ಲಖನೌ: ಚುನಾವಣೆಗೋಸ್ಕರ ಮದುವೆ ಮಾಡಿಕೊಂಡಿದ್ದ ಬ್ರಹ್ಮಚಾರಿ ಇದೀಗ ನಿರಾಸೆ ಅನುಭವಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

45 ವರ್ಷದ ಹಾಥಿ ಸಿಂಗ್ ಎಂಬವರು ಬಲ್ಲಿಯಾ ಜಿಲ್ಲೆಯ ಚಪ್ರಾ ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುವ ಆಸೆ ಹೊಂದಿದ್ದರು. ಆದ್ರೆ ಆ ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ನಿರಾಸೆಗೊಳಗಾಗಿದ್ದರು. ಈ ವೇಳೆ ಕೆಲವರು ಮದುವೆ ಮಾಡಿಕೊಂಡು ಪತ್ನಿಯನ್ನ ಕಣಕ್ಕಿಳಿಸುವಂತೆ ಸಲಹೆ ನೀಡಿದ್ದರು. ಅದ್ದರಿಂದ ಬ್ರಹ್ಮಚರ್ಯವನ್ನೂ ಮುರಿದು ಮದುವೆ ಮಾಡಿಕೊಂಡು ಹಾಥಿ ಸಿಂಗ್ ತಮ್ಮ ಪತ್ನಿಯನ್ನ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದರು.

ಆದ್ರೆ ಇದೀಗ ಚುನಾವಣಾ ಫಲಿತಾಂಶ ಬಹಿರಂಗಗೊಂಡಿದ್ದು, ಹಾಥಿ ಸಿಂಗ್ ಪತ್ನಿ ನಿಧಿ ಸೋಲು ಕಂಡಿದ್ದಾರೆ.

ಇದನ್ನೂ ಓದಿ: ಚುನಾವಣೆಯಲ್ಲಿ ಮಹಿಳೆಗೆ ಮೀಸಲಾತಿ- ಪತ್ನಿಯನ್ನ ಸ್ಪರ್ಧೆಗಿಳಿಸಲೆಂದೇ ಮದುವೆಯಾದ 45ರ ವ್ಯಕ್ತಿ

The post ಚುನಾವಣೆಗೋಸ್ಕರ ಮದುವೆ ಆಗಿ, ಪತ್ನಿಯನ್ನ ಕಣಕ್ಕಿಳಿಸಿದ್ದ ವ್ಯಕ್ತಿಗೆ ನಿರಾಸೆ appeared first on News First Kannada.

Source: newsfirstlive.com

Source link