ಚೆನ್ನೈ: ಅಳಿವಿನಂಚಿನಲ್ಲಿರುವ 10 ಆಸ್ಟ್ರಿಚ್ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಚೆನ್ನೈನ ವಂದಲೂರು ಅರಿಗ್ನರ್ ಅಣ್ಣಾ ಜೂಲಾಜಿಕಲ್ ಪಾರ್ಕ್‌ನಲ್ಲಿ ನಡೆದಿದೆ.
ಕಳೆದ ಅಕ್ಟೋಬರ್ 27 ರಂದು ಐದು ಆಸ್ಟ್ರಿಚ್‌ಗಳು ಇದ್ದಕ್ಕಿದ್ದಂತೆ ಸಾವನ್ನಪಿದ್ದವು. ಇದಾದ ಬಳಿಕ ಅದೇ ರೀತಿ ಮತ್ತೈದು ಆಸ್ಟ್ರಿಚ್‌ಗಳು ಸಾವನ್ನಪ್ಪಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲವಾದ್ದರಿಂದ ಪಕ್ಷಿಗಳ ಸಾವಿನ ಕುರಿತಾಗಿ ಸಾಕಷಷ್ಟು ಅನುಮಾನಗಳು ವ್ಯಕ್ತವಾಗಿವೆ. ಸಾವಿಗೆ ನಿಖರ ಕಾರಣ ತಿಳಿಯಲು ಮೃತ ಪಕ್ಷಿಗಳ ರಕ್ತದ ಮಾದರಿಗಳನ್ನು ಭೂಪಾಲ್‌ನ ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸಿಸಸ್ ಕೇಂದ್ರಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ:ಕಾಡಿದ ಪತ್ನಿ ನೆನಪುಗಳು.. ಅಗಲಿದ ಮಡದಿಯ ಮೂರ್ತಿ ಪ್ರತಿಷ್ಠಾಪಿಸಿದ ಪತಿ..!
ಪಕ್ಷಿಗಳಿಗೆ ಕೆಲ ದಿನಗಳ ಹಿಂದೆ ಕೋವಿಡ್ ತಗುಲಿತ್ತು ಎನ್ನಲಾಗಿತ್ತು. ಆದರೆ ಆಸ್ಟ್ರಿಚ್‌ಗಳಿಗೆ ಕೊರೊನಾ ಸೋಂಕು ಇರುವುದನ್ನು ತಜ್ಞರು ತಳ್ಳಿ ಹಾಕಿದ್ದಾರೆ ಅಂತ ತಮಿಳುನಾಡು ಸರ್ಕಾರ ಹೇಳಿದೆ. ಪಾರ್ಕ್‌ನಲ್ಲಿ ಸದ್ಯ 27 ಆಸ್ಟ್ರಿಚ್‌ಗಳಿದ್ದು, ಅವುಗಳನ್ನು ರಕ್ಷಿಸಲು ಕ್ರಮ ವಹಿಸಲಾಗಿದೆ ಅಂತ ಪಾರ್ಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.