ಚೀನಾ-ಭಾರತ ನಡುವೆ ನಾಳೆ 13ನೇ ಸುತ್ತಿನ ಮಿಲಿಟರಿ ಮಾತುಕತೆ.. ಏನೆಲ್ಲಾ ಚರ್ಚೆ..?

ನವದೆಹಲಿ: ಚೀನಾ ಸೈನಿಕರು ಮತ್ತೊಮ್ಮೆ ಭಾರತದ ಗಡಿ ದಾಟಿದ್ದಾರೆಂಬ ವರದಿಗಳು ಪ್ರಸಾರವಾದ ಬೆನ್ನಲ್ಲೇ ಇದೀಗ 13ನೇ ಸುತ್ತಿನ ಚೀನಾ-ಭಾರತ ನಡುವಿನ ಮಿಲಿಟರಿ ಮಾತುಕತೆಗೆ ದಿನಾಂಕ ನಿಗದಿಯಾಗಿದೆ. ನಾಳೆ ಬೆಳಗ್ಗೆ 10:30ಕ್ಕೆ ಮೊಲ್ಡೊದಲ್ಲಿ ಮಾತುಕತೆ ನಡೆಯಲಿದೆ. ಪೂರ್ವ ಲಡಾಖ್​ನ ಲೈನ್ ಆಫ್ ಕಂಟ್ರೋಲ್​ನಲ್ಲಿ ಸೇನೆ ನಿಯೋಜನೆ ಹಿಂಪಡೆಯುವ ಕುರಿತು ಈ ಮಾತುಕತೆಯಲ್ಲಿ ಚರ್ಚೆ ನಡೆಯಲಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಗಡಿಯಲ್ಲಿ ಮತ್ತೆ ಚೀನಾ ಕಿರಿಕ್ & ಜಟಾಪಟಿ: 200ಕ್ಕೂ ಹೆಚ್ಚು PLA ಸೈನಿಕರ ತಡೆದ ಇಂಡಿಯನ್ ಆರ್ಮಿ..!

ಈ ಬಾರಿಯ ಕಮಾಂಡರ್ ಲೆವೆಲ್ ಮಾತುಕತೆಯ ನಂತರ ಹಾಟ್​ಸ್ಪ್ರಿಂಗ್ ಪ್ರದೇಶಗಳಿಂದ ಸೇನೆಗಳನ್ನು ಹಿಂಪಡೆಯುವ ಪ್ರಕ್ರಿಯೆ ನಡೆಯಲಿದೆ ಎಂದು ಸೇನಾ ಮೂಲಗಳು ಹೇಳಿವೆ. ಇತ್ತೀಚೆಗೆ ತಮ್ಮ 2 ದಿನಗಳ ಭೇಟಿಯಲ್ಲಿ ಸೇನಾ ಮುಖ್ಯಸ್ಥ ಎಂ ಎಂ ನರವಾಣೆ ಪೂರ್ವ ಲಡಾಖ್​ನ ಏರಿಯಾಗಳನ್ನು ಪರಿಶೀಲನೆ ನಡೆಸಿದ್ದರು. ಅಲ್ಲದೇ ಪೂರ್ವ ಲಡಾಖ್​ನಲ್ಲಿ ಎದುರಾಳಿಗಳನ್ನು ಎದುರಿಸಲು ನಮ್ಮ ಸೈನಿಕರು ಸಂಪೂರ್ಣ ಸಜ್ಜಾಗಿದ್ದರೆ ಎಂದಿದ್ದರು. ಮತ್ತೊಂದೆಡೆ ಪೂರ್ವ ಲಡಾಖ್​ಗೆ ಕೆ9-ವಜ್ರ 155 ಹವಿಟ್ಜರ್​ನ್ನು ಕಳುಹಿಸಲಾಗಿದೆ. ಇದರಿಂದ ಸೇನೆಯ ಬಲ ಮತ್ತಷ್ಟು ಹೆಚ್ಚಿದಂತಾಗಿದೆ.

News First Live Kannada

Leave a comment

Your email address will not be published. Required fields are marked *