ಬೆಂಗಳೂರು: ಸಾರ್ವಜನಿಕರಿಗೆ ವಂಚನೆ ಆರೋಪದ ಮೇಲೆ ಚೀನಾ ಲೋನ್ ಆ್ಯಪ್ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ 76.67 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನ ಜಪ್ತಿ ಮಾಡಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ED ಮಾಹಿತಿ ನೀಡಿದೆ. CIDನಲ್ಲಿ ದಾಖಲಾಗಿದ್ದ ಪ್ರಕರಣಗಳ ಆಧಾರದ ಮೇಲೆ ED ಸಹ ಪ್ರಕರಣಗಳನ್ನ ದಾಖಲಿಸಿಕೊಂಡು ತನಿಖೆಯನ್ನ ನಡೆಸುತ್ತಿದೆ. ರಿಕವರಿ ಏಜೆಂಟ್​ಗಳು ಲೋನ್ ಮರುಪಾವತಿ ಮಾಡದ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದರು. ಬಡ್ಡಿ, ಚಕ್ರಬಡ್ಡಿ, ಸರ್ವಿಸ್ ಚಾರ್ಜಸ್ ಹೆಸರಿನಲ್ಲಿ ಲೋನ್ ಪಡೆದವರಿಗೆ ಕಿರುಕುಳ ನೀಡುತ್ತಿದ್ದ ಆರೋಪ ಕಂಪನಿಗಳ ವಿರುದ್ಧ ಕೇಳಿಬಂದಿತ್ತು.

RBI ನಿಯಮ ಉಲ್ಲಂಘನೆ ಮಾಡಿ ಚೀನಾ ಲೋನ್ ಆ್ಯಪ್ ಕಂಪನಿಗಳು ಭಾರತದಲ್ಲಿ ವ್ಯವಹಾರ ಮಾಡುತ್ತಿದ್ದವು. ಆ್ಯಪ್​ಗಳು ಮಧ್ಯಮ ವರ್ಗದ ಜನರಿಗೆ ಸುಲಭವಾಗಿ, ಸಕಾಲದಲ್ಲಿ ಲೋನ್ ನೀಡುತ್ತವೆ ಎಂದು ನಂಬಿಸುತ್ತಿದ್ದವು ಎನ್ನಲಾಗಿದೆ.

The post ಚೀನಾ ಲೋನ್ ಆ್ಯಪ್ ಕಂಪನಿಗಳ ಮೇಲೆ ED ದಾಳಿ; ₹76.67 ಕೋಟಿ ಮೌಲ್ಯದ ಆಸ್ತಿ ಜಪ್ತಿ appeared first on News First Kannada.

Source: newsfirstlive.com

Source link