ಚೀಪ್ ಆಂಡ್ ಬೆಸ್ಟು, ಒಳ್ಳೇ ಟೇಸ್ಟು, ಬೆಂಗಳೂರಿನ ಕಬ್ಬಾಳಮ್ಮ ನಾಟಿ ಶೈಲಿ ಸ್ಟ್ರೀಟ್ ಫುಡ್ – Bangalore Kabbalamma Nati Style Eatery Attracts Food Lovers With Unique Taste Bengaluru News


ಚಿಲ್ಲಿ ಕಬಾಬ್, ಮಟನ್ ಬೋಟಿ, ಚಿಕನ್ ಬಿರಿಯಾನಿ, ಎಗ್ ರೈಸ್, ಚಿಲ್ಲಿ ಕಬಾಬ್, ಚಿಕನ್ ಕುರ್ಮಾ ಇಷ್ಟು ವೆರೈಟಿ ಆಫ್ ಫುಡ್ ಸಿಗ್ತಾ ಇದೆ 60, 70 ರೂಪಾಯಿಗೆ. ಮುದ್ದೆ ಊಟ ಸಿಗುತ್ತೇ ಕೇವಲ 40 ರೂಪಾಯಿಗೆ.

ಚೀಪ್ ಆಂಡ್ ಬೆಸ್ಟು, ಒಳ್ಳೇ ಟೇಸ್ಟು, ಬೆಂಗಳೂರಿನ ಕಬ್ಬಾಳಮ್ಮ ನಾಟಿ ಶೈಲಿ ಸ್ಟ್ರೀಟ್ ಫುಡ್

Bengaluru street food

Image Credit source: Youtube

ಕನ್ನಡ ಹಾಗೂ ಅಣ್ಣಾವ್ರ ಅಪ್ಪಟ ಅಭಿಮಾನಿಯಾಗಿರುವ ನಾಗೇಂದ್ರರವರು ಕಳೆದ 20 ವರ್ಷಗಳಿಂದ ಕಬ್ಬಾಳಮ್ಮ ನಾಟಿ ಶೈಲಿ ಸ್ಟ್ರೀಟ್ ಫುಡ್ ನಡೆಸಿಕೊಂಡು ಬಂದಿದ್ದು, ಇಲ್ಲಿಯ ವರೆಗೆ ರುಚಿಯ ಜೊತೆಗೆ ಬಜೆಟ್ ಫ್ರೆಂಡ್ಲೀ ಊಟ ನೀಡುತ್ತಾ ಬಂದಿದ್ದಾರೆ. ಅಡುಗೆಯಲ್ಲಿ ಯಾವುದೇ ತರಬೇತಿ ಪಡೆಯದೇ ತನ್ನ ಸ್ವಂತ ಆಸಕ್ತಿಯಿಂದ ಇಷ್ಟು ವರ್ಷಗಳ ವರೆಗೆ ಈ ಸಣ್ಣ ಅಂಗಡಿಯಲ್ಲಿ ತನ್ನ ಕೈ ರುಚಿ ಮೂಲಕ ಜನರನ್ನು ಸೆಳೆಯುತ್ತಿದ್ದಾರೆ.

ಸಣ್ಣದೊಂದು ಗಾಡಿ , ಗಾಡಿಯ ಮೇಲ್ಬಾಗದಲ್ಲಿ ಹಾರಾಡುತ್ತಿರುವ ಕರ್ನಾಟಕದ ಧ್ವಜ. ಇದರ ಜೊತೆಗೆ ಆತ್ಮೀಯತೆಯಿಂದ ಕನ್ನಡದಲ್ಲಿ ಮಾತಾಡಿಸುವ ನಾಗೇಂದ್ರರವರು ಅಪ್ಪಟ ಕನ್ನಡ ಅಭಿಮಾನಿ ಹಾಗೂ ತನ್ನ ಒಂದು ಕೈಯಲ್ಲಿ ಕಾರ್ನಾಟಕದ ಧ್ವಜ ಹಾಗೂ ಇನ್ನೊಂದು ಕೈಯಲ್ಲಿ ಡಾ. ರಾಜ್ ಕುಮಾರ್ ರವರ ಹಚ್ಚೆಯನ್ನು ಹಾಕಿಸಿಕೊಂಡಿದ್ದಾರೆ. ಇಲ್ಲಿನ ಆಹಾರದ ರುಚಿಯ ಜೊತೆಗೆ ಇವರ ಕನ್ನಡ ಪ್ರೇಮವು ಹೆಮ್ಮೆ ಪಡುವಂತದ್ದು.

