ನಟ ಗಣೇಶ್‌ ಅವರ “ಚೆಲ್ಲಾಟ’ ಚಿತ್ರ ಬಿಡುಗಡೆಯಾಗಿ ಏ.21ಕ್ಕೆ 15 ವರ್ಷವಾಗಿದೆ. ಎಂ.ಡಿ. ಶ್ರೀಧರ್‌ ನಿರ್ದೇಶನದ ಈ ಚಿತ್ರದ ಮೂಲಕ ಗಣೇಶ್‌ ನಾಯಕರಾಗಿ ಎಂಟ್ರಿ ಕೊಟ್ಟಿದ್ದು, ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗುವ ಮೂಲಕ ಗಣೇಶ್‌ ಕೆರಿಯರ್‌ಗೆ ಭದ್ರ ಬುನಾದಿ ಹಾಕಿಕೊಟ್ಟಿತು. ಚಿತ್ರಕ್ಕೆ 15 ವರ್ಷ ಆದ ಹಿನ್ನೆಲೆಯಲ್ಲಿ ಗಣೇಶ್‌ ಟ್ವೀಟ್‌ ಮಾಡಿದ್ದಾರೆ.

“ಚೆಲ್ಲಾಟ ಬಿಡುಗಡೆಯಾಗಿ ಇಂದಿಗೆ ಹದಿನೈದು ವಸಂತಗಳು. ನಿಮ್ಮ ಅಭಿಮಾನದ ಆರೈಕೆಯಲ್ಲಿ ಬೆಳೆದವನು ನಾನು. ಇದೇ ಪ್ರೀತಿ,ಅಭಿಮಾನ ನನಗೆ ಆಶೀರ್ವಾದ ವಾಗಿರಲಿ.ಕೊರೋನಾ ಸಂಕಷ್ಟದಲ್ಲಿ ಜೋಪಾನವಾಗಿರೋಣ. ಇತರರ ಕಷ್ಟಗಳಿಗೆ ಸ್ಪಂದಿಸೋಣ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:ಕಲಾವಿದರೆಲ್ಲರೂ ಒಂದೇ ಎನ್ನುತ್ತಿದ್ದರು ಅಣ್ಣಾವ್ರು

ಸದ್ಯ ಗಣೇಶ್‌ ಕೈಯಲ್ಲಿ “ಗಾಳಿಪಟ-2′, “ಸಖತ್‌’, “ತ್ರಿಬಲ್‌ ರೈಡಿಂಗ್‌’ ಸೇರಿದಂತೆ ಇನ್ನು ಕೆಲವು ಸಿನಿಮಾಗಳಿವೆ. ಸದ್ಯ ಚೆಲ್ಲಾಟ ಚಿತ್ರ 15 ವರ್ಷ ಪೂರೈಸಿದ ಸಂಭ್ರಮದಲ್ಲಿ ಕನ್ನಡ ಚಿತ್ರರಂಗದ ನಿರ್ದೇಶಕರಾದ ಸಿಂಪಲ್‌ ಸುನಿ, ನಟ ಪ್ರೇಮ್‌ ಸೇರಿದಂತೆ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರಿಗೆ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಪೋಟೋ ಗ್ಯಾಲರಿ

ಸಿನೆಮಾ – Udayavani – ಉದಯವಾಣಿ
Read More