ಚೆನ್ನೈ ಮೃಗಾಲಯದಲ್ಲಿ 4 ಸಿಂಹಗಳಿಗೆ ಡೆಲ್ಟಾ ತಳಿ ಕೊರೊನಾ ಸೋಂಕು

ಚೆನ್ನೈ ಮೃಗಾಲಯದಲ್ಲಿ 4 ಸಿಂಹಗಳಿಗೆ ಡೆಲ್ಟಾ ತಳಿ ಕೊರೊನಾ ಸೋಂಕು

ಚೆನ್ನೈನ ಝೂನಲ್ಲಿ ಸಿಂಹಗಳಲ್ಲಿ ಡೆಲ್ಟಾ ರೂಪಾಂತರಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇಲ್ಲಿನ ವಂಡಲೂರ್​ನಲ್ಲಿರೋ ಅರಿಗ್ನಾರ್​ ಅಣ್ಣ ಮೃಗಾಲಯದ 4 ಸಿಂಹಗಳಿಂದ ಸ್ಯಾಂಪಲ್ ಸಂಗ್ರಹಿಸಿ ಜೀನೋಮ್ ಸೀಕ್ವೆನ್ಸಿಂಗ್ ಅನಾಲಿಸಿಸ್​ ಮಾಡಲಾಗಿದೆ. ಈ ವೇಳೆ ಎಲ್ಲಾ ನಾಲ್ಕು ಸಿಂಹಗಳಲ್ಲಿ ಡೆಲ್ಟಾ ತಳಿ (B.1.617.2) ಕೋವಿಡ್​ ಸೋಂಕು ಇರೋದು ದೃಢಪಟ್ಟಿದೆ.

ಮೇ 24ರಂದು ಮೃಗಾಲಯದ 4 ಸಿಂಹಗಳ ಮಾದರಿ ಮತ್ತು 29ರಂದು 7 ಸಿಂಹಗಳ ಸ್ಯಾಂಪಲ್​ಗಳು ಸೇರಿ ಒಟ್ಟು 11 ಸಿಂಹಗಳ ಮಾದರಿಗಳನ್ನು ಭೋಪಾಲ್​ನ ಐಸಿಎಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸಸ್​​ಗೆ ಕಳಿಸಲಾಗಿತ್ತು. ಅಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಮಾಡಿದಾಗ, ನಾಲ್ಕು ಸೀಕ್ವೆನ್ಸ್​ಗಳು ಪ್ಯಾಂಗೊಲಿನ್(ಚಿಪ್ಪುಹಂದಿ) ವಂಶಾವಳಿಗೆ ಸೇರಿದ್ದು ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ ಡೆಲ್ಟಾ ತಳಿ ಎಂದು ತಿಳಿದುಬಂದಿದೆ ಅಂತ ಮೃಗಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

 

The post ಚೆನ್ನೈ ಮೃಗಾಲಯದಲ್ಲಿ 4 ಸಿಂಹಗಳಿಗೆ ಡೆಲ್ಟಾ ತಳಿ ಕೊರೊನಾ ಸೋಂಕು appeared first on News First Kannada.

Source: newsfirstlive.com

Source link