ಚೆನ್ನಾಗಿ ನಿದ್ರೆ ಮಾಡಬೇಕಾದರೆ, ಹಾಸಿಗೆಗೆ ತೆರಳುವ 4-5 ಗಂಟೆ ಮೊದಲು ರಾತ್ರಿಯೂಟ ಸೇವಿಸಬೇಕು: ಡಾ ಸೌಜನ್ಯ ವಶಿಷ್ಠ | For a sound sleep dinner should be had 4 5 hour before bedtime says Dr Soujanya Vashishtha


ನಿಮ್ಮ ಸ್ನೇಹಿತರು, ಕುಟುಂಬದ ಸದಸ್ಯರು ಸಾಮಾನ್ಯವಾಗಿ ಒಂದು ಮಾತು ಹೇಳುತ್ತಿರುತ್ತಾರೆ. ಯಾಕೋ ಏನೋ ರಾತ್ರಿ ಸರಿಯಾಗಿ ನಿದ್ರೆನೇ ಆಗ್ತಿಲ್ಲ, ಎಷ್ಟೇ ಒದ್ದಾಡಿದರೂ ನಿದ್ರೆ ಹತ್ತಿರಕ್ಕೂ ಸುಳಿಯಲ್ಲ ಅನ್ನುತ್ತಿರುತ್ತಾರೆ. ಇನ್ಸೋಮ್ನಿಯಾ ಅಥವಾ ನಿದ್ರಾಹೀನತೆ ಒಂದು ವೈದ್ಯಕೀಯ ಪದ, ಅದನ್ನು ವೈದ್ಯರು ಸರಿಮಾಡುತ್ತಾರೆ. ಆದರೆ, ನಾವು ಪ್ರತಿದಿದ ಸಮೃದ್ಧಿಯಾದ ನಿದ್ರೆಯನ್ನು ಹೇಗೆ ಮಾಡುವುದು, ನಿದ್ರೆಗೆ ನಮ್ಮ ಸಿದ್ಧತೆ ಹೇಗಿರಬೇಕು ಅನ್ನೋದನ್ನು ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಈ ಸಂಚಿಕೆಯಲ್ಲಿ ವಿವರಿಸಿದ್ದಾರೆ. ನಿದ್ರೆ ನಮ್ಮ ದೈನಂದಿನ ಬದುಕಿನ ಒಂದು ಮಹತ್ತರ ಮತ್ತು ಪ್ರಮುಖ ಆಯಾಮ. ನಮಗೆ ಪ್ರತಿದಿನ ಕನಿಷ್ಟ 6-7 ಗಂಟೆಗಳಷ್ಟು ನಿದ್ರೆ ಬೇಕೇಬೇಕು ಅಂತ ಅವರು ಹೇಳುತ್ತಾರೆ.

ರಾತ್ರಿಯೂಟ ನಾವು ಮಲಗುವ ಸಮಯಕ್ಕಿಂತ 4-5 ಗಂಟೆ ಮೊದಲು ಸೇವಿಸಬೇಕು, ಅಗಲೇ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ ಎಂದು ಸೌಜನ್ಯ ಹೇಳುತ್ತಾರೆ. ಹಾಗೆಯೇ, ಹಾಸಿಗೆಗೆ ಹೋಗುವ ಮುನ್ನ ಒಂದು ಲೋಟ ಬಿಸಿನೀರು (ಉಗುರುಬಿಸಿ) ನೀರು ಕುಡಿಯಬೇಕು.

ಮಲಗಲು ಹೋಗುವ ಒಂದು ಗಂಟೆ ಮೊದಲು ಮೊಬೈಲ್ ಪೋನ್ ಮತ್ತು ಇತರ ಗ್ಯಾಜೆಟ್​ಗಳಿಂದ ದೂರವಾಗಬೇಕು. ಅ ಒಂದು ಗಂಟೆಯ ಅವಧಿಯನ್ನು ನಿದ್ರೆಗೆ ಸಿದ್ಧತೆ ಮಾಡಿಕೊಳ್ಳಲು ಉಪಯೋಗಿಸಬೇಕು ಎನ್ನುತ್ತಾರೆ ಡಾ ಸೌಜನ್ಯ.

ಮಲಗಲು ಹೋಗುವ ಮುನ್ನ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ. ಸ್ನಾನ ಮಾಡಿದರೆ ದೇಹ ಮತ್ತು ಮನಸ್ಸು ಹಗುರವಾಗುತ್ತವೆ. ಹಾಸಿಗೆ ಮೇಲೆ ಒರಗಿದ ಬಳಿಕ ದಿನದಲ್ಲಿ ನಡೆದ 10 ಸಂತೋಷಕರ ಸಂಗತಿಗಳನ್ನು ಮೆಲಕು ಹಾಕಬೇಕು.

ಒಂದೈದು ನಿಮಿಷ ಪ್ರಾಣಯಾಮ, ಯೋಗ ಮಾಡಿದರೆ ಒಳ್ಳೆಯ ನಿದ್ರೆಗೆ ಸಹಕಾರಿ ಎಂದು ಡಾ ಸೌಜನ್ಯ ಹೇಳುತ್ತಾರೆ. ಯಾವುದಾದರೂ ಯೋಚನೆ ಕಾಡಲಾರಂಭಿಸಿದರೆ, ಅದನ್ನು ಬೆಳಗ್ಗೆಗೆ ಮುಂದೂಡುವ ಪ್ರಯತ್ನ ಮಾಡಬೇಕು.

ನಿದ್ರೆ ಬರುವ ಲಕ್ಷಣಗಳು ಕಾಣದಿದ್ದರೆ, ಎದ್ದು ಕೂತು ದೀರ್ಘವಾಗಿ ಶ್ವಾಸ ತೆಗೆದುಕೊಂಡು ಬಿಡುವುದನ್ನು ಮಾಡಬೇಕಂತೆ. ಹಾಗೆ ಮಾಡುವಾಗ ಐ ಯಾಮ್ ನಾಟ್ ದಿ ಬಾಡಿ, ಐ ಯಾಮ್ ನಾಟ್ ದಿ ಮೈಂಡ್ ಅಂದುಕೊಳ್ಳುತ್ತಿರಬೇಕು ಅಂತ ಅವರು ಹೇಳುತ್ತಾರೆ.

ಇದನ್ನೂ ಓದಿ:   ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ ರಾಜ್​ಕುಮಾರ್​; ಇಲ್ಲಿದೆ ವಿಡಿಯೋ

TV9 Kannada


Leave a Reply

Your email address will not be published. Required fields are marked *