ಇಲ್ಲಿನ ಬಜೆಟ್ ಫ್ರೆಂಡ್ಲೀ ಊಟ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತ್ ಆಗಿ ವೈರಲ್ ಆಗ್ತಾ ಇದೆ.

ಚಿಲ್ಲಿ ಕಬಾಬ್, ಮಟನ್ ಬೋಟಿ, ಚಿಕನ್ ಬಿರಿಯಾನಿ, ಎಗ್ ರೈಸ್, ಚಿಲ್ಲಿ ಕಬಾಬ್, ಚಿಕನ್ ಕುರ್ಮಾ ಇಷ್ಟು ವೆರೈಟಿ ಆಫ್ ಫುಡ್ ಸಿಗ್ತಾ ಇದೆ 60, 70 ರೂಪಾಯಿಗೆ.  ಮುದ್ದೆ ಊಟ ಸಿಗುತ್ತೇ ಕೇವಲ 40 ರೂಪಾಯಿಗೆ.
ಕಬ್ಬಾಳಮ್ಮ ನಾಟಿ ಶೈಲಿ ಸ್ಟ್ರೀಟ್ ಫುಡ್ ಬೆಂಗಳೂರಿನ ವಿಜಯನಗರದ ಮೂಡಲ್ ಪಾಳ್ಯ ಸರ್ಕಲ್ ಶಕ್ತಿ ಗಾರ್ಡನ್ ಹತ್ತಿರ ಇದೆ. ಸೋಮವಾರ ಒಂದು ದಿನ ರಜಾದಿನವಾಗಿದ್ದು, ಉಳಿದ ದಿನ ಮಧ್ಯಾಹ್ನ 1ರಿಂದ ರಾತ್ರಿ 10 ಗಂಟೆಯ ವರೆಗೂ ತೆರೆದಿರುತ್ತದೆ.

ಪ್ರಾರಂಭದಲ್ಲಿ (20 ವರ್ಷಗಳ ಹಿಂದೆ) ನಾನು ಮಾಡುತ್ತಿದ್ದ ಆಹಾರಗಳು,ಜನರಿಗೆ ಅಷ್ಟೋಂದು ರುಚಿಯೆನಿಸುತ್ತಿರಲ್ಲಿಲ್ಲ. ಈಗ ಸಾಕಷ್ಟು ಕಡೆಗಳಿಂದ ಜನರು ಬಂದು ನಾನು ಮಾಡುವ ಆಹಾರದ ರುಚಿಗೆ ಹೊಟ್ಟೆ ತುಂಬಾ ತಿಂದು ಖುಷಿ ಪಟ್ಟು ಹೋಗುತ್ತಾರೆ ಎಂದು ನಾಗೇಂದ್ರ ಹೇಳುತ್ತಾರೆ .

ಇದನ್ನು ಓದಿ: Online Food Order: ನೀವು ಫುಡ್ ಆರ್ಡರ್ ಮಾಡುವ ಮುನ್ನ ಈ ವಿಷಯ ತಿಳಿದುಕೊಳ್ಳಿ

ಇಲ್ಲಿನ ಎಗ್ ರೈಸ್ ತುಂಬಾ ಡಿಫರೇಂಟ್ ಆಗಿದ್ದು ಸಖತ್ತ್ ರುಚಿಯನ್ನು ಹೊಂದಿದೆ. ಸಾಮಾನ್ಯವಾಗಿ ಹಲವಷ್ಟು ಕಡೆಗಳಲ್ಲಿ ಎಗ್ ರೈಸ್ ಮಾಡುವಾಗ ಪುಡ್ ಕಲರ್, ಸೋಯಾ, ಟೊಮ್ಯಾಟೊ ಸ್ವಾಸ್ ಗಳನ್ನು ಬಳಸಿ ಮಾಡಲಾಗುತ್ತದೆ. ಆದರೆ ಇಲ್ಲಿ ಯಾವುದೇ ಪುಡ್ ಕಲರ್, ಸ್ವಾಸ್ಗಳನ್ನು ಬಳಸದೇ ನ್ಯಾಚುರಲ್ ಆಗಿ ಎಗ್ ರೈಸ್ ಮಾಡಿಕೊಡಲಾಗುತ್ತದೆ.
ನೀವೂ ನಾನ್ ವೆಜ್ ಪ್ರಿಯರಾಗಿದ್ದರೆ, ಒಮ್ಮೆ ವೀಕೆಂಡ್ ನಲ್ಲಿ ಭೇಟಿ ನೀಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ತಾಜಾ ಸುದ್ದಿ

TV9 Kannada


Leave a Reply

Your email address will not be published.