ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ಕನ್ನಡಿಗ ರಾಹುಲ್ ಭರ್ಜರಿ ಆಟ.. ಪಂಜಾಬ್​ಗೆ ಗೆಲುವು

ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹಣಾಹಣಿ ಏರ್ಪಟ್ಟಿತ್ತು. ಮೊದಲಿಗೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್.. ಚೆನ್ನೈ ಸೂಪರ್ ಕಿಂಗ್ಸ್​ನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು.

ಚೆನ್ನೈ ತಂಡ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿತ್ತು. 135 ರನ್​ಗಳ ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ 13 ಓವರ್​ಗಳಲ್ಲೇ 4 ವಿಕೆಟ್ ಕಳೆದುಕೊಂಡು 139 ರನ್​ ಗಳಿಸುವ ಮೂಲಕ ಚೆನ್ನೈ ಟೀಂನ್ನು ಮಣಿಸಿತು.

ಚೆನ್ನೈ ಪರ ರುತುರಾಜ್ ಗಾಯ್ಕ್​ವಾಡ್ 12, ಡುಪ್ಲೆಸಿಸ್ 76, ಉತ್ತಪ್ಪ 2, ರಾಯುಡು 4, ಧೋನಿ 12, ರವೀಂದ್ರ ಜಡೇಜಾ 15 ಮತ್ತು ಬ್ರಾವೊ 4 ರನ್ ಗಳಿಸಿದ್ರು.

ಇನ್ನು ಪಂಜಾಬ್ ಪರ ರಾಹುಲ್ 98, ಮಯಾಂಕ್ ಅಗರ್​ವಾಲ್ 12, ಶಾರೂಖ್ ಖಾನ್ 8, ಐಡೆನ್ ಮರ್ಕ್​ರಮ್ 13, ಮೊಯಿಸೆಸದ ಹೆನ್ರಿಕ್ಸ್ 3 ರನ್ ಗಳಿಸಿದ್ರು.

The post ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ಕನ್ನಡಿಗ ರಾಹುಲ್ ಭರ್ಜರಿ ಆಟ.. ಪಂಜಾಬ್​ಗೆ ಗೆಲುವು appeared first on News First Kannada.

News First Live Kannada

Leave a comment

Your email address will not be published. Required fields are marked *