ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕ್ರೇಜ್ ಮಾತ್ರ ಇಂದಿಗೂ ಕೂಡ ಕಡಿಮೆಯಾಗಿಲ್ಲ.. ಸದ್ಯ, ಪರಿಷತ್ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸದಲ್ಲಿ ಸಿದ್ದರಾಮಯ್ಯ ಬ್ಯುಸಿಯಲ್ಲಿದ್ದಾರೆ.
ಇದರ ಮಧ್ಯೆ ಪುಟ್ಟ ಬಾಲಕಿಯೊಬ್ಬಳ ಜೊತೆ ಸಿದ್ದರಾಮಯ್ಯರನ್ನ ಭೇಟಿ ಮಾಡಿ ತಮಾಷೆ ಮಾಡ್ತಾ ಕಾಲ ಕಳೆದ್ರು. ಏನ್ ನಿನ್ ಹೆಸರು ಅಂತಾ ಸಿದ್ದರಾಮಯ್ಯ ಕೇಳಿದ್ರೇ, ನನ್ನ ಹೆಸ್ರು ಸಾನ್ವಿ ಅಂದ್ಳು.. ಅದಕ್ಕೆ ಸಿದ್ದರಾಮಯ್ಯ ಏನಕ್ಕೆ ಇಲ್ಲಿಗೆ ಬಂದೇ ಅಂದಾಗ, ನಿಮ್ಮನ್ನೇ ನೋಡೋಕೆ ಬಂದೇ ಅಂತ ಸಾನ್ವಿ ಹೇಳಿದ್ಳು. ಪಕ್ಕಕ್ಕೆ ಕರೆಸ್ಕೊಂಡು ಫೋಟೋಗೆ ಸಿದ್ದರಾಮಯ್ಯ ಪೋಸ್ ಕೊಟ್ಟರು.