– ಜನರೇ ಕೊರೊನಾ ಜೊತೆಗೆ ಹೋರಾಡಬೇಕಿದೆ

ಬಳ್ಳಾರಿ: ಚುನಾವಣೆಯಿಂದಾಗಿ ಕೊರೊನಾ ಸೋಂಕು ಹೆಚ್ಚಳವಾಗಿದೆ ಎಂಬುದು ಸುಳ್ಳು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಮತ್ತು ಬಳ್ಳಾರಿ ಚುನಾವಣೆಯಿಂದ ಕೊರೊನಾ ಹೆಚ್ಚಳ ಆಗಿದೆ ಎಂಬುದು ಸುಳ್ಳು. ಕೊರೊನಾ ಹೆಚ್ಚಳಕ್ಕೆ ನೂರಾರು ಕಾರಣ ಇವೆ. ಜನರೇ ಕೊರೊನಾ ಜೊತೆಗೆ ಹೋರಾಡಬೇಕಿದೆ ಎಂದರು.

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಕಾಡುತ್ತಿದೆ. ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಿಎಂ ನನಗೆ ನೀಡಿದ್ದಾರೆ. ರಾಜ್ಯಕ್ಕೆ ದಿನಕ್ಕೆ 1750 ಟನ್ ಆಕ್ಸಿಜನ್ ಬೇಕಿದೆ. ಸದ್ಯ ನಮ್ಮಲ್ಲಿ 12 ನೂರಕ್ಕೆ ಹೆಚ್ಚು ಟನ್ ಆಕ್ಸಿಜನ್ ಲಭ್ಯ ಇದೆ. ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಂದಾಲ್ ಕಂಪನಿಯವರ ಜೊತೆಯಲ್ಲಿ ಸಭೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಅತಿಹೆಚ್ಚು ಆಕ್ಸಿಜನ್ ಜಿಂದಾಲ್ ನಲ್ಲಿ ಉತ್ಪಾದನೆ ಮಾಡಲಾಗ್ತಿದೆ. ಸ್ಟೀಲ್ ಉತ್ಪಾದನೆಗೆ ಆಕ್ಸಿಜನ್ ಬಳಕೆ ಕಡಿಮೆ ಮಾಡಿ ವೈದ್ಯಕೀಯ ಸೇವೆಗೆ ನೀಡುವಂತೆ ಸೂಚನೆ ನೀಡಲಾಗಿದೆ. ಜಿಂದಾಲ್ ನವರು ಸಹ ನಮ್ಮ ಮನವಿಗೆ ಸ್ಪಂದನೆ ನೀಡಿದ್ದಾರೆ. ಹೊರ ರಾಜ್ಯ ದಿಂದಲೂ ಬೇಡಿಕೆ ಹೆಚ್ಚಿದೆ. ರಾಜ್ಯದಲ್ಲಿಯೂ ಆಕ್ಸಿಜನ್ ಬೇಡಿಕೆ ದಿನೇ ದಿನೇ ಏರಿಕೆ ಆಗುತ್ತಿದೆ. ನಿರೀಕ್ಷೆ ಮೀರಿ ಸೋಂಕು ಹರಡುತ್ತಿದೆ. ಹೀಗಾಗಿ ಕೊಪ್ಪಳ ಬೆಂಗಳೂರು ಭದ್ರಾವತಿ ಯಲ್ಲಿ ಸ್ಥಗಿತಗೊಂಡ ಕಾರ್ಖಾನೆಯಲ್ಲಿ ಆಕ್ಸಿಜನ್ ಉತ್ಪಾದನೆ ಮಾಡಲು ಸೂಚನೆ ನೀಡಲಾಗಿದೆ ಎಂದು ಶೆಟ್ಟರ್ ತಿಳಿಸಿದರು.

The post ಚುನಾವಣೆಯಿಂದ ಕೊರೊನಾ ಸೋಂಕು ಹೆಚ್ಚಳವಾಗಿಲ್ಲ: ಶೆಟ್ಟರ್ appeared first on Public TV.

Source: publictv.in

Source link