ತಮ್ಮ ನಟನೆ, ವ್ಯಕ್ತಿತ್ವ ಹಾಗೇ ಸಮಾಜ ಸೇವೆಯಿಂದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿರುವ ನಟ ಕಿಚ್ಚ ಸುದೀಪ್​, ಇದೀಗ ಮಾಜಿ ಚೆಸ್​ ಗ್ರ್ಯಾಂಡ್​ ಮಾಸ್ಟರ್ ವಿಶ್ವನಾಥನ್​ ಆನಂದ್​​​ ಜೊತೆ ಪೈಪೋಟಿಗೆ ರೆಡಿಯಾಗಿದ್ದಾರೆ. ಕಿಚ್ಚನ ಅಭಿಮಾನಿಗಳಿಗೆ ಸುದೀಪ್​ ಕ್ರಿಕೆಟ್​ನಲ್ಲಿ ಸೂಪರ್​ ಅಂತ ಗೊತ್ತಿತ್ತು, ಆದ್ರೆ ಚೆಸ್​ ಕೂಡ ಆಡ್ತಾರೆ ಅನ್ನೋ ಮಾಹಿತಿಯೇ ಇರಲಿಲ್ಲ. ಆದ್ರೆ ಅಸಲಿಗೆ ಕಿಚ್ಚ ಸುದೀಪ್​ ತಮಗೆ ಬಿಡುವಾದಾಗಲೆಲ್ಲಾ ಚೆಸ್​ ಆಡ್ತಾರೆ. ಅದೂ ತಮ್ಮ ಮನೆಯಲ್ಲೇ ಇರುವಂತ ಚಾಂಪಿಯನ್​ ಜೊತೆ.

ಹೌದು..ಕಿಚ್ಚ ಸುದೀಪ್​ ಪತ್ನಿ ಪ್ರಿಯಾ ಸುದೀಪ್​ ಚೆಸ್​​ ಆಟವನ್ನ ಬಹಳ ಚೆನ್ನಾಗಿಯೇ ಆಡ್ತಾರಂತೆ. ಇದೀಗ ಇಷ್ಟು ಕಾಲ ಪ್ರಿಯಾ ಜೊತೆ ಆಡಿದ ಚೆಸ್​ ಆಟ, ಸುದೀಪ್​ರಿಗೆ ಇಂದು ಗ್ರ್ಯಾಂಡ್​ ಮಾಸ್ಟರ್​ ವಿಶ್ವನಾಥನ್​ ಆನಂದ್​ ಜೊತೆ ಆಡೋದಕ್ಕೆ ಹೆಲ್ಪ್​ ಮಾಡುತ್ತಾ ನೋಡ್ಬೇಕು. ಇಂದು ಸಂಜೆ 5 ಗಂಟೆಯಿಂದ 8 ಗಂಟೆಯವರೆಗೂ ಇವರಿಬ್ಬರ ಮಧ್ಯೆ ಚೆಸ್​ನಲ್ಲಿ ಪೈಪೋಟಿ ನಡೆಯಲಿದೆ.

ಅಂದ್ಹಾಗೇ, ಕೋವಿಡ್​ ರಿಲೀಫ್​​ಗೆ ಫಂಡಿಂಗ್​ ಮಾಡುವುದಕ್ಕಾಗಿ ಅಕ್ಷಯ ಪಾತ್ರ ಫೌಂಡೇಶನ್​ ಹಾಗೂ ಚೆಸ್​.com ಈ ಕಾರ್ಯಕ್ರಮವನ್ನ ಆಯೋಜಿಸಿದೆ. ಈ ಕಾರ್ಯಕ್ರಮದಿಂದ ಬಂದಂತ ಹಣವನ್ನ ಕೊರೊನಾದಿಂದ ಸಂಕಷ್ಟದಲ್ಲಿರುವವರಿಗೆ ನೀಡಲು ಹಾಗೇ ಹಸಿದವರಿಗೆ ಊಟ ನೀಡಲು ಬಳಸಲಾಗುತ್ತದೆ ಅಂತ ಹೇಳಲಾಗ್ತಿದೆ. ಈಗಾಗಲೇ ಬಾಲಿವುಡ್​ ನಟ ಆಮೀರ್​ ಖಾನ್​​ ಗ್ರ್ಯಾಂಡ್​ ಮಾಸ್ಟರ್​ ಜೊತೆ ಚೆಸ್​ ಆಡಿದ್ದಾರೆ. ಕಿಚ್ಚನ ನಂತರ ಬಾಲಿವುಡ್​ ನಟ ರಿತೇಶ್​ ದೇಶ್​ಮುಖ್​, ಗಾಯಕ ಅರಿಜೀತ್​ ಸಿಂಗ್​, ಕ್ರಿಕೆಟರ್​ ಯಜುವೇಂದರ್​ ಚಹಲ್​, ನಿರ್ಮಾಪಕ ಸಾಜಿದ್​ ನಡಿಯಾದ್​ವಾಲಾ ಹಾಗೂ ಇನ್ನೂ ಹಲವು ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ.

ಇನ್ನು ಈಗಾಗಲೇ ನಟ ಕಿಚ್ಚ ಸುದೀಪ್​ ತಮ್ಮ ಕಿಚ್ಚ ಸುದೀಪ್​ ಚಾರಿಟೇಬಲ್​ ಸೊಸೈಟಿ ಮೂಲಕ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ, ಸಿನಿಮಾ ಕಲಾವಿದರಿಗೆ, ಹಿರಿಯ ಕಲಾವಿದರಿಗೆ, ದಿನಸಿ, ತರಕಾರಿ ಹಾಗೂ ಹಣಕಾಸಿನ ಸಹಾಯವನ್ನೂ ಮಾಡಿದ್ದಾರೆ.

The post ಚೆಸ್​​ ಕಿಂಗ್ ವಿಶ್ವನಾಥನ್ ಆನಂದಗೆ ಚೆಕ್​ಮೇಟ್ ಅಂತಾರಾ ಕಿಚ್ಚ ಸುದೀಪ್?! appeared first on News First Kannada.

Source: newsfirstlive.com

Source link