ಚೀನಾ ಉತ್ಪಾದನೆ ಮಾಡಿರುವ ಸಿನೋಫಾರ್ಮ್ ಮತ್ತು ಸಿನೋವಾಕ್ ಲಸಿಕೆಗಳು ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ಪಡೆದಿದೆ. ಆದರೆ ಸೌದಿ ಅರೇಬಿಯಾ ಚೀನಾ ವ್ಯಾಕ್ಸಿನ್​ ಪಡೆದ ಜನರಿಗೆ ತನ್ನ ದೇಶಕ್ಕೆ ಪ್ರವೇಶ ನಿರಾಕರಿಸಿ ನಿಷೇಧ ವಿಧಿಸಿದೆ. ಸೌದಿಯ ಈ ನಡೆಯಿಂದಾಗಿ, ಈಗಾಗಲೇ ಚೀನಾ ಲಸಿಕೆ ಪಡೆದು ವಿತರಣೆ ಮಾಡಿರುವ ಪಾಕಿಸ್ತಾನಕ್ಕೆ ಆತಂಕ ಶುರುವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್, ಚೀನಾದ ಲಸಿಕೆಯನ್ನು ಒಪ್ಪಿಕೊಳ್ಳದ ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳೊಂದಿಗೆ ಪ್ರಧಾನಿ ಇಮ್ರಾನ್ ಖಾನ್ ಅವರು ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದಾರೆ. ಸಿನೊಫಾರ್ಮ್ ಕೊರೊನಾ ವಿರುದ್ಧದ ಉತ್ತಮ ಲಸಿಕೆಯಾಗಿದ್ದು, ಲಸಿಕೆ ನೀಡಿದ ಚೀನಿಯರಿಗೆ ನಮಸ್ಕರಿಸುತ್ತೇನೆ ಎಂದು ಹೇಳಿದ್ದಾರೆ.

ಸೌದಿ ಸೇರಿದಂತೆ ಇತರೇ ಮಧ್ಯಪ್ರಾಚ್ಯ ದೇಶಗಳ ಈ​ ನಿರ್ಧಾರದಿಂದ ಆತಂಕಕ್ಕೆ ಒಳಗಾಗಿರುವ ಪಾಕ್​​​, ವಿದೇಶಗಳಲ್ಲಿ ಕೆಲಸ ಮಾಡುವ, ಹಜ್​​ಗೆ ಭೇಟಿ ನೀಡುತ್ತಿರುವ, ವಿದೇಶಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ವಿದೇಶಿ ಪ್ರಯಾಣ ಮಾಡುವ ಜನರಿಗೆ ಫೈಜರ್ ಲಸಿಕೆಯನ್ನು ನೀಡಲು ಚಿಂತನೆ ನಡೆಸಿದೆ ಎಂದು ಪಾಕ್ ಸಚಿವ ಅಸಾದ್​ ಉಮರ್​ ತಿಳಿಸಿದ್ದಾರೆ. ಅಲ್ಲದೇ ಚೀನಾ ಲಸಿಕೆ ಪಡೆದವರ ವ್ಯಾಕ್ಸಿನ್​​ ಸರ್ಟಿಫಿಕೆಟ್​​ ಅಂಗೀಕರಿಸಲು ನಿರಾಕರಿಸುತ್ತಿರುವ ರಾಷ್ಟ್ರಗಳಿಂದ ಇಡೀ ಜಗತ್ತಿಗೆ ಸಮಸ್ಯೆ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇತ್ತ ಎಎನ್​​ಐ ವರದಿಯ ಅನ್ವಯ, ಚೀನಾದ ರೋಗ ನಿಯಂತ್ರಣ ಕೇಂದ್ರಗಳೇ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಅಪರೂಪದ ಸಂದರ್ಭಗಳಲ್ಲಿ ಚೀನಾದ ಕೊರೊನಾ ಲಸಿಕೆಗಳು ವೈರಸ್​​ಗಳ ವಿರುದ್ಧ ಪರಿಣಾಮಕಾರಿತ್ವ ಹೆಚ್ಚಿಲ್ಲ. ಲಸಿಕೆಯಲ್ಲಿ ಕೆಲವು ಸುಧಾರಣೆಯಗಳ ಅಗತ್ಯವಿದೆ ಎಂದು ಏಪ್ರಿಲ್​​ನಲ್ಲಿ ತಿಳಿಸಿದ್ದವು ಎನ್ನಲಾಗಿದೆ. ಇದರ ನಡುವೆಯೇ ಸೌದಿ ಸೇರಿದಂತೆ ಹಲವು ರಾಷ್ಟ್ರಗಳು ಚೀನಾ ವ್ಯಾಕ್ಸಿನ್ ಪಡೆದವರಿಗೆ ದೇಶದೊಳಗೆ ಪ್ರವೇಶ ನಿರಾಕರಿಸಿವೆ.

ಇದನ್ನೂ ಓದಿ: ಸದ್ದಿಲ್ಲದೇ ಯುದ್ಧ ಮಾಡಿ 40 ಲಕ್ಷ ಜನರನ್ನ ಬಲಿ ಪಡೆಯಿತಾ ಚೀನಾ..? ಬಟಾಬಯಲಾಗುತ್ತಾ ರಹಸ್ಯ..?

The post ಚೀನಾ ವ್ಯಾಕ್ಸಿನ್​ ಪಡೆದ ಪ್ರಯಾಣಿಕರಿಗೆ ಎಂಟ್ರಿ ನಿಷೇಧಿಸಿದ ಸೌದಿ -ಪಾಕ್​​ಗೆ ಆತಂಕ appeared first on News First Kannada.

Source: newsfirstlive.com

Source link