ಇಂಡಿಯನ್ ಪ್ರೀಮಿಯರ್ ಲೀಗ್ 15 ಸೀಸನ್ಗೆ ಚೆನ್ನೈ ಸೂಪರ್ ಕಿಂಗ್ಸ್ ರಿಟೈನ್ ಮಾಡಿಕೊಂಡಿದೆ. ದಲ ರಿಟೈನ್ ಆಟಗಾರನಾಗಿ ಜಡೇಜಾಗೆ 16 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ. ಜಡೇಜಾ ಸಿಎಸ್ಕೆಗೆ ಭವಿಷ್ಯದ ನಾಯಕ ಸ್ಥಾನದ ಪ್ರಬಲ ಸ್ಪರ್ಧಿ. ಹೀಗಾಗಿಯೇ ರವೀಂದ್ರ ಜಡೇಜಾ ಅವರಿಗೆ ಫ್ರಾಂಚೈಸಿ ಪ್ರಾಮುಖ್ಯತೆ ನೀಡಿದೆ.
ಧೋನಿ ಅವರನ್ನು 2ನೇ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದ್ದು, 12 ಕೋಟಿ ರೂ. ಪಡೆದಿದ್ದಾರೆ. ಈ ಮೂಲಕ ಧೋನಿ ಐಪಿಎಲ್ನಲ್ಲಿ ಆಡುವುದು ಕೂಡ ಖಚಿತವಾಗಿದೆ.
ಮೊಯಿನ್ ಅಲಿ 3ನೇ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಇವರಿಗೆ 8 ಕೋಟಿ ನೀಡಲಾಗಿದೆ. ರುತುರಾಜ್ ಗಾಯಕ್ವಾಡ್ 6 ಕೋಟಿ ರೂ. ಪಡೆದಿದ್ದಾರೆ. ಅಲ್ಲದೇ ಸ್ಟಾರ್ ಆಟಗಾರ ಸುರೇಶ್ ರೈನಾ, ಫಾಫ್ ಡು ಪ್ಲೆಸಿಸ್ಗೆ ಕೊಕ್ ನೀಡಲಾಗಿದೆ.
The post ಚೆನ್ನೈ ತಂಡದಿಂದ ಸುರೇಶ್ ರೈನಾ ಸೇರಿ ಹಲವು ಸ್ಟಾರ್ ಆಟಗಾರರಿಗೆ ಕೊಕ್ appeared first on News First Kannada.