ಚೆನ್ನೈ ಮಹಿಳಾ ಪೊಲೀಸ್ ಅಧಿಕಾರಿ ರಕ್ಷಿಸಿದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು | A day after being rescued by a woman cop inspector Rajeshwari Man dies at hospital


ಚೆನ್ನೈ ಮಹಿಳಾ ಪೊಲೀಸ್ ಅಧಿಕಾರಿ ರಕ್ಷಿಸಿದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ರಕ್ಷಿಸುತ್ತಿರುವ ಪೊಲೀಸ್ ಅಧಿಕಾರಿ ರಾಜೇಶ್ವರಿ

ಚೆನ್ನೈ: ಮಹಿಳಾ ಪೊಲೀಸ್ ರಕ್ಷಿಸಿದ ಒಂದು ದಿನದ ನಂತರ, 25 ವರ್ಷದ ಉದಯ ಕುಮಾರ್ (Udhaya Kumar ) ಶುಕ್ರವಾರ ಬೆಳಿಗ್ಗೆ ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಿಧನರಾದರು. ಗುರುವಾರ ಟಿ.ಪಿ.ಛಾತಿರಾಮ್‌ನ (TP Chathiram) ಇನ್ಸ್‌ಪೆಕ್ಟರ್ ರಾಜೇಶ್ವರಿ (Rajeshwari)ಅವರು ಉದಯನನ್ನು ರಕ್ಷಿಸಿದ್ದಾರೆ. ಬೇರು ಮುರಿದು ರಸ್ತೆಯಲ್ಲಿ ಬಿದ್ದ ಮರಗಳನ್ನು ತೆರವು ಮಾಡುತ್ತಿದ್ದ ವೇಳೆ ರಾಜೇಶ್ವರಿ ಅವರಿಗೆ ವ್ಯಕ್ತಿಯೊಬ್ಬರು ಸ್ಮಶಾನದಲ್ಲಿ  ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಕರೆ ಬಂತು. ಆ ವ್ಯಕ್ತಿಯನ್ನು ಉಳಿಸಬಹುದೆಂಬ ನಂಬಿಕೆಯಿಂದ ರಾಜೇಶ್ವೇರಿ ಅಲ್ಲಿಗೆ ಧಾವಿಸಿದ್ದರು. ಚೆನ್ನೈನಲ್ಲಿ (Chennai Rains) ಎಡೆಬಿಡದೆ ಸುರಿದ ಮಳೆಗೆ ಮೈ ಮೇಲೆ ಮರ ಬಿದ್ದು ಆ ವ್ಯಕ್ತಿ ಪ್ರಜ್ಞಾಹೀನರಾಗಿದ್ದರು. ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡಿದ್ದ ಆಟೋರಿಕ್ಷಾ ಬಳಿಗೆ ತಲುಪಬೇಕಾದರೆ ಮಹಿಳಾ ಪೊಲೀಸ್ ಅಧಿಕಾರಿ ಪ್ರಜ್ಞಾಹೀನ ವ್ಯಕ್ತಿಯನ್ನು ತನ್ನ ಹೆಗಲ ಮೇಲೆ ಹೊತ್ತು ಕೊಂಡು ಹೋಗಿದ್ದಾರೆ. ರಾಜೇಶ್ವರಿ ಅವರು ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತು ಕೊಂಡು ಹೋಗುತ್ತಿದ್ದು ಆಟೋದಲ್ಲಿ  ಇಬ್ಬರನ್ನು ಕೂರಿಸಿ  ಈ ವ್ಯಕ್ತಿಯನ್ನು ಬದುಕಿಸಿ, ಬೇಗ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಹೋದ್ಯೋಗಿಗಳಿಗೆ ಕೂಗಿ ಹೇಳುತ್ತಿರುವ ವಿಡಿಯೊ ವೈರಲ್ ಆಗಿದೆ. ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತೊಯ್ದ ಪೊಲೀಸ್ ಅಧಿಕಾರಿಯನ್ನು ಜನರು ಶ್ಲಾಘಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶುಕ್ರವಾರ ರಾಜೇಶ್ವರಿ ಅವರ ಸಾಹಸಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಘಟನೆ ಬಗ್ಗೆ ಇನ್​​ಸ್ಪೆಕ್ಟರ್ ರಾಜೇಶ್ವರಿ ಹೇಳಿದ್ದೇನು? 
ನಾನು ಪ್ರಥಮ ಚಿಕಿತ್ಸೆ ನೀಡಿದ ನಂತರ ನಾನು ಅವನನ್ನು ಹೊತ್ತೊಯ್ದಿದ್ದೇನೆ. ಅಲ್ಲಿಗೆ ಒಂದು ಆಟೋ ಬಂತು, ನಾವು ಅವನನ್ನು ಆಸ್ಪತ್ರೆಗೆ ಕಳುಹಿಸಿದ್ದೇವೆ. ನಾನು ಆಸ್ಪತ್ರೆಗೆ ಭೇಟಿ ನೀಡಿದ್ದೆ, ಅವರ ತಾಯಿ ಅಲ್ಲಿದ್ದರು. ಚಿಂತಿಸಬೇಡಿ ಮತ್ತು ಪೊಲೀಸ್ ಇಲಾಖೆ ಅವರಿಗೆ ಬೆಂಬಲ ನೀಡುತ್ತದೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಚಿಕಿತ್ಸೆ ಮುಂದುವರಿದಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು  ಇನ್ಸ್‌ಪೆಕ್ಟರ್ ರಾಜೇಶ್ವರಿ ಗುರುವಾರ ಹೇಳಿದ್ದಾರೆ .

