ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶದ ನಂತರದ ಸ್ಥಿತಿಗತಿಗಳ ಬಗ್ಗೆ ಮಾತನಾಡಿರುವ ಅಲ್ಲಿನ ರಾಜ್ಯಪಾಲ ಜಗ್​ದೀಪ್ ಧನ್​​ಕರ್.. ರಾಜ್ಯದಲ್ಲಿ ಹಲವು ಕೊಲೆ ಹಾಗೂ ರೇಪ್ ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ.

ಅಲ್ಲದೇ ಮುಖ್ಯ ಕಾರ್ಯದರ್ಶಿ ಹೆಚ್​.ಕೆ. ದ್ವಿವೇದಿಯವರ ಬಳಿ ಕಾನೂನು ಸುವ್ಯವಸ್ಥೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ಕೇಳಿದ್ದಾಗಿ ಹೇಳಿದ್ದಾರೆ. ಮುಂದುವರೆದು ಹಿಂಸಾಚಾರದಿಂದಾಗಿ ಲಕ್ಷಾಂತರ ಜನರು ನಾಪತ್ತೆಯಾಗಿದ್ದು ನೂರಾರು ಕೋಟಿಯ ಆಸ್ತಿಪಾಸ್ತಿಯನ್ನ ನಾಶ ಮಾಡಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಲಾ ಅಂಡ್ ಆರ್ಡರ್ ಪರಿಸ್ಥಿತಿ ಕೈಮೀರಿ ಹೋಗಿದೆ. ಚುನಾವಣೆ ಫಲಿತಾಂಶದ ನಂತರ ಊಹೆಗೂ ನಿಲುಕದಂಥ ಹಿಂಸಾಚಾರ ಭುಗಿಲೆದ್ದಿದ್ದು ಎಲ್ಲೆಲ್ಲೂ ಲೂಟಿ, ಆಸ್ತಿ ಹಾನಿಯಂಥ ಘಟನೆಗಳು ವರದಿಯಾಗುತ್ತಿವೆ. ಕಾನೂನಿನ ಭಯವಿಲ್ಲದೇ ಕೆಲವು ದುಷ್ಟ ಶಕ್ತಿಗಳ ಕೈನಲ್ಲಿ ಹಲವು ಕೊಲೆ, ರೇಪ್​ಗಳು ನಡೆಯುತ್ತಿವೆ. ಜನರು ತಮ್ಮ ಮನೆಗಳಲ್ಲಿ ವಾಸಿಸಲು, ವ್ಯವಹಾರಗಳನ್ನ ನಡೆಸಲು ಸುಲಿಗೆ ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಜಗ್​ದೀಪ್ ಧನ್​ಕರ್ ಆರೋಪಿಸಿದ್ದಾರೆ.

The post ಚುನಾವಣೆ ಫಲಿತಾಂಶದ ನಂತರ ಪ. ಬಂಗಾಳದಲ್ಲಿ ಲಕ್ಷಾಂತರ ಮಂದಿ ನಾಪತ್ತೆ- ರಾಜ್ಯಪಾಲ appeared first on News First Kannada.

Source: newsfirstlive.com

Source link