ನವದೆಹಲಿ: ತಮಿಳುನಾಡಿನಲ್ಲಿ ಭಾರೀ ಮಳೆ ಹಿನ್ನೆಲೆ ದುಬೈನಿಂದ ಚೆನ್ನೈಗೆ ಹೋಗಬೇಕಿದ್ದ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಮಾತ್ರವಲ್ಲ ಚೆನ್ನೈಗೆ ಹೋಗಬೇಕಿದ್ದ ಹಲವು ವಿಮಾನಗಳನ್ನ ಬೇರೆಕಡೆ ಡೈವರ್ಟ್ ಮಾಡಲಾಗಿದೆ.
ಚೆನ್ನೈ ಏರ್ಪೋಟ್ನಲ್ಲಿ ಭಾರೀ ಮಳೆಯಿಂದಾಗಿ ಲ್ಯಾಂಡಿಂಗ್ ಸಮಸ್ಯೆ ಕಂಡುಬಂದ ಕಾರಣ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ. ಇನ್ನೂ ಪ್ರಯಾಣಿಕರಿಗೆ ಏರ್ಲೈನ್ಸ್ ವತಿಯಿಂದ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಸುಮಾರು 40 ಜನ ಪ್ರಯಾಣಿಕರು ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ.
ಇವತ್ತು ಕೂಡ ತಮಿಳುನಾಡಲ್ಲಿ ಮಳೆರಾಯ ಆರ್ಭಟಿಸಿದ್ದು, ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಭಾರೀ ಮಳೆಗೆ ಜನ ನಲುಗಿ ಹೋಗಿದ್ದಾರೆ. ತಿರುವಳ್ಳೂರು, ಚೆನ್ನೈ, ಚೆಂಗಲ್ಪಟ್ಟುಮತ್ತು ಕಾಂಚೀಪುರಂ ಸೇರಿದಂತೆ ತಮಿಳುನಾಡಿನ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಭಾರೀ ಮಳೆಗೆ ನಗರದ ಹಲವೆಡೆ ಮನೆಗಳೆಲ್ಲ ಜಲಾವೃತವಾಗಿದೆ. ಇತ್ತ ವಿದ್ಯೂತ್ ಸಂಪರ್ಕ ಇಲ್ಲದೆ, ಊಟವೂ ಇಲ್ಲದೇ ಜನ ನಲುಗಿಹೋಗಿದ್ದಾರೆ. ಅಲ್ಲದೆ ಮುಂದಿನ ಎರಡು ದಿನಗಳ ಕಾಲ ರಾಜ್ಯದ್ಯಂತ ಮಳೆಯಾಗುವ ಸಾಧ್ಯತೆಗಳಿವೆ. ಸದ್ಯ ರಣ ಭೀಕರ ಮಳೆಗೆ ಈವರೆಗೂ ಮೃತಪಟ್ಟಿರುವವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇನ್ನು ಮಳೆಯ ಅವಾಂತರಕ್ಕೆ 530 ಮನೆಗಳಿಗೆ ಹಾನಿಯಾಗಿದ್ದು, ಹಲವೆಡೆ ಅದೆಷ್ಟೋ ಗುಡಿಸಲುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.