ಇನ್ಸ್ ಪೆಕ್ಟರ್ ರಾಜೇಶ್ವರಿ ಅವರು ಉತ್ತಮ ಕೆಲಸ ಮಾಡಿದ್ದಾರೆ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಪ್ರಜ್ಞಾಹೀನ ವ್ಯಕ್ತಿಯನ್ನು ಆಕೆಯೇ ಎತ್ತಿ ಆಸ್ಪತ್ರೆಗೆ ಕಳುಹಿಸಿದಳು. ಚಿಕಿತ್ಸೆ ನಡೆಯುತ್ತಿದೆ, ಅವರು ಚೆನ್ನಾಗಿದ್ದಾರೆ. ಅವರು ಅತ್ಯುತ್ತಮ ಅಧಿಕಾರಿಯಾಗಿದ್ದಳು. ಎಲ್ಲಾ ಕೀರ್ತಿಯೂ ಆಕೆಗೆ ಸಲ್ಲುತ್ತದೆ ಎಂದು ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಶ್ಲಾಘಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ಗುರುವಾರ ಟ್ವೀಟ್ ಮಾಡಿದೆ.

ಇದನ್ನೂ ಓದಿ: Video: ಸ್ಮಶಾನದಲ್ಲಿ ಎಚ್ಚರವಿಲ್ಲದೆ ಬಿದ್ದಿದ್ದವನ ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಪೊಲೀಸ್​ ಅಧಿಕಾರಿ; ಚೆನ್ನೈ ಮಳೆ ಮಧ್ಯೆ ಮನಕಲಕುವ ದೃಶ್ಯ

ಇದನ್ನೂ ಓದಿ: Swara Bhasker: ನಿಮಗಿಂತ ನಮ್ಮ ಮನೆ ಕೆಲಸದಾಕೆ ಚೆನ್ನಾಗಿದ್ದಾಳೆ ಎಂದು ಕೀಳು ದರ್ಜೆಯ ಕಾಮೆಂಟ್ ಮಾಡಿದವನಿಗೆ ಖಡಕ್ ಉತ್ತರ ನೀಡಿದ ನಟಿ

TV9 Kannada


Leave a Reply

Your email address will not be published. Required fields are marked *