ಎರಡನೇ ಲಾಕ್ ಡೌನ್ ಮುಗಿದು ನಂತರ ಸಿನಿಮಾಗಳ ಹಬ್ಬ ಸ್ಯಾಂಡಲ್ವುಡ್ನಲ್ಲಿ ಶುರುವಾಗಿದೆ.. ಎರಡು ವರ್ಷದಿಂದ ಶೂಟಿಂಗ್ ಸ್ಪಾಟ್ನಾಗೆ ಕಾಲ ಕಳೆದು ಟೀಸರ್ನಿಂದ ಗತ್ತು ಗಮ್ಮತ್ತನ್ನ ತೋರಿದ ಅವತಾರ ಪುರುಷ ಕೊನೆಗೂ ತಾನು ಬರೋ ದಿನಾಂಕವನ್ನ ಮರು ನಿಗದಿ ಮಾಡಿದ್ದಾನೆ.. ಹಾಗಾದ್ರೆ ಯಾವಾಗ ಅವತಾರ ಪುರುಷ ಸಿನಿಮಾ ರಿಲೀಸ್ ? ಈ ಬಾರಿ ಏನ್ ಗಮ್ಮತ್ತು ಮಾಡ್ತಾರೆ ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್ ?
ಸ್ಯಾಂಡಲ್ವುಡ್ನ ಹುಟ್ಟು ಟ್ಯಾಲೆಂಟೆಡ್ ಮ್ಯಾನು , ಐದಡಿ ಗನ್ನು ನಟ ಶರಣ್.. ಸಹ ನಟನಾಗಿ ಕಾಮಿಡಿ ಕಚಗುಳಿ ಇಡ್ತಿದ್ದವರು ಱಂಬೋ ಚಿತ್ರದಿಂದಿಂದ ಫುಲ್ ಟೈಮ್ ಹೀರೋ ಆಗಿ ಕಾಮಿಡಿ ಕಿಕ್ ಅನ್ನ ಕನ್ನಡಿಗರಿಗೆ ನೀಡ್ತಿದ್ದಾರೆ.. ಆ್ಯಕ್ಟಿಂಗು , ಸಿಂಗಿಂಗು , ಡ್ಯಾನ್ಸಿಂಗು , ರೋಮ್ಯಾನ್ಸಿಂಗುನಂತರ ಸಿನಿಮಾದ ಎಲ್ಲಾ ವಿಂಗ್ಗಳಲ್ಲೂ ಹೀ ಈಸ್ ಫರ್ಫೆಕ್ಟ್.. ಇಂತಹ ರಂಗಭೂಮಿಯ ಪ್ರತಿಭೆ ಅಭಿನಯ ಮಾಡಿರುವ ನಿರೀಕ್ಷಿತ ಸಿನಿಮಾಗಳಲ್ಲೊಂದು ಅವತಾರ ಪುರುಷ.
ಈ ವರ್ಷ ಸ್ಯಾಂಡಲ್ವುಡ್ನ ಮಾನ್ಯ ಅಧ್ಯಕ್ಷರಾದ ಶರಣ್, ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಅವತಾರ ಪುರುಷ ಆಗಿ ಪ್ರೇಕ್ಷಕರನ್ನ ರಂಜಿಸಲಿದ್ದಾರೆ.. ಹಾಗಾದ್ರೆ ಯಾವಾಗ ಅವತಾರ ಪುರುಷ ಸಿನಿಮಾ ಸ್ಕ್ರೀನ್ ಮೇಲೆ ನೋಡೋ ಸೌಭಾಗ್ಯ ಪ್ರೇಕ್ಷಕ ಮಹಾಶಯರಿಗೆ ಅನ್ನೊ ಪ್ರಶ್ನೆಗೆ ಉತ್ತರ ಡಿಸೆಂಬರ್ 10.
ಒಂದ್ ಲೆಕ್ಕದಲ್ಲಿ ಹೇಳ ಬೇಕೆಂದ್ರೆ ಒಂದನೇ ಲಾಕ್ ಡೌನ್ಗೂ ಮುಂಚೆನೆ ಅವತಾರ ಪುರುಷ ಸಿನಿ ತೆರೆಗೆ ಬಂದು ಬಿಡ ಬೇಕಿತ್ತು.. ಆದ್ರೆ ನಾನಾ ಕಾರಣಗಳಿಂದ ಅವತಾರ ಪುರುಷನ ಅವತಾರವನ್ನ ತೆರೆಯ ಮೇಲೆ ಕಣ್ತುಬಿಂಬಿಕೊಳ್ಳಲು ಆಗಿರಲಿಲ್ಲ.. ಈಗ ರಿಲೀಸ್ ಡೇಟ್ ಫಿಕ್ಸ್ ಆಗಿದ್ದು ಭರ್ಜರಿ ಪ್ರಚಾರವನ್ನ ಮಾಡುತ್ತಿದೆ ಅವತಾರ ಪುರುಷ..
ಸಿಂಪಲ್ ಸುನಿ ನಿರ್ದೇಶನದ ಎರಡ್ ಎರಡು ಭಾಗಗಳಲ್ಲಿ ಬರುತ್ತಿರುವ ಸಿನಿಮಾ ಅವತಾರ ಪುರುಷ.. ಶರಣ್ ಜೊತೆ ಮತ್ತೊಮ್ಮೆ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಕಂಗೊಳಿಸಿದ್ರೆ ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಮಿಂಚು ಹರಿಸಲಿದ್ದಾರೆ.. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವತಾರ ಪುರುಷ ಡಿಸೆಂಬರ್ 10ನೇ ತಾರೀಖ್ ತೆರೆಕಾಣಲಿದ್ದು ಶರಣ್ ಅಭಿಮಾನಿಗಳ ಮನಸಿನಲ್ಲಿ ನಿರೀಕ್ಷೆಯ ಕಾರ್ಮೋಡ ಸೃಷ್ಟಿಸಿದೆ.. ಇನ್ನೇನು ಶೀಘ್ರದಲ್ಲೇ ಅವತಾರ ಪುರುಷ ಚಿತ್ರದ ಟ್ರೈಲರ್ ಲಾಂಚ್ ಆಗಲಿದೆ.