ಚೀನಾ-ಭಾರತ ಗಡಿಗೆ 50,000 ಹೆಚ್ಚುವರಿ ಟ್ರೂಪ್ಸ್ ಕಳುಹಿಸಿದ ಆರ್ಮಿ.. ಗಡಿಯಲ್ಲಿ ನಡೀತಿರೋದೇನು..?

ಚೀನಾ-ಭಾರತ ಗಡಿಗೆ 50,000 ಹೆಚ್ಚುವರಿ ಟ್ರೂಪ್ಸ್ ಕಳುಹಿಸಿದ ಆರ್ಮಿ.. ಗಡಿಯಲ್ಲಿ ನಡೀತಿರೋದೇನು..?

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಸರ್ಕಾರ ಚೀನಾ-ಭಾರತ ಗಡಿಗೆ 50,000 ಸೈನಿಕರನ್ನ ಕಳುಹಿಸಿದೆ. ಅಲ್ಲದೇ ಮೂರು ಫೈಟರ್​ ಜೆಟ್​ಗಳನ್ನೂ ಸಹ ಮೂರು ಗಡಿ ಪ್ರದೇಶಗಳಿಗೆ ಕಳುಹಿಸಿದೆ ಎನ್ನಲಾಗಿದ್ದು ಸದ್ಯ ಚೀನಾ-ಭಾರತ ಗಡಿಯಲ್ಲಿ ಒಟ್ಟು 2 ಲಕ್ಷ ಟ್ರೂಪ್​ಗಳಿವೆ.. ಕಳೆದ ವರ್ಷಕ್ಕಿಂತ 40 ಪಟ್ಟು ಹೆಚ್ಚು ಸೈನಿಕರನ್ನ ನಿಯೋಜಿಸಿದಂತಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ಹಿಂದೆ ಚೀನಾದಿಂದ ಎದುರಾಗುವ ದಾಳಿಯನ್ನ ತಡೆಯುವಷ್ಟು ಮಾತ್ರವೇ ಸೇನೆಯನ್ನ ನಿಯೋಜಿಸಲಾಗಿತ್ತು. ಇದೀಗ ಚೀನಾದಿಂದ ಎದುರಾಗುವ ಸಂಭಾವ್ಯ ದಾಳಿಯ ವಿರುದ್ಧ ಹೋರಾಡಿ ಅಗತ್ಯ ಬಿದ್ದಲ್ಲಿ ಚೀನಾದೊಳಗಿನ ಪ್ರಾಂತ್ಯವನ್ನೂ ಸೀಜ್ ಮಾಡುವಷ್ಟು ಸೇನೆಯನ್ನ ನಿಯೋಜಿಸಲಾಗಿದೆ ಎಂದು ಸರ್ಕಾರದ ಹಿರಿಯ ನಾಯಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಸೈನಿಕರನ್ನಷ್ಟೇ ಅಲ್ಲದೆ ಅತೀ ಎತ್ತರದ ಪ್ರದೇಶಗಳಿಗೆ ಸೈನಿಕರನ್ನ ಕೊಂಡೊಯ್ಯಲು M777 howitzer ನಂತ ಹೆಲಿಕಾಪ್ಟರ್​​ಗಳನ್ನೂ ಸಹ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ಹೇಳಿವೆ. ಇನ್ನು ಚೀನಾ ಜೊತೆಗೆ ಮಾತುಕತೆ ನಡೆದು ಗಡಿಯಲ್ಲಿ ಶಾಮತಿ ಕಾಪಾಡಲು ಒಪ್ಪಿಕೊಂಡ ಬಳಿಕವೂ ಚೀನಾದ ಸೈನಿಕರು ಗಡಿಭಾಗದಲ್ಲಿ ಹಲವು ಚಟುವಟಿಕೆಗಳನ್ನ ನಡೆಸುತ್ತಿದ್ದಾರೆ ಎಂದು ಆಗಾಗ್ಗೆ ವರದಿಗಳಾಗುತ್ತಿವೆ.

ಈ ಮಧ್ಯೆ ಚೀನಾ ತನ್ನ ಗಡಿಪ್ರದೇಶದಲ್ಲಿ ಎಷ್ಟು ಸೈನಿಕರ ನಿಯೋಜನೆ ಮಾಡಿದೆ ಎಂಬುದು ರಹಸ್ಯವಾಗಿ ಉಳಿದಿದ್ದು ಪೀಪಲ್ಸ್ ಲಿಬರೇಷನ್ ಆರ್ಮಿ ಇತ್ತೀಚೆಗೆ ಟಿಬೆಟ್​ನಿಂದ ಕ್ಸಿಂಜಿಯಾಂಗ್ ಮಿಲಿಟರಿ ಕಮಾಂಡ್​​ಗೆ ಹೆಚ್ಚುವರಿ ಸೇನೆ ನಿಯೋಜನೆ ಮಾಡಿದೆ ಎನ್ನಲಾಗಿದೆ.

The post ಚೀನಾ-ಭಾರತ ಗಡಿಗೆ 50,000 ಹೆಚ್ಚುವರಿ ಟ್ರೂಪ್ಸ್ ಕಳುಹಿಸಿದ ಆರ್ಮಿ.. ಗಡಿಯಲ್ಲಿ ನಡೀತಿರೋದೇನು..? appeared first on News First Kannada.

Source: newsfirstlive.com

Source link