರ) ಬೆಳಿಗ್ಗೆ ದಕ್ಷಿಣ ತೈವಾನ್‌ನ ಹೋಟೆಲ್ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ತೈವಾನ್​​ನ ಅಧಿಕಾರಿಗಳು ರಕ್ಷಣಾಧಿಕಾರಿಯ ಸಾವಿನ ಕಾರಣವನ್ನು ಹುಡುಕುತ್ತಿದ್ದಾರೆ. ಔ ಯಾಂಗ್ ವಿವಿಧ ಕ್ಷಿಪಣಿ ಉತ್ಪಾದನಾ ಯೋಜನೆಗಳ ಮೇಲ್ವಿಚಾರಣೆಗಾಗಿ ಈ ವರ್ಷದ ಆರಂಭದಲ್ಲಿ ಮಿಲಿಟರಿ ಒಡೆತನದ ನ್ಯಾಷನಲ್ ಚುಂಗ್-ಶಾನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಉಪ ಮುಖ್ಯಸ್ಥರಾಗಿ ತಮ್ಮ ಅಧಿಕಾರ ವಹಿಸಿಕೊಂಡಿದ್ದರು.

TV9 Kannada


Leave a Reply

Your email address will not be published. Required fields are marked *