ಖಾನಾಪುರ: ಬೈಕ್ ಸವಾರನೊಬ್ಬ ಚೆಕ್ ಪೋಸ್ಟ್​ನಲ್ಲಿ ಅರಣ್ಯ ಹಾಗೂ ಅಬಕಾರಿ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಹೋಗಿ, ತನ್ನ ಜೊತೆಗಿದ್ದವನ ಸಾವಿಗೆ ಕಾರಣನಾಗಿದ್ದಾನೆ.

ಗೋವಾ-ಕರ್ನಾಟಕ ಗಡಿಯಲ್ಲಿನ ಖಾನಾಪೂರ ತಾಲೂಕಿನ ಅರಣ್ಯ ಚೆಕ್​ಪೋಸ್ಟ್​ ಬಳಿ ಈ ಶಾಕಿಂಗ್ ಘಟನೆ ನಡೆದಿದೆ. ಮೇ. 22ರಂದು ಅರಣ್ಯ ಸಿಬ್ಬಂದಿ ತಪಾಸಣೆ ಮಾಡುವಾಗ ದ್ವಿಚಕ್ರ ವಾಹನವೊಂದರ ಸವಾರನಿಗೆ ಗಾಡಿ ನಿಲ್ಲಿಸಲು ಸೂಚನೆ ನೀಡಿದ್ರು. ಆದ್ರೆ ವೇಗವಾಗಿ ಏಕಾಏಕಿ ಬಂದ ಬೈಕ್ ಸವಾರ ಗೇಟ್ ಓಪನ್ ಆಗದೆ ಇದ್ದರೂ ಅದರ ಕೆಳಗೆ ತೂರಿ ಹೋಗಲು ಪ್ರಯತ್ನಿಸಿದ್ದಾನೆ.

ಜೊತೆಗಿದ್ದವನು ಬಿದ್ದರೂ ತಿರುಗಿನೋಡದೇ ಹೋದ ಬೈಕ್ ಸವಾರ
ಈ ಸಂದರ್ಭದಲ್ಲಿ ಬೈಕ್ ಹಿಂಬದಿ ಕುಳಿತಿದ್ದ ಯುವಕನ ತಲೆ ಗೇಟ್​​ಗೆ ಬಡಿದಿದ್ದು ಆತ  ಕೆಳಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಆತನ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತನ್ನ ಜೊತೆಗಿದ್ದ ಹಿಂಬದಿಯ ಸವಾರ ಬಿದ್ದರೂ, ತಿರುಗಿಯೂ ನೋಡದೇ, ಬೈಕ್ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

ಈ ಎಲ್ಲಾ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್ಲೆನಿಸುವಂತಿದೆ.  ಮೃತ ವ್ಯಕ್ತಿಯ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

The post ಚೆಕ್​ಪೋಸ್ಟ್​​ ತಪ್ಪಿಸಿಕೊಳ್ಳಲು ಹೋಗಿ ದುರಂತ, ಬೈಕ್ ಹಿಂಬದಿ ಸವಾರ ಕೆಳಗೆ ಬಿದ್ದು ಸಾವು appeared first on News First Kannada.

Source: newsfirstlive.com

Source link